ಹೆಲಿಕಾಪ್ಟರ್ ರೈಡ್ ಸೇವೆ ಆರಂಭ‌, ಪ್ರಯಾಣಿಕರಿಂದ ಉತ್ತಮ‌ ಸ್ಪಂದನೆ

0
34

ಕಲಬುರಗಿ,ಫೆ.25: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಕೆ.ಕೆ.ಆರ್.ಡಿ.ಬಿ ಮಂಡಳಿಯು ಏರೋಹಬ್ ಏವಿಯೇಷನ್ ಮತ್ತು ಇಂಜಿನೀಯರಿಂಗ್ ಪ್ರೈ.ಲಿ. ಸಂಸ್ಥೆಯ ಸಹಯೋಗದೊಂದಿಗೆ ಕಲಬುರಗಿಯ ಪೊಲೀಸ್ ಗ್ರೌಂಡ್ ನಲ್ಲಿ ಆಯೋಜಿಸಿರುವ ಹೆಲಿಕಾಪ್ಟರ್ ರೈಡ್ ಸೇವೆ ಶನಿವಾರದಿಂದ ಪ್ರಾರಂಭವಾಗಿದ್ದು, ಮೊದಲ ದಿನವೆ ಪ್ರಯಾಣಿಕರಿಂದ‌ ಉತ್ತಮ‌ ಸ್ಪಂದನೆ ದೊರೆತಿದೆ.

ಫೆಬ್ರವರಿ‌ 25 ರಿಂದ 27ರ ವರೆಗೆ ಮೂರು ದಿನಗಳ ಸೇವೆ ಲಭ್ಯ ಇರಲಿದ್ದು, ಪ್ರತಿಯೊಬ್ಬರಿಗೆ 3,800 ರೂ. ದರ ನಿಗದಿ ಮಾಡಲಾಗಿದೆ. 6 ಸೀಟರ್ ಚಾಪ್ಟರ್ ನಲ್ಲಿ 10 ನಿಮಿಷ ಅಗಸದಲ್ಲಿ ಸುತ್ತಾಡಿಸಲಾಗುತ್ತದೆ. 3 ವರ್ಷದೊಳಗಿನ ಮಕ್ಕಳಿಗೆ ದರ ಇರುವುದಿಲ್ಲ. ದರ ನಿಗದಿ ಮಾಡಿದರು, ಉತ್ಸವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ಸೌಲಭ್ಯ ನೀಡಲಾಗುವುದು ಎಂದು ಏರೋ‌ ಹಬ್ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ತೌಸಿಫ್ ರುಮನ್ ತಿಳಿಸಿದರು.

ಹೆಲಿರೈಡ್ ಸಂತಸ‌ ತಂದಿದೆ;

ಕುಟುಂಬದೊಂದಿಗೆ ಮೊದಲ ಪ್ರಯಾಣ ಮಾಡಿದ‌ ಕಲಬುರಗಿಯ ನಿವಾಸಿ ವೈಭವರೆಡ್ಡಿ ಅವರು ಮಾತನಾಡಿ, ಕಲ್ಯಾಣ‌ ಕರ್ನಾಟಕ ಉತ್ಸವ ಅಂಗವಾಗಿ ಹೆಲಿ ರೈಡ್ ಸೇವೆ ಆರಂಭಿಸಿದ್ದು, ಸಂತಸ ತಂದಿದೆ. ನಾನು ಸಣ್ಣ ಮಕ್ಕಳೊಂದಿಗೆ ಪ್ರಯಾಣ ಮಾಡಿದ್ದೆ, ಚಾಪರ್ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದರು. ಅಗಸದಲ್ಲಿ ಹಾರಾಡುವ ಅವಕಾಶ ಮತ್ತೆ ಮತ್ತೆ ಸಿಗಲ್ಲ. ಜಿಲ್ಲೆಯ ಜನತೆ ಇಂತಹ ಸದಾವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರು ಸಹ ತಮ್ಮ ಪತ್ನಿಯೊಂದಿಗೆ ಹೆಲಿರೈಡ್ ಮಾಡಿದರು. ಹೆಲಿರೈಡ್ ತಮಗೆ ರೋಮಾಂಚನಗೊಳಿಸಿದೆ.‌ 8 ನಿಮಿಷಗಳ ಕಾಲ ಇಡೀ ಕಲಬುರಗಿ ನಗರ ಸುತ್ತಾಡಿಸಲಾಯಿತು ಎಂದು ಸುದ್ದಿಗಾರರೊಂದಿಗೆ ತಮ್ಮ ಸಂತಸ‌ ಹಂಚಿಕೊಂಡರು.

ಅಕಾಶದಲ್ಲಿ ಹಾರಾಡಬೇಕೆಂಬ ಸಾಮಾನ್ಯ ಜನರ ಆಸೆಗೆ ಉತ್ಸವವು ಅವಕಾಶ ಒದಗಿಸಿದೆ. ಹೆಲಿರೈಡ್ ಬುಕ್ಕಿಂಗ್ ಮಾಡಲು 8310698759, 9886377298, 8147849997, 9986140694 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here