ಉಚಿತ ಹೊಲಿಗೆ ಯಂತ್ರ ತರಬೇತಿಗಾಗಿ ಅರ್ಜಿ ಆಹ್ವಾನ

0
117

ಬಳ್ಳಾರಿ,ಸೆ.03:ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕೆ ವತಿಯಿಂದ ಹಾಗೂ ಆರ್.ಎ.ಪಿ ಯೋಜನೆಯಡಿ 30 ಮಹಿಳಾ ಅಭ್ಯರ್ಥಿಗಳಿಗೆ ನಗರದ ಸಿಂಡ್ ಗ್ರಾಮೀಣ ಸಂಸೆಯಲ್ಲಿ ಒಂದು ತಿಂಗಳು ಅವಧಿಯ ಶಿಷ್ಯವೇತನ ರಹಿತ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ನಂತರ ಉಚಿತವಾಗಿ ಹೊಲಿಗೆಯಂತ್ರ ನೀಡಲಾಗುವುದು ಎಂದು ಜಿಪಂ ಗ್ರಾಮೀಣ ಕೈಗಾರಿಕೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ವೃತ್ತಿನಿರತ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ವೃತ್ತಿನಿರತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಉಚಿತವಾಗಿ 187 ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಲು ಮತ್ತು ತರಬೇತಿ ನೀಡಲು ಆಸಕ್ತ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಆನ್‍ಲೈನ್‍ನಲ್ಲಿ ballari.nic.in ವೈಬ್‍ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅ.06ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ದೂ. ಬಳ್ಳಾರಿ/ಸಂಡೂರು ಮೊ.9844200579 ಹಾಗೂ ಜಿಪಂ ಗ್ರಾಮೀಣ ಕೈಗಾರಿಕೆಯ ಉಪನಿರ್ದೇಶಕ ಮೊ. 9901564297 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here