ಮುಂಗಾರು ಆರಂಭಕ್ಕಿಂತ ಮುಂಚೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿಜಿಲ್ಲಾಧಿಕಾರಿ-ಗುರುದತ್ತ ಹೆಗಡೆ

0
78

ಧಾರವಾಡ ; ಮಾ.03: ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳನ್ನು ಮಳೆಗಾಲಕ್ಕಿಂತ ಮುಂಚೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಅವಳಿ ನಗರಗಳಲ್ಲಿ ಮಹಾನಗರ ಪಾಲಿಕೆ, ಬಿಆರ್‍ಟಿಸಿ ಸ್ಮಾರ್ಟ್ ಸಿಟಿ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳಡಿ ಕೈಗೊಳ್ಳುತ್ತಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಸೂಚಿಸಿದರು. ಅಪಘಾತ ಸಂಭವನೀಯ ವಲಯಗಳಲ್ಲಿ ಕಟ್ಟುನಿಟ್ಟಾಗಿ ರಸ್ತೆಗಳಲ್ಲಿ ರಿಪ್ಲೆಕ್ಟರ್, ಸೈನ್‍ಬೋಡ್ರ್ಸ್, ಪೇಂಟಿಂಗ್, ಮಾರ್ಕಿಂಗ್ಸ್, ರಂಬಲ್ಸ್‍ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.

ಅವಳಿ ನಗರಗಳಲ್ಲಿ ಆಯ್ದ ಕೆಲವೆಡೆ ಆಟೋರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ, ಆರ್.ಟಿ.ಓ. ಪೆÇಲೀಸ್ ಇಲಾಖೆಗಳ ಜಂಟಿ ಸಮಿತಿ ರಚಿಸಿ ಸರ್ವೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೊಸೂರು ಸರ್ಕಲ್‍ನ ಜೋಷಿ ಕಣ್ಣಿನ ಆಸ್ಪತ್ರೆ ತಿರುವಿನ ಪ್ರಾರಂಭದಿಂದ ವಾಣಿವಿಲಾಸ ವೃತ್ತದವರೆಗಿನ ರಸ್ತೆಯಲ್ಲಿ ವಾಹನಗಳಿಗೆ ಫ್ರೀ ಲೆಫ್ಟ್ ಟರ್ನ್ ತೆಗೆದುಕೊಳ್ಳಲು ಅನುಕೂಲವಾಗುವಂತೆ. ರಸ್ತೆಯ ಬಾಹುಗಳಲ್ಲಿ ಸಂಗ್ರಹವಾಗಿರುವ ಕಲ್ಲುಪುಡಿಗಳ ರಾಶಿಯನ್ನು ಜೆಸಿಬಿಯಿಂದ ತೆರವುಗೊಳ್ಳಿಸಿದ್ದು, ರಸ್ತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.

ಹೊಸೂರು ಸರ್ಕಲ್‍ನಿಂದ ವಾಣಿವಿಲಾಸ ಸರ್ಕಲ್‍ವರೆಗಿನ ರಸ್ತೆಯಲ್ಲಿರುವ ಬಸ್ ಶೆಲ್ಟರ್‍ನ್ನು ಹೆಚ್.ಡಿ.ಎಮ್.ಸಿ ವತಿಯಿಂದ ಸ್ಥಳಾಂತರಗೊಳಿಸಿ ಪೇವರ್ಸ್‍ಗಳನ್ನು ಅಳವಡಿಸುತ್ತಾರೆ ಎಂದು ಸಭೆಗೆ ತಿಳಿಸಿದರು.

ಹೊಸೂರು ವಾಣಿವಿಲಾಸ ಸರ್ಕಲ್ ಬಳಿ ಅನಧಿಕೃತವಾಗಿ ಬಸ್‍ಗಳನ್ನು ನಿಲುಗಡೆ ಮಾಡಬಾರದೆಂದು ಈಗಾಗಲೇ ಸಂಬಂಧಪಟ್ಟ ಚಾಲನಾ ಸಿಬ್ಬಂದಿಗಳಿಗೆ ಘಟಕ ವ್ಯವಸ್ಥಾಪಕರ ಮುಖಾಂತರ ತಿಳಿಸಲಾಗಿದೆ. ಕೇಂದ್ರ ಕಚೇರಿಯಿಂದ ಸಂಸ್ಥೆಯ ಎಲ್ಲಾ ವಿಭಾಗಗಳಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ ಹಾಗೂ ಸಂಸ್ಥೆಯಿಂದ ಸಾರಿಗೆ ನಿಯಂತ್ರಕರನ್ನು ನಿಯೋಜಸಿ ಬಸ್ಸುಗಳ ನಿಲುಗಡೆ ನಿಬರ್ಂಧಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಹೆಗ್ಗೇರಿಯಿಂದ ಇಂಡಿ ಪಂಪ್‍ವರೆಗಿನ ಮೀಟರ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಚರಂಡಿ ಮೇಲಿನ ಅಲ್ಲಲ್ಲಿ ಸಿಮೆಂಟ್ ಮುಚ್ಚಳವನ್ನು ಅಳವಡಿಸುವ ಕಾರ್ಯ ಮತ್ತು ಪುಟ್‍ಪಾತ್ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು

ಇಂಡಿ ಪಂಪ್ ವರೆಗಿನ ರಸ್ತೆಯಲ್ಲಿ ಒಂದು ಬದಿಯ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಸದರಿ ರಸ್ತೆಯಲ್ಲಿ ಒಳಚರಂಡಿ ಮತ್ತು ನೀರಿನ ಪೈಪು ಅಳವಡಿಕೆ ಕಾರ್ಯವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕಾಮಗಾರಿಯು ಮುಕ್ತಾಯಗೊಂಡಿರುತ್ತವೆಯೆಂದು ಅಧಿಕಾರಿಗಳು ತಿಳಿಸಿದರು.

ಅಂಕೋಲಾ-ಗೂಟಿ ರಸ್ತೆಯ ಭಾರತ ಮಿಲ್ ಸರ್ಕಲ್‍ನಿಂದ ಇಂಡಿಪಂಪ್ ವರೆಗಿನ ಕಾಂಕ್ರಿಟ್ ರಸ್ತೆಯು ಪೂರ್ಣಗೊಂಡಿದ್ದು. ಚರಂಡಿ ಕಾಮಗಾರಿಯು ಸಹ ಮುಕ್ತಾಯ ಹಂತದಲ್ಲಿದ್ದು, ಫೇವರ್ಸ್ ಹಾಗೂ ಚರಂಡಿ ಮೇಲಿನ ಟೈಲ್ಸ್ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಒಂದು ವಾರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ದಾಜೀಬಾನ್ ಪೇಟದಿಂದ ಮೂರು ಸಾವಿರ ಮಠದ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಫೇವರ್ಸ್ ಅಳವಡಿಕೆ ಕಾರ್ಯ ಪೂರ್ಣಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದರು. ಇದೇ ರಸ್ತೆಯಲ್ಲಿ ಸಂಚಾರಿ ಸೂಚನಾ ಫಲಕಗಳನ್ನು ಅಳವಡಿಸಲಾಗಿರುತ್ತದೆ ಹಾಗೂ ಚೇಂಬರ್‍ಗಳನ್ನು ಮುಚ್ಚಿದ್ದು ವಾಹನಗಳ ಸಂಚಾರಕ್ಕೆ ಅನುಕೂಲವಾಗಿರುತ್ತದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಹಳೇ ಕೋರ್ಟ್ ಸರ್ಕಲ್ ಹತ್ತಿರ ಇರುವ ಸಾಯಿ ಮಂದಿರ ಮುಂದೆ ಬಹುಮಹಡಿ ಕಾರ್ ಪಾರ್ಕಿಂಗ್ ಕಾಮಗಾರಿ, ಯು.ಜಿ.ಡಿ. ಕಾಮಗಾರಿ ಮತ್ತು ನೀರಿನ ಪೈಪ್‍ಲೈನ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ವಿಳಂಬದ ಕುರಿತು ಗುತ್ತಿಗೆದಾರರಿಗೆ ನೋಟೀಸ್ ನೀಡಲಾಗಿದ್ದು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಉಪ ಪೆÇಲೀಸ್ ಆಯುಕ್ತ ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಉಣಕಲ್ ಸಿದ್ದಪ್ಪಾಜಿ ದೇವಸ್ಥಾನದ ಬಿಆರ್‍ಟಿಎಸ್ ಬ್ರಿಡ್ಜ್ ಕೆಳೆಗಡೆ ವಿರುದ್ಧ ದಿಕ್ಕಿನಲ್ಲಿ ವಾಹನ ಸವಾರರು ಸಾಗುತ್ತಿರುವುದರಿಂದ, ಅಪಘಾತಗಳು ಸಂಭವಿಸುವ ಹಾಗೂ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡಬೇಕೆಂದು ಸಭೆಯ ಗಮನಕ್ಕೆ ತಂದರು, ಜಿಲ್ಲಾಧಿಕಾರಿಗಳು ಮಾತನಾಡಿ ಬಿ.ಆರ್.ಟಿ.ಸಿ. ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಈ ಕುರಿತು ಪರಿಶೀಲಿಸಿ, ಕಾಮಗಾರಿಯ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರು. ಅಲ್ಲದೇ ಕೆರೆಯ ದಂಡೆಯ ಸಾಮಥ್ರ್ಯ ವರದಿಯನ್ನು ಬೃಹತ್ ನೀರಾವರಿ ಅಧಿಕಾರಿಗಳಿಂದ ಪಡೆದುಕೊಂಡು ಪರಿಶೀಲಿಸುವಂತೆ ಇಂದು ಅಧಿಕಾರಿಗಳಿಗೆ ತಿಳಿಸಿದರು.

ಉಪ ಪೆÇಲೀಸ್ ಆಯುಕ್ತ ಗೋಪಾಲ ಬ್ಯಾಕೋಡ ಅವರು ಮಾತನಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳು ರಸ್ತೆ ಅಗೆಯುವಾಗ ವೈರಿಂಗ್ ಸಮಸ್ಯೆ ಹಾಗೂ ತಗ್ಗು ಗುಂಡಿಯಿಂದಾದ ಸಮಸ್ಯೆಗಳನ್ನು ಆಯಾ ಇಲಾಖೆಗಳೇ ಪರಿಹರಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಮುರಳಿಧರ, ಡಿವಾಯ್‍ಎಸ್‍ಪಿ ಎಸ್.ಎಸ್. ಹಿರೇಮಠ ಹಾಗೂ ಆರ್‍ಟಿಓ ಅಧಿಕಾರಿಗಳಾದ ಬಿ. ಶಂಕ್ರಪ್ಪ ಹಾಗೂ ಕೆ. ದಾಮೋದರ ಸೇರಿದಂತೆ ಸಭೆಯಲ್ಲಿ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here