ಜಿಲ್ಲಾ ತರಬೇತಿ ಸಂಸ್ಥೆ, ಇ-ಆಫೀಸ್ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ

0
100

ಧಾರವಾಡ:ಡಿ.22: ಜಿಲ್ಲಾ ತರಬೇತಿ ಸಂಸ್ಥೆ, ಧಾರವಾಡ ಹಾಗೂ ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಇವರ ಸಹಯೋಗದಲ್ಲಿ ದಿನಾಂಕ:21-12-2021 ರಿಂದ 22-12-2021 ರವರೆಗೆ ಇ-ಆಫೀಸ್ ಕುರಿತು 02 ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಎಂ.ಬಿ.ಚಟ್ಟಿ ಅವರು ಹೂ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮತ್ತು ಅವರು ಮಾತನಾಡಿ, ತಮ್ಮ ವಿಶ್ವವಿದ್ಯಾನಿಲಯದಲ್ಲಿ ಇ-ಕಚೇರಿ ವ್ಯವಸ್ಥೆ ಅಳವಡಿಸಿಕೊಂಡು ಆಡಳಿತದಲ್ಲಿ ಹೊಣೆಗಾರಿಕೆ, ಬದ್ದತೆ, ಪಾರದರ್ಶಕತೆ ತರುವ ಮೂಲಕ ಪರಿಣಾಮಕಾರಿ ಆಡಳಿತ ನಡೆಸಲು ಈ ತರಬೇತಿ ಸಹಕಾರಿಯಾಗುತ್ತದೆ.
ಈ ತರಬೇತಿಯ ಸಂಪೂರ್ಣ ಲಾಭ ಪಡೆಯಲು ಪ್ರಶಿಕ್ಷಣಾರ್ತಿಗಳಿಗೆ ತಿಳಿಸಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯಾ ಎ.ಎಸ್.ಕವಿತಾ ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ಸಾಂಖ್ಯಿಕ ವಿಭಾಗದ ಮುಖ್ಯಸ್ಥೆ ಡಾ.ಆಶಾಲತಾ, ಕೃಷಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ಹೊಸಮಠ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here