ಮೋಹನ್ ಕುಮಾರ್ ದಾನಪ್ಪನವರಿಗೆ “ಕೀರ್ತಿ ರತ್ನ” ಪ್ರಶಸ್ತಿ ಪ್ರಧಾನ!

0
1964

ಬಳ್ಳಾರಿ: ಮಾ 4 ರಂದು ನಗರದ ಸಂತ ಅಂಥೋನಿ ಸಮುದಾಯ ಭವನದಲ್ಲಿ ನಡೆದ ಪಬ್ಲಿಕ್ ಫೌಂಡೇಶನ್ ನ ಸಹಭಾಗಿತ್ವದಲ್ಲಿ ಕೀರ್ತಿ ಸ್ಕೂಲ್ ನ 15 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಸಾಮಾಜಿಕ ಹೋರಾಟಗಾರ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಅವರ ಸಾಮಾಜಿಕ ರಂಗದ ಅನುಪಮ ಸೇವೆಯನ್ನ ಗುರುತಿಸಿ “ಕೀರ್ತಿ ರತ್ನ ಪ್ರಶಸ್ತಿ” ಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೀರ್ತಿ ಶಾಲೆಯ ಅಧ್ಯಕ್ಷರಾದ ಲಕ್ಷ್ಮಿ ಶಿವರಾಂ, ಪಬ್ಲಿಕ್ ಫೌಂಡೇಶನ್ ನ ರಾಜ್ಯಾಧ್ಯಕ್ಷರಾದ ಹೆಚ್. ಎಸ್. ಶಿವರಾಂ, ಬಳ್ಳಾರಿ ನ್ಯಾಯಾಲಯದ ಸಾರ್ವಜನಿಕ ಅಭಿಯೋಜಕರು ಸರ್ಕಾರಿ ಹಿರಿಯ ವಕೀಲರಾದ ಸುಂಕಣ್ಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಸರ್ಕಾರಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ದೇವರಾಜ್, ಬಿಪಿ ನ್ಯೂಸ್ ನ ಸಂಸ್ಥಾಪಕರಾದ ಅರುಣ್ ಭೋಪಾಲ್, ಉದ್ಯಮಿ ಮೀರ್ ವಾಜಿದ್ ಉಲ್ಲಾ, ಭಾರತೀಯ ಜೀವ ವಿಮಾ ನಿಗಮದ ಬಳ್ಳಾರಿ ಶಾಖಾಧಿಕಾರಿ ಶೇಖಣ್ಣ, ಪಬ್ಲಿಕ್ ಫೌಂಡೇಶನ್ ನ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ. ರಾಜೇಶ್ವರಿ, ಸರಿಗಮಪ ಖ್ಯಾತಿಯ ಸೃಷ್ಟಿ ಸುರೇಶ, ಪ್ರಕೃತಿ ರೆಡ್ಡಿಯವರು ಹಾಗೂ ಹಲವಾರು ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು!

LEAVE A REPLY

Please enter your comment!
Please enter your name here