ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ 2046 ವಿದ್ಯಾರ್ಥಿಗಳು

0
206

ಸರ್ಕಾರಿ ಕಾಲೇಜಿನಲ್ಲಿ ಡಿ,ಗ್ರೂಪ್ ನೌಕರರು ನೇಮಕವಿಲ್ಲದ ಕಾರಣ, ಗ್ರೂಪ್ ನೌಕರರ ಕಾರ್ಯವನ್ನು ಪ್ರಿನ್ಸಿಪಾಲರು ಮತ್ತು ಉಪನ್ಯಾಸಕರಿಂದ ನಿರ್ವಹಣೆ.

ಕೊಟ್ಟೂರು: ಮಾರ್ಚ 9 ರಿಂದ ಪ್ರಾರಂಭಗೊಳ್ಳುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮತ್ತು ಕೊಟ್ಟೂರೇಶ್ವರ ಪ.ಪೂ. ಕಾಲೇಜ್ ಪರೀಕ್ಷೆ ಕೇಂದ್ರಗಳಲ್ಲಿ ಸರ್ವ ಸಿದ್ದತೆ ಕೈಗೊಳ್ಳಲಾಗಿದೆ.

ತಾಲೂಕಿನ ಕೋಗಳಿ, ಉಜ್ಜಿನಿ, ಕೊಟ್ಟೂರಿನ ಸರ್ಕಾರಿ ಕಾಲೇಜ್, ಸನ್ನಿಧಿ , ಭಾಗೀರಥಿ ಕಾಲೇಜ್, ಇಂದು ಕಾಲೇಜ್, ಕೊಟ್ಟೂರೇಶ್ವರ ಪ.ಪೂರ್ವ ಕಾಲೇಜ್‌ನಿಂದ ರಿಪಿಟರ್ ಸೇರಿ ಒಟ್ಟು 2046 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲಿದ್ದಾರೆ.

ವಿದ್ಯಾರ್ಥಿನಿಯರು 827 ಮತ್ತು 1219 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು.ಇವರಲ್ಲಿ
ಸರ್ಕಾರಿ ಜೂನಿಯರ್ ಕಾಲೇಜ್‌ನ ಇಬ್ಬರು ಅಂಧರು ಸಹಾ ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲ್ಲಿದ್ದು, ಅಂದರ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸರ್ಕಾರಿ ಪ.ಪೂ. ಕಾಲೇಜ್‌ನಲ್ಲಿ 47 ಕೋಠಡಿಗಳು ಮತ್ತು ಕೊಟ್ಟೂರೇಶ್ವರ ಕಾಲೇಜ್‌ನಲ್ಲಿ 23 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ.

ಸರ್ಕಾರಿ ಪ.ಪೂ. ಕಾಲೇಜ್‌ ಪ್ರಾರಂಭ ದಿನದಿಂದಲೂ ಡಿ.ಗ್ರೂಪ್ ನೌಕರರಿಲ್ಲದ ಕಾರಣ ಬುಧವಾರ ಟೇಬಲ್ ಹಾಕುವುದು ಮತ್ತು ನಂಬರ್ ಹಾಕುವ ಡಿ. ಗ್ರೂಪ್ ನೌಕರರ ಕಾರ್ಯವನ್ನು ಪ್ರಿನ್ಸಿಪಾಲರು ಮತ್ತು ಉಪನ್ಯಾಸಕರು ನಿರ್ವಹಿಸಿದರು.

ಸರ್ಕಾರಿ ಪ.ಪೂ. ಕಾಲೇಜ್ ಪ್ರಿನ್ಸಿಪಾಲ್ ಜಿ. ಸೋಮಶೇಖರ್, 47 ಕೊಠಡಿಗಳಲ್ಲಿಯೂ ಸಿ.ಸಿ. ಕ್ಯಾಮಾರ ಅಳವಡಿಸಲಾಗಿದೆ,
ಕೊಟ್ಟೂರೇಶ್ವರ ಕಾಲೇಜ್ ಪ್ರಿನ್ಸಿಪಾಲ್ ಪ್ರಶಾಂತ ಕುಮಾರ್, 32 ಕೊಠಡಿಗಳಲ್ಲಿಯೂ ಸಿ.ಸಿ. ಕ್ಯಾಮಾರ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋಟ್,,
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರತಿ ದಿನ ಓಡಾಡುವ ಎಲ್ಲಾ ಮಾರ್ಗದ ಬಸ್‌ಗಳನ್ನು ಓಡಿಸಲಾಗುವುದು ಮತ್ತು ಅವಶ್ಯಕತೆ ಬಿದ್ದರೆ ಹೆಚ್ಚುವರಿಗೆ ಪೂರ್ವ ಸಿದ್ಧತೆ ಕೈಗೊಂಡಿರುವೆವು.

ಮಹೇಂದ್ರ ಕುಮಾರ್ ಕೆ.ಎಸ್.ಆರ್.ಟಿ.ಸಿ. ಡಿಪೋದ ಪ್ರಭಾರಿ ಮ್ಯಾನೇಜರ್ ಕೂಡ್ಲಿಗಿ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here