ಇಕೋಕ್ಲಬ್ ಅರಳಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಮೂಕ ಪಕ್ಷಿಗಳಿಗೆ ನೀರಿನ ಅರವಟ್ಟಿ ಕಟ್ಟಿ ಎಪ್ರಿಲ್ ಕೂಲ್ ಆಚರಣೆ

0
144

ಸಿಂಧನೂರು ತಾಲೂಕಿನ ಅರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್ ಆಚರಣೆ ವನಸಿರಿ ಫೌಂಡೇಶನ್(ರಿ) ಸಹಯೋಗದೊಂದಿಗೆ ಮತ್ತು ಇಕೋಕ್ಲಬ್ ಅರಳಹಳ್ಳಿ ಶಾಲೆ ವಿದ್ಯಾರ್ಥಿಗಳಿಂದ ಮೂಕ ಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ಕಟ್ಟಿ ಪಕ್ಷಿಗಳ ದಾಹ ತೀರಿಸುವ ಕೆಲಸ ಇಂದು ಶಾಲೆಯ ಆವರಣದಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪುರ್ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಶಿವಶರಣಮ್ಮ, ಹಾಗೂ ಸಹಶಿಕ್ಷಕರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಜಿನ್ನಾದ, sdmc ಉಪಾಧ್ಯಕ್ಷರಾದ ಮುದುಕಪ್ಪ, ಸಿದ್ದನಗೌಡ, ಪ್ರದೀಪ್ ಪೂಜಾರಿ,ಯಮನೂರ ಮುಳ್ಳೂರ್, ಬಸವರಾಜ್ ಸಾಲಗುಂದ, ಪಂಪಾಪತಿ ಕಾರಟಗಿ, ಶಿವರಾಜ್ ಅರಗಿ, ಮಲ್ಲಿಕಾರ್ಜುನ್ ಮತ್ತು ಅರಳಹಳ್ಳಿ ಪ್ರೌಢಶಾಲೆಯ ಶಿಕ್ಷಕರು,sdmc ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಮತ್ತು ಊರಿನ ಗುರು ಹಿರಿಯರು ಈ ಒಂದು ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here