ಅಧಿಕಾರಿಗಳ ನಿರ್ಲಕ್ಷೆ ಸಮಸ್ಯೆಗಳಿಂದ ಕೂಡಿದ ಸಂಡೂರು ಹೌಸಿಂಗ್ ಬೋರ್ಡ ಕಥೆ.

0
99

ಸಂಡೂರು:ಜು;31 ಸಂಡೂರು ಪಟ್ಟಣದ ಸ್ಮಯೋರ್ ಕಾಲೋನಿ ಹತ್ತಿರವಿರುವ ಹೌಸಿಂಗ್ ಬೋರ್ಡನಲ್ಲಿನ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ,ಈ ಕುರಿತು ಹಲವು ಪತ್ರಿಕೆಯಲ್ಲಿ ವರದಿಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ,

ಹೌಸಿಂಗ್ ಬೋರ್ಡ್‍ನ ಪಾರ್ಕ್ ಜಾಗದಲ್ಲಿ ಮಳೆ ಮತ್ತು ಗಾಳಿಗೆ ಬೇವಿನ ಮರವು ಧರೆಗೆ ಹುರುಳಿದ್ದು, ಸುಮಾರು 8 ರಿಂದ 10 ದಿನಗಳು ಕಳೆದರು ಬಿದ್ದಿರುವ ಮರ ಹಾಗೆ ಇದೆ ಅಲ್ಲಿರುವ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು, ಇತ್ತ ಕಡೆ ಅಧಿಕಾರಿಗಳು ಗಮನ ವಹಿಸಿದೇ ಯಾವುದೇ ಕ್ರಮವನ್ನು ಕೈಗೊಂಡಿಲ್ಲ,

“ಪರಿಸರವನ್ನು ಉಳಿಸಿ” “ಗಿಡ ಮರಗಳನ್ನು ಬೆಳೆಸಿ”.. ಎನ್ನುವ ಅಧಿಕಾರಿಗಳು ಧರೆಗೆ ಬಿದ್ದಿರುವ ಮರದ ಕಡೆ ತಿರುಗಿ ನೋಡದೇ ಇರುವುದು ವಿಪರ್ಯಾಸವೇ ಸರಿ ಅಚ್ಚರಿ ಏನೆಂದರೆ ಅರಣ್ಯ ಇಲಾಖೆಯ ಮುಂಬಾಗದಲ್ಲಿಯೇ ಹೌಸಿಂಗ್ ಬೋರ್ಡ್ ಇದ್ದು, ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಅಲ್ಲಿಯೇ ವಾಸವಿದ್ದರು, ಕಂಡರು ಕಾಣದಂತಿದ್ದಾರೆ ಹಾಗೂ ಪಾರ್ಕಿಗಾಗಿ ಜಾಗವನ್ನು ನಿಗಧಿ ಪಡಿಸಿದ್ದರು, ಅಲ್ಲಿ ಯಾವುದೇ ಗಿಡ ಮರಗಳನ್ನು ಹಾಕಿ ಪಾರ್ಕ್ ಡೆವೆಲಪ್‍ಮೆಂಟ್ ಮಾಡದೇ ಇದ್ದಿದ್ದರಿಂದ ತ್ಯಾಜ್ಯ ಪದಾರ್ಥಗಳನ್ನು ಹಾಕುವ ಜಾಗವಾಗಿದೆ, ಸಂಬಂದ ಪಟ್ಟ ಅಧಿಕಾರಿಗಳು ಪಾರ್ಕ್‍ನ್ನು ಡೆವೆಲಪ್‍ಮೆಂಟ್ ಮಾಡಿ ನಿವಾಸಿಗಳಿಗೆ ವಾಯುವಿಹಾರ ತಾಣವಾಗಿ ನಿರ್ಮಾಣಮಾಡಬೇಕೆಂಬುವುದು ಅಲ್ಲಿಯ ಜನರ ಹೆಬ್ಬಯಕೆಯಾಗಿದೆ,

ಮಳೆಗಾಲ ಪ್ರಾರಂಭವಾಗಿದ್ದು ಯತ್ತೇಚ್ಚವಾಗಿ ಮಳೆಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ, ಆದರೆ ಚರಂಡಿಯ ನೀರು ಪ್ರತಿದಿನ ರಸ್ತೆಯ ಮೇಲೆಲ್ಲಾ ಹರಿಯುತ್ತಿದ್ದು ಮತ್ತು ನಿಂತಿದ್ದು ಇದರಿಂದ ಸೊಳ್ಳೆಗಳು ಹೆಚ್ಚಾಗಿವೆ ಹಾಗೂ ಚರಂಡಿಯ ನೀರಿನಲ್ಲಿಯೇ ಸಾರ್ವಜನಿಕರು ಸಂಚರಿಸುವ ದುರ್ಗತಿ ಸಂಭವಿಸಿದೆ. ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ವ್ಯವಸ್ಥಿತವಾಗಿ ಚರಂಡಿ ವ್ಯವಸ್ಥೆ ಮಾಡಿ ನಿವಾಸಿಗಳ ಆರೋಗ್ಯ ಕಾಪಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂಬುದು ನಿವಾಸಿಗಳ ಆಗ್ರಹವಾಗಿದೆ.

ಹೌಸಿಂಗ್ ಬೋರ್ಡ್‍ನಲ್ಲಿ ತೆರೆದ ಮ್ಯಾನ್‍ವೆಲ್‍ಗಳನ್ನು ಕುರಿತು ಪತ್ರಿಕೆಯಲ್ಲಿ ಈಗಾಗಲೆ ವರದಿಯನ್ನು ಪ್ರಕಟಿಸಿದ್ದು ಹಾಗೂ ನಿವಾಸಿಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದರು, ಇಲ್ಲಿಯವರೆಗೆ ಅಧಿಕಾರಿಗಳು ಇತ್ತಕಡೆ ಗಮನ ಹರಿಸದೆ ಇದ್ದು, ತೆರೆದ ಮ್ಯಾನ್‍ವೆಲ್‍ಗಳು ಅನಾವುತಕ್ಕಾಗಿ ಕಾಯ್ದುಕುಳಿತಿವೆ, ನಿವಾಸಿಯಲ್ಲಿನ ಜನರು ತಮ್ಮ ಮಕ್ಕಳನ್ನು ಆಟವಾಡಲು ಮತ್ತು ರಾತ್ರಿಯ ಸಂದರ್ಭದಲ್ಲಿ ಸಂಚಾರಿಸಲು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಸಂಚಾರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನಸಾಮ್ಯಾರು ಇಡೀ ಶಾಪ ಹಾಕುತ್ತಿದ್ದಾರೆ. ಅನಾವುತಗಳು ನಡೆಯುವ ಪೂರ್ವದಲ್ಲಿಯೇ ಅಧಿಕಾರಿಗಳು ಇತ್ತ ಗಮನ ಹರಿಸಿ, ತೆರೆದ ಮ್ಯಾನ್‍ವೆಲ್‍ಗಳನ್ನು ವ್ಯವಸ್ಥಿತವಾಗಿ ಸರಿಪಡಿಸಬೇಕೆಂಬುವುದು ನಿವಾಸಿಗಳ ಹೆಬ್ಬಯಕೆಯಾಗಿದೆ.

ಮಳೆ ಬಂದರಂತು ಹೌಸಿಂಗ್ ಬೋರ್ಡ್‍ನ ಎಲ್ಲಾ ಕೂಡು ರಸ್ತೆಗಳು ಕೆಸರು ಗದ್ದೆಗಳಂತಾಗಿ ವಾಹನಗಳು ಸಂಚಾರಿಸಲು ಮತ್ತು ಪಾದಚಾರಿಗಳು ಸಂಚಾರಿಸಲು ಹರಸಾಹಸ ಪಡಬೇಕಾಗಿದೆ, ಯು.ಜಿ.ಡಿ. ಕಾರ್ಯಾಕ್ಕಾಗಿ ರಸ್ತೆಗಳನ್ನು ಹಗೆದು ರಸ್ತೆಗಳು ಹದೆಗೆಟ್ಟಿದ್ದು, ಈಗಾಗಲೇ ಯು.ಜಿ.ಡಿ. ಕಾರ್ಯವು ನಮ್ಮ ಕಾಲೋನಿಯಲ್ಲಿ ಮುಗಿದಿದ್ದು, ಹಗೆದಿರುವಂತಹ ಎಲ್ಲಾ ಕೂಡು ರಸ್ತೆಗಳಿಗೆ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡಿ ವ್ಯವಸ್ಥಿತವಾಗಿ ನಿವಾಸಿಗಳ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂಬುವುದು ನಿವಾಸಿಗಳ ಬೇಡಿಕೆಯಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುತ್ತಾರಿಯೇ? ಕಾದು ನೋಡಬೇಕಾಗಿದೆ!

ಹೌಸಿಂಗ್ ಬೋರ್ಡನ ನಿವಾಸಿಯ ಹೇಳಿಕೆ:- ಸತೀಶ್ ಕುಮಾರ್ ಬಾಯಿ ತೆರೆದ ಮ್ಯಾನ್‍ವೆಲ್‍ಗಳಿಂದ ಚಿಕ್ಕಪುಟ್ಟ ಮಕ್ಕಳನ್ನು ಆಟವಾಡಲು ಬಿಡಲು ಭಯವಾಗುತ್ತಿದೆ,ಮಳೆ ಬಂದರೆ ಸಂಚರಿಸಲು ತುಂಬಾಕಷ್ಟ,ಮರ ಬಿದ್ದು ವಾರವಾದರು ಇತ್ತಕಡೆ ಅಧಿಕಾರಿಗಳು ಗಮನಹರಿಸಿಲ್ಲಾ ಪಾರ್ಕ ಇದ್ದರು ಇಲ್ಲದಂತಾಗಿದೆ ಸಂಬಂದ ಪಟ್ಟ ಅಧಿಕಾರಿಗಳು ಕೂಡಲೇ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆಯೆಂದು ನಮ್ಮ ವರದಿಗಾರರ ಜೊತೆ ಮಾತನಾಡುತ್ತ ತಿಳಿಸಿದರು.

LEAVE A REPLY

Please enter your comment!
Please enter your name here