ತೋರಣಗಲ್ಲು ಗ್ರಾಮದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ದಿನ ಕುರಿತು ಅರಿವು ಕಾರ್ಯಕ್ರಮ,

0
67

ಸಂಡೂರು: ಫೆ: 05: ತಾಲೂಕಿನ ತೋರಣಗಲ್ಲು ಗ್ರಾಮದ ಒಂದನೇ ಅಂಗವಾಡಿ ಕೇಂದ್ರದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ದಿನ ಕುರಿತು ಅರಿವು ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮಕ್ಕಳ ಮತ್ತು ಗರ್ಭಿಣಿಯರ ಹಾಗೂ ಹಿರಿಯ ನಾಗರೀಕರ ಆರೋಗ್ಯ ರಕ್ಷಣೆ ಮಾಡಲು ಆರೋಗ್ಯ ಸಮಿತಿಯ ಕಾರ್ಯ ಮಹತ್ವದ್ದಾಗಿದೆ,ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಾ, ಗ್ರಾಮದ ನೈರ್ಮಲ್ಯ ಕಾಪಾಡಲು ಜಾಗೃತಿ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿ ಗೊಳಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಇಂದು ಆರು ವರ್ಷದೊಳಗಿನ ಮಕ್ಕಳಲ್ಲಿ ರಕ್ತ ಹೀನತೆ ತಡಯಲು ಐರನ್ ಸಿರಪ್ ಮತ್ತು ಅಪೌಷ್ಟಿಕತೆ ಹೋಗಲಾಡಿಸಲು ಪುಷ್ಟಿ ಪೌಡರ್ ವಿತರಣೆ ಹಾಗೂ ಅಧಿಕ ಪೌಷ್ಟಿಕಾಂಶ ಉಳ್ಳ ಕಿಚಡಿ ತಯಾರಿಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು, ಐರನ್ ಸಿರಪ್ ಅನ್ನು ಮಕ್ಕಳಿಗೆ ವಾರದಲ್ಲಿ ಎರಡು ಬಾರಿ ಒಂದು ಎಮ್.ಎಲ್ ನೀಡುವ ಕುರಿತು ತಾಯಂದಿರಿಗೆ ಅರಿವು ಮೂಡಿಸಲಾಯಿತು,ಸಣ್ಣ ಪುಟ್ಟ ಅಡೆತಡೆಗಳು ಕಂಡುಬಂದರೆ ಆಸ್ಪತ್ರೆಗೆ ಬರಲು ಸೂಚಿಸಲಾಯಿತು,

ಈ ಸಂದರ್ಭದಲ್ಲಿ ಹಿರಿಯ ಮಹಿಳೆ ಪಾರ್ವತಮ್ಮ, ಸಮಾಲೋಚಕ ಪ್ರಶಾಂತ್ ಕುಮಾರ್,ಅಂಗನವಾಡಿ ಕಾರ್ಯಕರ್ತೆ ಸ್ವಾತಿ,ಸುಮಾ,ಆಶಾ ಕಾರ್ಯಕರ್ತೆ ನೀಲಮ್ಮ,ದೇವಮ್ಮ,ಅನಸೂಯಾ,ಪವಿತ್ರಾ,ದೀಪಾ,ವೆಬಾಕುಮಾರಿ,ಕಾಂಚನದೇವಿ, ಅನಸೂಯಮ್ಮ,ಶಾಯಿರಾ ಬೇಗಂ ಮತ್ತು ಮಕ್ಕಳು ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here