ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಹದಿಹರೆಯದವರಿಗೆ ಆರೋಗ್ಯ ಕಾರ್ಯಕ್ರಮ

0
342

ಸಂಡೂರು: ಮಾ:10 ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಹದಿಹರೆಯದವರಿಗೆ ಆರೋಗ್ಯದ ಕುರಿತು ಅರಿವಿನ ಕಾರ್ಯಕ್ರಮ ಜರುಗಿತು, ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹದಿಹರೆಯದವರಿಗೆ ಅರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿದರು,

ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬರುವ ಹತ್ತರಿಂದ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಕಿಶೋರಿಯರಿಗೆ ಆರೋಗ್ಯದ ಅರಿವಿನ ಅವಶ್ಯಕತೆ ಇರುತ್ತದೆ ಕಾರಣ ಈ ವಯಸ್ಸಿನಲ್ಲಿ ಹಾರ್ಮೋನ್‌ಗಳ ಬಿಡುಗಡೆಯಾಗುವುದರಿಂದ ದೈಹಿಕ ಬೆಳವಣಿಗೆಯ ಜೊತೆಗೆ ಶಾರೀರಿಕ ಬೆಳವಣಿಗೆ, ಮಾನಸಿಕ,ಸಾಮಾಜಿಕ ಬೆಳವಣಿಗೆ ಮತ್ತು ಭಾವನಾತ್ಮಕ ಬೆಳವಣಿಗೆಯಾಗುತ್ತದೆ, ಇದರೊಂದಿಗೆ ಋತುಚಕ್ರ ಪ್ರಾರಂಭವಾದಾಗಲೂ ತುಂಬ ಒತ್ತಡ ಮತ್ತು ಖಿನ್ನತೆಗೆ ಒಳಗಾಗುವ ಸಂದರ್ಭ ಬರಬಹುದು, ಈ ಸಮಯದಲ್ಲಿ ಅವರಿಗೆ ಆರೋಗ್ಯ ಶಿಕ್ಷಣ ನೀಡಿದರೆ ಜೀವನ ಕೌಶಲ್ಯಕ್ಕೆ ಸಹಾಯವಾಗುವುದು, ಮುಟ್ಟಿನ ಸಮಯದಲ್ಲಿ ದಿನಕ್ಕೆರಡು ಬಾರಿ ಸ್ನಾನ ಮಾಡುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಬಳಸಿ ಬಿಸಾಡುವ ಸ್ಯಾನಿಟರಿ ಪ್ಯಾಡ್ ಬಳಸುವುದು, ಸರಳ ವ್ಯಾಯಾಮ, ಧ್ಯಾನ ಮಾಡುವುದು ಮಾಡಿದಲ್ಲಿ ಒತ್ತಡದಿಂದ ಪಾರಾಗಬಹುದು, ಬಾಲಕಿಯರ ಆರೋಗ್ಯ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಕೂಡದು, ಸುದ್ದಿ ತಿಳಿದ ತಕ್ಷಣ 1098 ಗೆ ಕರೆ ಮಾಡಿ ತಡೆಯಲು ಸಹಕರಿಸಬೇಕು, ಯಾರಿಗೂ ಭಯ ಪಡಬಾರದು ಎಂದು ತಿಳಿಸಿದರು, ನಂತರ ಬಾಲಕಿಯರಿಂದ ಕೇಕ್ ಕಟ್ ಮಾಡಿಸಿ ಹದಿಹರೆಯದವರ ದಿನ ಹಾಗೂ ಮಹಿಳೆಯರ ದಿನಾಚರಣೆ ಶುಭಾಶಯ ತಿಳಿಸಲಾಯಿತು,

ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಶಾಲಾ ಶಿಕ್ಷಕರಾದ ರಜಿನಾ, ಬಂದೇನಾವಾಜ್, ಮೋಹಿದ್ದೀನ್ ಶೇಕ್,ಮಲ್ಲೇಶ್, ಅಂಗನವಾಡಿ ಕಾರ್ಯಕರ್ತೆ ವೆಂಕಟ ಬಾಯಿ, ರೇಣುಕಾ,ಆಶಾ ಕಾರ್ಯಕರ್ತೆ ಶ್ರೀದೇವಿ,ಕಾವೇರಿ, ಆಶಾ, ಹುಲಿಗೆಮ್ಮ, ರಾಜೇಶ್ವರಿ,ತೇಜಮ್ಮ,ಮಂಜುಳಾ,ರೇಖಾ, ವೆಂಕಟಲಕ್ಷ್ಮಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here