ವಕೀಲ ಕೆ.ಶಿವಕುಮಾರ್ ಗೆ ಡಾ.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿ ಪ್ರಧಾನ

0
35

ಕಂಪ್ಲಿ: ಡಿ 10, ನವದೆಹಲಿಯ ಪಂಚಶೀಲ ಆಶ್ರಮದಲ್ಲಿ ನಡೆದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 39ನೇ ರಾಷ್ಟ್ರೀಯ ಸಮಾವೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿಗಳಲ್ಲಿ ಸಮಾಜ ಸೇವೆ ಮತ್ತು ಸಂಘಟನೆಯಲ್ಲಿ ದಲಿತ ಮತ್ತು ಹಿಂದುಳಿದವರ ಏಳಿಗೆಗೆ ಸಕ್ರೀಯವಾಗಿ ತೊಡಗಿ ಗಣನೀಯ ಸೇವೆ ಸಲ್ಲಿಸುತ್ತಿರುವದನ್ನ ಪರಿಗಣಿಸಿ ಕಂಪ್ಲಿ ಸಮೀಪದ ದೇವಲಾಪುರ ಗ್ರಾಮದ ನಿವಾಸಿ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲ ಕೆ.ಶಿವಕುಮಾರ್ ನವರಿಗೆ “ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿ” ಯನ್ನು ಮಹಾರಾಷ್ಟ್ರದ ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಬಾಬನ್‌ ರಾವ್ ಘೋಲಪ್ ಮತ್ತು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರಾಧ್ಯಕ್ಷ ಡಾ.ಎಸ್.ಪಿ.ಸುಮಾನಾಕ್ಷರ್ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಆಂಧ್ರ ಪ್ರದೇಶ್ ರಾಜ್ಯಾಧ್ಯಕ್ಷ ಜಿತೇಂದರ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಕೀಲ ಕೆ ಶಿವ ಕುಮಾರ್ ಈ ಪ್ರಶಸ್ತಿಯು ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದು ಇನ್ನಷ್ಟು ಸಮಾಜ ಸೇವೆ ಸಂಘಟನೆ ಹೋರಾಟದಲ್ಲಿ ತೊಡಗುವುದಾಗಿ ತಿಳಿಸಿದರು!

LEAVE A REPLY

Please enter your comment!
Please enter your name here