ಮಕ್ಕಳ ಬುದ್ದಿ ವಿಕಸನ ಹೊಂದಲು ಭಾಷಣ, ಪ್ರಬಂಧ ಸ್ಪರ್ದೆ ಸಹಕಾರಿ ; ಮುಖ್ಯ ಶಿಕ್ಷಕ ಎಮ್ ಎಸ್ ಹೊನ್ನೂರ್ ಸಾಬ್

0
257

ಸಂಡೂರು: ಮಾ:13: ಮಕ್ಕಳ ಬುದ್ದಿ ವಿಕಸನ ಹೊಂದಲು ಬಾಷಣ ಪ್ರಬಂಧ ಸ್ಪರ್ಧೆ ತುಂಬಾ ಸಹಕಾರಿಯಾಗುವವು; ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಮ್.ಎಸ್ ಹೊನ್ನೂರ್ ಸಾಬ್, ತಿಳಿಸಿದರು

ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಅರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯನ್ನು ಉದ್ದೇಶಿಸಿ ಅವರು ಮಾತನಾಡಿದರು, ಮಕ್ಕಳು ಶಾಲಾ ಪಾಠಗಳೊಂದಿಗೆ ಆರೋಗ್ಯ, ಪರಿಸರಕ್ಕೆ ಸಂಬಂಧಿಸಿದ ಪ್ರಬಂಧ ಬರೆಯುವಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ಉತ್ತಮ ಕಲಿಕೆಯಾಗಿರುತ್ತದೆ, ಇದು ಅವರ ಬುದ್ಧಿಯ ವಿಕಸನಕ್ಕೆ ದಾರಿಯಾಗುತ್ತದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 2022-23 ಸಾಲಿನ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಚಟುವಟಿಕೆಗಳಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪರಿಚಯಿಸುವ ಸಲವಾಗಿ ಪ್ರೌಢಶಾಲೆಯ ಮಕ್ಕಳಿಗೆ “ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು,ಮತ್ತು ಜನನಿ ಶಿಶು ಸುರಕ್ಷಾ ಕಾರ್ಯಕ್ರಮ,ಶಿಶುಗಳ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಉಪಯೋಗಗಳು” ಕುರಿತು ಪ್ರಬಂಧ ಬರೆಸಲಾಗಿತ್ತು, ಅಯ್ಕೆಯಾದ ಮೊದಲ ಬಹುಮಾನವಾಗಿ ಕು||ಅಮೃತ ಅವರಿಗೆ ₹ 750/-, ಎರಡನೇ ಬಹುಮಾನವಾಗಿ ಕು|| ವಿ.ಕೆ ದೇವಕಿ ಅವರಿಗೆ ₹ 500/-, ಮೂರನೇ ಬಹುಮಾನವಾಗಿ ಕು|| ಆರ್. ಅಂಕಿತ ಅವರಿಗೆ ₹ 250/- ಗಳನ್ನು ಖಜಾನೆ-2 ಇಂದ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು ಸದ್ಯ ಅವರಿಗೆ ಪ್ರಮಾಣ ಪತ್ರಗಳನ್ನು ಮುಖ್ಯ ಶಿಕ್ಷಕರಿಂದ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು, ಬಾಷಣ, ಪ್ರಬಂಧ ಸ್ಪರ್ಧೆ ನಡೆಸಲು ಸಹಕಾರ ನೀಡಿದ ಸಹ ಶಿಕ್ಷಕರಾದ ಶಶಿಕಲಾ ಮತ್ತು ಈರಣ್ಣ ಅವರಿಗೆ ವಂದನೆಗಳನ್ನು ಅವರು ಅರ್ಪಿಸಿದರು,

ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕ ವಿಜಯಕುಮಾರ್, ಶಶಿಕಲಾ, ವಿದ್ಯಾರ್ಥಿಗಳಾದ ಕಾವ್ಯಾ,ಚೈತ್ರ, ಚಿನ್ಮಯಿ,ತುಳಸಿ,ಕೌಶಲ್ಯ,ಅಶ್ವಿನಿ,ಭೀಮೇಶ್,ಶ್ಯಾಮ್ ಕುಮಾರ್,ಹೇಮಂತ್, ಜೀವನ್, ಆಕಾಶ್ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here