ಇತಿಹಾಸದ ಪುಟಗಳಲ್ಲಿ ಪೊಲೀಸ್ ಹುತಾತ್ಮರ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆಯಬೇಕು: ಡಾ.ರಾಕೇಶ್ ಕುಮಾರ್ ಕೆ

0
78

ರಾಮನಗರ, ಅ. 21- ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಈ ವಷ೯ ದೇಶದಲ್ಲಿ ಹುತಾತ್ಮರಾದ 377 ಪೊಲೀಸ್ ಅಧಿಕಾರಿ, ಸಿಬ್ಬಂದಿ ಗಳನ್ನು ನೆನೆಯುತ್ತ, ದೇಶದ ಇತಿಹಾಸ ಬರೆಯುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.

ಅವರು ಇಂದು ಚನ್ನಪಟ್ಟಣ ತಾಲ್ಲೂಕಿನ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾಗುಚ್ಚವನ್ನು ಸಮಪಿ೯ಸಿ ಮಾತನಾಡಿದರು.

ಪೊಲೀಸ್ ರ ಶ್ರಮ ಮತ್ತು ಬಲಿದಾನದಿಂದ ಸಮಾಜದಲ್ಲಿ ಜನರು ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನ ನಡೆಸಿತ್ತಿದ್ದಾರೆ‌. ಮುಂದಿನ ಪೀಳಿಗೆಯು ಸಹ ಹುತಾತ್ಮರಾದ ಪೊಲೀಸ್ ಬಗ್ಗೆ ಓದಬೇಕು ಎಂದರು.

ಯಾವುದೇ ಧರ್ಮ ಭೇದವಿಲ್ಲದೆ ಹುತಾತ್ಮರ ಹೆಸರು ಪಟ್ಟಿಯಲ್ಲಿದೆ. ಸಮಾನ್ಯ ನಾಗರಿಕರಾಗಿ ಸಮಾಜದಲ್ಲಿ‌ ಶಾಂತಿ ಕಪಾಡಲು ರೂಪಿಸುವ ನಿಯಮಗಳನ್ನು ಪಾಲಿಸಬೇಕು. ಪೊಲೀಸ್ ಇಲಾಖೆ ಕ್ಷೇತ್ರಕ್ಕೆ ‌ಯಾವುದೇ ಮುಜುಗರ ಉಂಟಾಗದಂತೆ ಕೆಲಸ ಮಾಡುವುದಾಗಿ ಪಣತೊಡಬೇಕು ಧರ್ಮದ ಹೆಸರಲ್ಲಿ ಅವರಿಗೆ ಗೊಂದಲ ಸೃಷ್ಟಿಸಬಾರದು ಎಂದು ತಿಳಿಸಿದರು.

ಕೊವಿಡ್-19 ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಕುಟುಂಬಕ್ಕೆ ಯಾವದೇ ರೀತಿಯ ತೊಂದರೆಯಾಗದಂತೆ ಸರ್ಕಾರದ ವತಿಯಿಂದ ಉತ್ತಮ ಸ್ಪಂದನೆ ಬಂದಿದೆ.

ಕರೋನಾ ಸಂದರ್ಭದಲ್ಲಿ ದೇಶದಲ್ಲಿನ ಪೊಲೀಸ್ ಅಧಿಕಾರಿಗಳ ಮೇಲಿನ ಭರವಸೆ ಯಾವ ರೀತಿಯಲ್ಲಿದೆ ಎಂಬುವುದಾಗಿ ಒಂದು ಸರ್ವೆ ಮಾಡಲಾಯಿತು. ಶೇ.20 ರಷ್ಟಿದ ಪೊಲೀಸ್ ಅಧಿಕಾರಿಗಳ ಮೇಲಿನ ನಂಬಿಕೆಯು ಶೇ.60 ಕ್ಕೆ ಹೆಚ್ಚಾಗಿದೆ ಈ‌ ನಂಬಿಕೆಯನ್ನು ಉಳಿಸಿಕೊಳ್ಳುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ ಎಂದರು.

ಪೊಲೀಸ್ ಅಧಿಕಾರಗಳು ಹಾಗೂ ಸಿಬ್ಬಂದಿ ವರ್ಗದವರು ಧರಿಸುವ ಸಮವಸ್ತ್ರದ ಗೌರವ ಕಾಪಾಡುವುದು ಹಾಗೂ ಜನರ ಭರವಸೆ ಇನ್ನಷ್ಟು ಹೆಚ್ಚಿಸುವ ಕೆಲಸ ಮಾಡುವಂತೆ ಪೊಲೀಸ್ ವರ್ಗದವರಿಗೆ ತಿಳಿಸಿದರು.

1959 ರಲ್ಲಿ ದೇಶದ ಗಡಿಭಾಗದಲ್ಲಿನ ಲಡಾಕ್ ನಲ್ಲಿ ಕಾವಲು ಕತ೯ವ್ಯದಲ್ಲಿದ್ದ 10 ಜನ ಪೊಲೀಸ್ ಅಧಿಕಾರಿಗಳ ಮೇಲೆ ಹೆಚ್ಚಿನ ಸಂಖ್ಯೆಯ ಸೈನಿಕರು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನ ದೇಶದ ಸೈನಿಕರು ಭಾರತದ ಮೇಲೆ ಆಕ್ರಮಣ ಮಾಡುತ್ತಾರೆ, ಕಡಿಮೆ ಸಂಖ್ಯೆಯಲ್ಲಿದ್ದ ಭಾರತ ದೇಶದ ಪೊಲೀಸರು ಹೆಚ್ಚು ಶಸ್ತ್ರಾಸ್ತ್ರಗಳನ್ನು ಇಲ್ಲದಿದ್ದರೂ ಚೀನಾದ ವಿರುದ್ದ ವೀರಾವೇಶದಿಂದ ಹೋರಡಿ ಪ್ರಾಣತ್ಯಾಗ ಮಾಡಿ ತಮ್ಮ ಕತ೯ವ್ಯ ನಿಷ್ಠೆಯನ್ನು ಮೆರೆದಿರುತ್ತಾರೆ. ಈ ಘಟನೆಯ ಸ್ಮರಣಾರ್ಥ ವಾಗಿ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನ ವೆಂದು ಆಚರಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಅವರು ತಿಳಿಸಿದರು.

1959 ರಿಂದ 2021 ರ ವರೆಗಿನ ಹುತಾತ್ಮರ ಪಟ್ಟಿಯನ್ನು ಅವಲೋಕಿಸಿದಾಗ ಕಾಣಿಸುವ ಅಂಶ ವೆಂದರೆ ಪ್ರತಿ ವಷ೯ ತಮ್ಮ ಕತ೯ವ್ಯ ನಿವ೯ಹಸುವಾಗ ಪ್ರಾಣಾ ಕಳೆದುಕೊಂಡರು ಪೊಲೀಸ್ ಸಂಖ್ಯೆಯಲ್ಲಿ ಹೆಚ್ಚಳವನ್ನು ನೋಡಬಹುದಾಗಿದೆ ಎಂದರು.

2021 ರ ವಷ೯ದಲ್ಲಿ ದೇಶದಲ್ಲಿ 377 ಪೊಲೀಸ್ ಅಧಿಕಾರಿ , ಸಿಬ್ಬಂದಿಗಳು ಪ್ರಾಣತ್ಯಾಗ ಮಾಡಿರುತ್ತಾರೆ. ಕನಾ೯ಟಕ ರಾಜ್ಯದಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು , ಸಿಬ್ಬಂದಿಗಳ ಸಂಖ್ಯೆ 16 ಆಗಿದೆ ಎಂದರು.

ಸಮಾಜದ ಅಭಿವೃದ್ಧಿಗಾಗಿ ಶಾಂತಿ ಸುವ್ಯಸ್ಥೆ ಕಾಪಾಡುವುದು ಅತ್ಯಂತ ಅವಶ್ಯಕ, ಈ ಕತ೯ವ್ಯವನ್ನು ಪೊಲೀಸ್ ಅಧಿಕಾರಿಗಳು ನಿವ೯ಹಸಿದ್ದು. ಈ ಸಂದರ್ಭದಲ್ಲಿ ಎಲ್ಲರ ಸಹಕಾರದೊಂದಿಗೇ ಹುತಾತ್ಮರರಾದ ಪೊಲೀಸ್ ಅಧಿಕಾರಿ , ಸಿಬ್ಬಂದಿಗಳ ಕುಟುಂಬಸ್ಥರಿಗೆ ಇಲಾಖೆಯು ಧೈರ್ಯ ತುಂಬುವ ಹಾಗೂ ಸಹಕಾರ ನೀಡುವ ಕೆಲಸದಲ್ಲಿ ಇಲಾಖೆ ಬದ್ಧವಾಗಿದೆ ಎಂದು ಈ ಮೂಲಕ ತಿಳಿಸಲು ಬಯಸುತ್ತೇನೆ ಎಂದರು.

ಇದೆ ಸಂದಭ೯ದಲ್ಲಿ 2021 ನೇ ವಷ೯ದಲ್ಲಿ ಪ್ರಾಣತ್ಯಾಗ ಮಾಡಿದ 377 ಅಧಿಕಾರಿ, ಸಿಬ್ಬಂದಿಗಳ ಹೆಸರುಗಳನ್ನು ಘೋಷಿಸುವುದರ ಮೂಲಕ ಸ್ಮರಿಸಿದರು.

ಈ ಸಂದಭ೯ದಲ್ಲಿ ರಾಮನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವಗ೯ದವರು, ಪೊಲೀಸ್ ಹುತಾತ್ಮರ ಕುಟುಂಬಸ್ಥರು ಹಾಗೂ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here