ಕಾಂಗ್ರೆಸ್ ತೆಕ್ಕೆಗೆ ಬಳ್ಳಾರಿ ಮಹಾನಗರ ಪಾಲಿಕೆ: 23 ವರ್ಷದ ಯುವತಿ ಮೇಯರ್ ಆಗಿ ಆಯ್ಕೆ

0
290

ಬಳ್ಳಾರಿ: ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು 4ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಡಿ.ತ್ರಿವೇದಿ ಅವರು ಮೇಯರ್ ಹಾಗೂ ಉಪ ಮೇಯರ್ ಆಗಿ 33ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಜಾನಕಿ ನೇಮಕಗೊಂಡಿದ್ದಾರೆ.

ಕಲ್ಯಾಣ ಕರ್ನಾಟಕದ ಸ್ಥಳಿಯ ಆಡಳಿತ ಸಂಸ್ಥೆಗಳ ಇತಿಹಾಸದಲ್ಲಿ ಇದು ಪ್ರಥಮ ಎಂದು ಹೇಳಲಾಗುತ್ತಿದ್ದು, ದಲಿತ ಸಮುದಾಯದ ಬಲಗೈನ ಡಿ.ತ್ರಿವೇಣಿ ಚಿಕ್ಕ ವಯಸ್ಸಿನಲ್ಲೇ ಮೇಯರ್ ಆಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಹೆಲ್ತ್ ಇನ್ಸೆಕ್ಟರ್ ಅಭ್ಯಾಸ ಮಾಡಿದ ಯುವತಿ ಬಳ್ಳಾರಿ ನಗರದ ಅಭಿವೃದ್ಧಿ ಕನಸು ಹೊತ್ತು ಮೇಯರ್ ಆಗುವ ಮೂಲಕ ರಾಜ್ಯದ ಗಮನಸೆಳೆದಿದ್ದಾರೆ.

ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದ ಪ್ರಾದೇಶಿಕ ಕೃಷ್ಣ ಬಾಜಪೇಯಿ ಅವರು ಮೇಯರ್, ಉಪ ಮೇಯರ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಎಡಿಸಿ ಮಹ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ,ಸಂಸದ ವೈ.ದೇವೇಂದ್ರಪ್ಪ, ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ, ವಿಧಾನಪರಿಷತ್ ಸದಸ್ಯ ವೈ.ಸತೀಶ್, ಕಾಂಗ್ರೆಸ್ ಹಾಗೂ ಬಿಜೆಪಿಯ ಪಾಲಿಕೆ ಸದಸ್ಯರು, ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here