ತಾಲೂಕಿನ ಜೋಗ ಗ್ರಾಮದಲ್ಲಿ ಗುಂಪು ಸಭೆಯ ಮೂಲಕ ಇನ್ ಫ್ಲೂಯೆಂಜಾ-ಬಿ ಸೋಂಕು ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಸದ್ಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ, ಅದರೊಂದಿಗೆ ಅದೇ ತರಹದ ಸೋಂಕು ಇನ್ ಫ್ಲೂಯೆಂಜಾ-ಬಿ ಸಹ ವರದಿಯಾಗಿದೆ, ಈ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ “ಇನ್ ಫ್ಲೂಯೆಂಜಾ-ಬಿ ವಿಕ್ಟೋರಿಯಾ” ಸೋಂಕು ಸಹ ಕೋವಿಡ್ ನಂತಹ ಲಕ್ಷಣಗಳನ್ನೇ ಹೊಂದಿದೆ, ಇದು ಹೆಚ್1 ಎನ್1 ವೈರಸ್ ನ ವಿವಿಧ ಪ್ರಭೇದಗಳಾದ “ಇನ್ ಫ್ಲೂಯೆಂಜಾ-ಬಿ ವಿಕ್ಟೋರಿಯಾ” ಸೋಂಕು ಸಹ ಒಂದು ಇದು ಸಹ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾಗಿದೆ, ಕೋವಿಡ್-19 ರಂತೆಯೇ ನೆಗಡಿ, ಕೆಮ್ಮು,ಜ್ವರ,ಚಳಿ, ಉಸಿರಾಟಾದ ತೊಂದರೆ, ಕೆಲವೊಮ್ಮೆ ವಾಂತಿ ಭೇದಿ ಸಹ ಆಗಬಹುದು, ಹೆಚ್ಚು ಭಯ ಬೀಳುವ ಅವಶ್ಯಕತೆ ಇಲ್ಲ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ, ಲಕ್ಷಣಗಳು ಆದರಿಸಿ ವೈದ್ಯರು ಚಿಕಿತ್ಸೆ ನೀಡುವರು, ಮುನ್ನೆಚ್ಚರಿಕೆ ಕ್ರಮಗಳಾದ ಕೆಮ್ಮುವಾಗ ಸೀನುವಾಗ ಕರವಸ್ತ್ರ ಉಪಯೋಗಿಸುವುದು,ಲಕ್ಷಣಗಳು ಇದ್ದಲ್ಲಿ ಮಾಸ್ಕ್ ಧರಿಸುವುದು, ಆಗಾಗ ಸೋಪಿನಿಂದ ಕೈಗಳನ್ನು ತೊಳೆಯುವುದು, ಪ್ರತ್ಯೇಕ ವಿಶ್ರಾಂತಿ ಪಡೆಯುವುದು, ಪೌಷ್ಟಿಕಾಹಾರ ಸೇವಿಸುವುದು, ಉಸಿರಾಟದತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕ ಮಾಡುವುದು ಮಾಡಿದಲ್ಲಿ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಬಹುದು,
ಸೋಂಕಿನ ಲಕ್ಷಣಗಳು ಇದ್ದ ವ್ಯಕ್ತಿ ಇದ್ದಲ್ಲಿ ಅತೀ ಸಮೀಪ ಹೋಗುವುದಾಗಲಿ, ಕೈಕುಲುಕುವುದಾಗಲಿ, ಮೂಗು, ಬಾಯಿ, ಕಣ್ಣುಗಳ ಮುಟ್ಟ ಬಾರದು, ಲಕ್ಷಣಗಳು ಇದ್ದ ವ್ಯಕ್ತಿಯು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯ ಬೇಕು ವಿನಃ ಸ್ವಯಂ ಚಿಕಿತ್ಸೆ ಪಡೆಯ ಬಾರದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಗ್ರಾಮದ ನಾಗರೀಕರಾದ ಬಸವರಾಜ, ಯಂಕಪ್ಪ,ಹೆಚ್.ವೀರೇಶ,ವೀರ ಶೇಖರ,ಎಮ್.ಬಸವರಾಜ, ಈರಣ್ಣ, ಜೆ.ಎಮ್ ಸೋಮಶೇಖರ,ಗಿರಿಯಪ್ಪ, ಎ.ಹೊನ್ನೂರಪ್ಪ, ದಾನಪ್ಪ, ಮಹೇಶ ಗೌಡ, ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಭಾಗ್ಯಮ್ಮ ಇತರರು ಉಪಸ್ಥಿತರಿದ್ದರು.