ಜಿಲ್ಲಾಡಳಿತ ಮತ್ತು ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯಾವಳಿ.

0
16

ಹೊಸಪೇಟೆ : ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಹಿನ್ನೆಲೆಯಲ್ಲಿ ಮತದಾರರು ಪ್ರತಿಜ್ಞೆ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸ ಹೊಂದಿ ಭಾರತದ ಪೌರರು ಅಮೂಲ್ಯ ಮತದಾನ ಮಾಡುವಂತೆ ಜಾಗೃತಿ ಅಭಿಯಾನ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಮತ್ತು ನಗರಸಭೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ವಿನೂತನವಾಗಿ ಅಂಚೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ನಮ್ಮ ನಡೆ ಮತದಾನದ ಕಡೆ ಎನ್ನುವ ಘೋಷ ವಾಕ್ಯದೊಂದಿಗೆ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್. ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಪಂದ್ಯದಲ್ಲಿ ವಿಜಯನಗರ ಜಿಲ್ಲಾ ಪತ್ರಕರ್ತರು ಮತ್ತು ಜಿಲ್ಲಾಡಳಿತ ತಂಡದವರು ಕ್ರೀಡಾ ಮನೋಭಾವದಿಂದ ಉತ್ಸಾಹಭರಿತರಾಗಿ ಕ್ರಿಕೆಟ್ ಪಂದ್ಯಾವಳಿ ಆಡಿದರು.

ಜಿಲ್ಲಾಡಳಿತ ತಂಡವು 61 ರನ್ ಪಡೆದರೆ, ಪತ್ರಕರ್ತರ ತಂಡವು 47 ರನ್ ಪಡೆಯಿತು. ಆಟದ ಕೊನೆಯಲ್ಲಿ 15 ರನ್ ಗಳ ಅಂತರದಲ್ಲಿ ಜಿಲ್ಲಾಡಳಿತ ತಂಡವು ವಿಜಯಶಾಲಿಯಾಯಿತು. ವಿಜೇತ ಹಾಗು ಎರಡು ತಂಡದವರಿಗೂ ಜಿ.ಪಂ.ಸಿಇಒ ಸದಾಶಿವ ಪ್ರಭು ಅವರು ಆಕರ್ಷಕ ಟ್ರೋಪಿಯನ್ನು ನೀಡಿ ಗೌರವಿಸಿದರು.

ಚುನಾವಣಾ ಪರ್ವ ದೇಶದ ಗರ್ವ ಶೀರ್ಷಿಕೆ ಅಡಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಸೋತರೂ ಕೂಡ ಎಲ್ಲರಲ್ಲೂ ಹರ್ಷೋದ್ಧಾರ ಮೂಡಿಸಿತ್ತು ಇಂತಹ ಸಾಮಾಜಿಕ ಬದ್ಧತೆ ಹೊಂದಿರುವ ಕಾರ್ಯಕ್ರಮಗಳು ಸದಾ ನಡೆಯುತ್ತಿರಬೇಕು. ನಮ್ಮ ಜಿಲ್ಲೆಯ ಕೀರ್ತಿ ರಾಜ್ಯಮಟ್ಟದಲ್ಲಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ತಂಡದಲ್ಲಿ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ, ಸಹಾಯಕ ಆಯುಕ್ತ ಮಹಮ್ಮದ್ ಅಲಿ ಅಕ್ರಂ ಷಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ನಿರ್ದೇಶಕ ಮಂಜುನಾಥ ಹೆಚ್.ವಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಾಷು ಮೋದಿನ್, ಹಾಗೂ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪಂದ್ಯ ಗೆಲ್ಲಲು ಪ್ರಯತ್ನಿಸಿದ ಪತ್ರಕರ್ತರನ್ನು ಶ್ಲಾಘಿಸಿದರು.

ಪತ್ರಕರ್ತರ ತಂಡದ ನಾಯಕ ಪ್ರಕಾಶ್ ಕಾಕುಬಾಳು, ಸೋಮಶೇಖರಯ್ಯ ಹಿರೇಮಠ.ಆಶ್ರಿತ್, ರಾಮ್ ಜೀ ನಾಯ್ಕ್, ಎ ಚಿದಾನಂದ, ಎಲ್.ಮಂಜುನಾಥ, ಮುಹಮ್ಮದ್ ಗೌಸ್, ರಾಜಶೇಖರ್, ಬಸವರಾಜ್, ಭರಮಯ್ಯ ,ಅಂಬರೀಶ್, ಶೇಖರ್, ತಿರುಮಲೇಶ, ಅವರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here