ಬಳ್ಳಾರಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಮರಗಳನ್ನ ಕಟಾವಣೆ ಮಾಡದಂತೆ ಆಕ್ಷೇಪಣೆ ಸಲ್ಲಿಸಿದ ಭಾರತೀಯ ದಲಿತ ಪ್ಯಾಂಥರ್

0
212

ಬಳ್ಳಾರಿ: (ಕಂಪ್ಲಿ) ಮೇ 22, ಬಳ್ಳಾರಿ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ನಗರದ 425 ಮರಗಳನ್ನ ಕಟಾವಣೆ ಮಾಡುವ ಕ್ರಮವನ್ನ ವಿರೋಧಿಸಿ ಬಳ್ಳಾರಿ ವಿಭಾಗದ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಕಂಪ್ಲಿ ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಪಂಪಾಪತಿಯವರ ಮುಖಾಂತರ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಮನವಿ ಸಲ್ಲಿಸಿದರು

ಮನವಿ ಸಲ್ಲಿಸಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಸೈಯ್ಯದ್ ವಾರೀಶ್ ಎನ್ ರವರು ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿ ಬಿಸಿಲನಾಡು ಎಂದು ಖ್ಯಾತಿ ಪಡೆದಿದ್ದು ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿನ ಏರುಪೇರಿನಿಂದಾಗಿ ಬಿಸಿಲಿನ ತಾಪಮಾನವು ಇನ್ನಷ್ಟು ಹೆಚ್ಚುತ್ತಲೇ ಇರುವ ಸಂದರ್ಭದಲ್ಲಿ ನಗರದಲ್ಲಿ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಾಟವು ಮಾಡುತ್ತೀರುವುದು ದುರಾದೃಷ್ಟ, ಬಳ್ಳಾರಿಯ ಅರಣ್ಯ ಇಲಾಖೆಯ ಅಧಿಕಾರಿಗಳ ಶ್ರಮದಿಂದ ಸಮಾರು 425 ವಿವಿಧ ಜಾತಿಯ ಮರಗಳನ್ನು ಬೆಳೆಸಿ ಅವುಗಳನ್ನು ಜೋಪನ ಮಾಡಿ ಈಗ ಅಭಿವೃದ್ಧಿ ಹೆಸರಿನಲ್ಲಿ ಎಲ್ಲಾ ಮರಗಳನ್ನು ಕಟಾವು ಮಾಡುತ್ತಿರುವುದು ವ್ಯರ್ಥ.
ಪ್ರಪಂಚ ಮುಂದುವರೆಯುತ್ತ ಹೊಸ ಹೊಸ ಅವಿಷ್ಕರಗಳು ಸಹ ಹೊರಹೊಮ್ಮುತ್ತಿದ್ದು ಅವುಗಳನ್ನು ಸಹ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಈಗೀನ ಹೊಸ ಯುಗದಲ್ಲಿ ಎಲ್ಲವು ಸಾಧ್ಯ, ಮರಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸುವುದು ಸಹ ಈಗ ಸಾಧ್ಯವಾಗಿದೆ. 2017-18 ರಲ್ಲಿ ಬಿಎಂಆರ್ಸಿಎಲ್ ಅಭಿವೃದ್ಧಿ ಕಾಮಗಾರಿಗಾಗಿ ಸಮಾರು 300 ಮರಗಳನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಾಯದೊಂದಿಗೆ ಬೇರೆಡೆ ಸ್ಥಳಾಂತರಿಸಿ ಮರು ಕಸಿ ಮಾಡಿ ಅದರಲ್ಲಿ ಶೇಕಡ 75 ರಿಂದ 85% ಮರಗಳು ಮರು ಜೀವ ಪಡೆದುಕೊಂಡು ಹೆಮ್ಮರಗಳಾಗಿ ಬೆಳೆಯುತ್ತಿವೆ. ಬಳ್ಳಾರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಅಗಲೀಕರಣ ಸಂದರ್ಭ ರಸ್ತೆಯ ಎರಡೂ ಬದಿಯ ಸಮಾರು 425 ವಿವಿದ ಜಾತಿಯ ಮರಗಳನ್ನು ತೆರವುಗೊಳಿಸಲು ಕೋರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಲ್ಲಿಸಿರುವ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಿ ಬಳ್ಳಾರಿ ಅರಣ್ಯಾಧಿಕಾರಿಗಳು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಾಯದೊಂದಿಗೆ ಒಂದು ಮರವನ್ನು ಕಟಾವಣೆ ಮಾಡದೇ ಎಲ್ಲಾ ಮರಗಳನ್ನು ಬೇರೆಡೆಗೆ ಸಾಗಿಸುವ ಮೂಲಕ ಮರಗಳನ್ನು ರಕ್ಷಿಸಿ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು, ಈ ಸಂಧರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಪದಾಧಿಕಾರಿಗಳಾದ ಹೆಚ್. ವೆಂಕಟೇಶ್. ರೋಶನ್ ಯಾಲ್ಪಿ, ಬಿ. ಹೆಚ್.ಎಂ. ಗುರು ಶಾಂತ ಶಾಸ್ತ್ರಿ, ಪಂಪನ ಗೌಡ, ಬಿ.ಹೆಚ್. ಎಂ.ಯಶ್ವಂತ್, ಬಿ. ಹೆಚ್. ಎಂ.ಶರತ್ ಕುಮಾರ್
ಹಾಗೂ ಇತರರು ಉಪಸ್ಥಿತಿಯಲ್ಲಿದ್ದರು

LEAVE A REPLY

Please enter your comment!
Please enter your name here