ದುಶ್ಚಟಗಳಿಂದ ದೂರವಿದ್ದರೆ ದೀರ್ಘಾಯುಷ್ಯವಂತರಾಗಲು ಸಾಧ್ಯ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ,

0
371

ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಗುಂಪಿನ ಪ್ರತಿನಿಧಿಗಳಿಂದ “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ಧ.ಗ್ರಾ.ಯೋ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ ಕುಟುಂಬದ ಸದಸ್ಯರು ವ್ಯಸನಿಗಳಾಗದಂತೆ ಎಚ್ಚರಿಕೆ ವಹಿಸಬೇಕು, ದುಶ್ಚಟಗಳಿಗೆ ದಾಸರಾದರೆ ಕುಟುಂಬಗಳೇ ನಾಶವಾಗುವುವು, ಆದಾಯಕ್ಕೂ ಮೀರಿ ಖರ್ಚು ಮಾಡಿದರೆ, ಸಾಲದ ಸುಳಿಯಲ್ಲಿ ಸಿಲುಕುವುದು ಖಚಿತ, ಮಹಿಳೆಯರು ಮನಸ್ಸು ಮಾಡಿದರೆ ತಂಬಾಕು ವ್ಯಸನ ಮುಕ್ತ ಮಾಡುವುದು ಅತಿ ಸುಲಭ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ತಂಬಾಕು ಉತ್ಪನ್ನಗಳನ್ನು ಸೇವಿಸುವುದರಿಂದ ಆರೋಗ್ಯವೂ ಹಾಳು, ಹಣವೂ ಹಾಳು, ಹಣದ ಲೆಕ್ಕ ಮಾಡುವ ತಾವುಗಳು ತಂಬಾಕಿನ ಉತ್ಪನ್ನಗಳ ಸೇವನೆಯಿಂದ ಎಷ್ಟು ಕ್ಯಾನ್ಸರ್‌ಗಳು ಬರುತ್ತವೆ, ಎಷ್ಟು ಕುಟುಂಬಗಳು ಹಾಳಾಗಿವೆ, ಎಷ್ಟು ಜನ ಸಾಯುತ್ತಿದ್ದಾರೆ ಲೆಕ್ಕ ಹಾಕಿದರೆ ನಿಮ್ಮ ಕುಟುಂಬ ರಕ್ಷಣೆಗೆ ಮುಂದಾಗುವಿರಿ, ತಂಬಾಕಿನಲ್ಲಿ 4000 ರಾಸಾಯನಿಕ ವಸ್ತುಗಳು ಇದ್ದು 200 ಕ್ಕೂ ಹೆಚ್ಚು ಕ್ಯಾನ್ಸರ್ ಕಾರಕಗಳಾಗಿವೆ, ಬೀಡಿ,ಸಿಗರೇಟ್, ಜಗಿಯುವ ಗುಟಕಾ,ಹಾಂನ್ಸ್,ಹೀರಾ,ನಶ್ಯಾ ಎಲ್ಲವೂ ದಾಸರನ್ನಾಗಿ ಮಾಡಿ ಕ್ಯಾನ್ಸರ್ ತರುತ್ತವೆ ಇಂದಿನಿಂದ ತಂಬಾಕು ಉತ್ಪನ್ನಗಳ ಸೇವನೆಯನ್ನು ತ್ಯಜಿಸಿ, ಬದುಕಲು ಆಹಾರ ಬೇಕು – ತಂಬಾಕು ಅಲ್ಲ, ತಂಬಾಕು ಮುಕ್ತ ಸಮಾಜ ನಿರ್ಮಿಸೋಣ ಎಂದು ತಿಳಿಸಿ, ಎಲ್ಲರಿಗೂ ಪ್ರತಿಜ್ಞೆ ಬೋಧಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಖಾಜಾ ಬನ್ನಿ, ಹೊನ್ನೂರ ಸ್ವಾಮಿ, ತಾಲೂಕು ಯೋಜನಾಧಿಕಾರಿ ಜಿ.ಸತೀಶ್,ಸಂಯೋಜಕ ರಾಜು, ವಿದ್ಯಾ, ಒಕ್ಕೂಟದ ಅಧ್ಯಕ್ಷೆ ಗಾಯಿತ್ರಿ, ಶಾಂತಮ್ಮ,ಪ್ರತಿನಿಧಿಗಳಾದ ಗೌರಮ್ಮ, ಪ್ರಿಯದರ್ಶಿನಿ, ರಾಧ,ಮಹೇಶ್ವರಿ, ಸಂಯುಕ್ತ,ಮಹಾಲಕ್ಷ್ಮಿ, ಅನಸೂಯಾ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here