ಥೈರಾಯ್ಡ್ ಗ್ರಂಥಿಯು ಅಸಮರ್ಪಕ ಕ್ರಿಯೆಯಿಂದ ಮಹಿಳೆ ಮತ್ತು ಮಕ್ಕಳಲ್ಲಿ ಹಲವು ಸಮಸ್ಯೆಗಳು; ಮಕ್ಕಳ ತಜ್ಞ ಡಾ.ರಾಮಕೃಷ್ಣ,

0
179

ಸಂಡೂರು:ಮೇ:25:- ಪಟ್ಟಣದ ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಬಾಲ ಚೈತನ್ಯ ಆರೈಕೆ ಕೆಂದ್ರದಲ್ಲಿ ವಿಶ್ವ ಥೈರಾಯ್ಡ್ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಗಂಟಲು ಭಾಗದಲ್ಲಿರುವ ಚಿಟ್ಟೆಯಾಕಾರದ ಅತಿ ಮುಖ್ಯವಾದ ಚಿಕ್ಕ ಗ್ರಂಥಿ ಥೈರಾಯ್ಡ್ ಆಗಿದ್ದು, ಇದು ಅಸಮರ್ಪಕ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುವುದರಿಂದ ಮಹಿಳೆಯರು ಮತ್ತು ಮಕ್ಕಳಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತವೆ, ಇದು ಹತ್ತು ಜನರಲ್ಲಿ ಒಬ್ಬರಿಗೆ ಕಾಣಿಸುವುವಂತ ಸಮಸ್ಯೆ, ಹೈಪೋಥೈರಾಯ್ಡಿಸಮ್ ನಿಂದ ಅಧಿಕ ಮುಟ್ಟಿನ ರಕ್ತಸ್ರಾವ, ಬಂಜೆತನ,ಮಲಬದ್ಧತೆ, ಖಿನ್ನತೆ, ತೂಕ ಹೆಚ್ಚಾಗುವುದು,ನಿಧಾನ ಹೃದಯ ಬಡಿತ,ವರಟು ಕೂದಲು,ಕರ್ಕಶ ದ್ವನಿ, ಪದೇ ಪದೇ ಶೀತಕ್ಕೆ ಒಳಗಾಗುವುದಂತ ಸಮಸ್ಯೆಗಳು ಉಂಟಾಗಬಹುದು, ಮತ್ತೊಂದು ವಿಧ ಹೈಪರ್ ಥೈರಾಯ್ಡಿಸಮ್ ನಿಂದ ತೂಕ ಇಳಿಕೆ, ಗಳಗಂಡ ಕಾಯಿಲೆ, ಆಯಾಸ, ಕ್ಷಿಪ್ರ ಹೃದಯ ಬಡಿತ, ಅತಿಯಾದ ಬೆವರುವಿಕೆ, ಬೆಚ್ಚಗಿನ ಚರ್ಮ,ಕೂದಲು ಉದುರುವಿಕೆ, ನಿದ್ರಾ ಹೀನತೆಯಂತಹ ಸಮಸ್ಯೆಗಳು ಕಾಣಿಸುವವು, ಮಕ್ಕಳಲ್ಲಿ ಬುದ್ದಿ ಮಾಂಧ್ಯತೆ, ನೆನಪಿನ ಶಕ್ತಿ ಕಡಿಮೆ, ದೈಹಿಕ ಬೆಳವಣಿಗೆ ಕುಂಠಿತದಂತಹ ಸಮಸ್ಯೆಗಳು ಉಂಟಾಗಬಹುದು, ಸಮಸ್ಯೆ ಇದ್ದವರು ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆಯಬೇಕು, ತಡೆಗಟ್ಟಲು ಸಾಮಾನ್ಯವಾಗಿ ಸಸಾರಜನಕ ಆಹಾರ ಸೇವಿಸುವುದು, ಮೊಳಕೆ ಕಾಳು,ಕ್ಯಾರೆಟ್ಟ, ಹಸಿರು ಸೊಪ್ಪು, ಸೀಗಡಿ, ಮೀನು, ಅಯೋಡಿನ್ ಯುಕ್ತ ಉಪ್ಪು ಬಳಸಬೇಕು ಎಂದು ತಿಳಿಸಿದರು,

ನಂತರ ಮಕ್ಕಳ ತಜ್ಞರಾದ ಡಾ.ಶಿವಾನಿ ಅವರು ಎದೆ ಹಾಲಿನ ಮಹತ್ವದ ಕುರಿತು ಮಾತನಾಡುತ್ತಾ ಕೊಲೆಸ್ಟ್ರಂಮ್ ಯುಕ್ತ ಹಳದಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ಅಂಶವಿದ್ದು ಹೆರಿಗೆಯಾದ ಅರ್ಧ ಗಂಟೆಯೊಳಗೆ ಹಾಲೂಣಿಸುವುದು ಅವಶ್ಯ, ಆರು ತಿಂಗಳು ಎದೆ ಹಾಲು ಮಾತ್ರ ಕೊಡಬೇಕು, ನಂತರ ಪೂರಕ ಆಹಾರದೊಂದಿಗೆ ಮುಂದುವರೆಸ ಬೇಕು, ಕುಳಿತು ಕೊಂಡೇ ಹಾಲು ಕೊಡಬೇಕು, ಮಗುವಿಗೆ ಬೇಕೆನಿಸಿದಾಗಲೆಲ್ಲಾ ಹಾಲೂಣಿಸ ಬೇಕು,ಒಂದು ಕಡೆ ಒಮ್ಮೆ, ಮೊತ್ತೊಂದು ಒಮ್ಮೆಯಂತೆ ಎರಡು ವರ್ಷದ ವರೆಗೆ ತಾಯಿ ಹಾಲು ಕೊಡುವುದು ಕಡ್ಡಾಯ, ಮಕ್ಕಳಿಗೆ ಅತಿಸಾರ ಭೇದಿ ಮತ್ತು ನ್ಯುಮೋನಿಯಾ ದಂತಹ ಕಾಯಿಲೆ ತಡೆಗಟ್ಟಲು ಹಾಲುಣಿಸುವುದು ಉತ್ತಮ, ಅಪೌಷ್ಟಿಕತೆಯನ್ನು ಸಹಾ ದೂರ ಮಾಡುವುದು, ಹಾಲು ಕುಡಿಸುವಾಗ ಮಗುವಿಗೆ ನೇವರಿಸುವ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು, ಎದೆ ಹಾಲು ಕುಡಿಸದಿದ್ದರೆ ತಾಯಂದಿರಿಗೆ ಸ್ತನ ಕ್ಯಾನ್ಸರ್‌ಗೂ ಕಾರಣ ವಾಗಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ವಿಮ್ಸ್ ನ ಮಕ್ಕಳ ತಜ್ಞರಾದ ಡಾ.ನಿಕಿತಾ, ಡಾ. ಅಕ್ಷಯ್ ಎಕ್ಬೋಟೆ, ಬಿ.ಹೆಚ್.ಇ.ಒ ಶಿವಪ್ಪ, ಶುಶ್ರೂಷಕಿ ನಾಗಮ್ಮ, ಫಾರ್ಮಸಿ ಅಧಿಕಾರಿ ದೀಪಾ, ಮಹಿಳಾ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಕಂಕಣವಾಡಿ,ಶಾರದಾ ಶಿಂದೆ,ಗೀತಾ ಅರ್ಕಾಚಾರಿ, ತಾಯಂದಿರಾದ ತೇಜಸ್ವಿನಿ,ರೇಷ್ಮಾ,ಗಾಯಿತ್ರಿ, ರೇಣುಕಾ,ದುರುಗಮ್ಮ,ತಿಪ್ಪಮ್ಮ,ಸರೋಜ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here