ವಿಕಲಚೇತನರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಅವಕಾಶಗಳು ನೀಡಬೇಕು: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ

0
406

ಸಂಡೂರು:ಡಿ:03:-ತಾಲೂಕಿನ ಸಂಡೂರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆಯ ಮಕ್ಕಳ ಸಹಯೋಗದಲ್ಲಿ “ಅಂತರರಾಷ್ಟ್ರೀಯ ವಿಕಲಚೇತನರ ದಿನಾಚರಣೆ” ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು,

“ವಿಕಲಚೇತನರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಆದರೆ ಅವಕಾಶಗಳ ನೀಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿಕೆ ಕೊಟ್ಟರು, ಮಾತು ಮುಂದುವರೆಸುತ್ತಾ ವಿಕಲಚೇತನರು ಒಂದಿಲ್ಲೊಂದು ವಿಚಾರದಲ್ಲಿ ಅದಮ್ಯ ಕೌಶಲ್ಯನ್ನು ಹೊಂದಿರುತ್ತಾರೆ, ಅವರಿಗೆ ಎಲ್ಲರಂತೆ ಎಲ್ಲಾ ವಿಭಾಗಗಳಲ್ಲಿ ಅವಕಾಶ ಮಾಡಿ ಕೊಟ್ಟಾಗ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ, ಆರೋಗ್ಯ ಇಲಾಖೆಯಿಂದ ದೃಷ್ಟಿ ದೋಷ ಉಳ್ಳವರಿಗೆ ಕನ್ನಡಕ, ಶ್ರವಣ ದೋಷ ಉಳ್ಳವರಿಗೆ ಕಾಕ್ಲಿಯರ್ ಇಂಪ್ಲಾಂಟ್ ನಂತಹ ಸೂಕ್ತ ಸಾಧನ ಸಲಕರಣಗಳನ್ನು ಒದಗಿಸುವುದು, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಹಾರ ಒದಗಿಸುವುದು,ಸಂಘ ಸಂಸ್ಥೆಗಳ ಸಹಕಾರದಿಂದ ಕೃತಕ ಅಂಗಾಂಗ ಜೋಡಣೆ ಯನ್ನು ಒದಗಿಸುವ ಕಾರ್ಯದಲ್ಲಿ ಮುಂದಾದರೆ ವಿಕಲಚೇತನರಿಂದ ವಿಶೇಷ ಕೊಡುಗೆಯನ್ನು ಆಶಿಸಬಹುದು, ಅಲ್ಲದೇ ಪ್ಯಾರಾ ಒಲಂಪಿಕ್ ನಲ್ಲಿ ಪದಕಗಳ ಪಟ್ಟಿ ನೋಡಿದರೆ ಎಂತಹವರಿಗೂ ಹೆಮ್ಮೆ ಅನಿಸಿದೇ ಇರದು ಎಂದು ಹೆಮ್ಮೆಯನ್ನು ವ್ಯಕ್ತ ಪಡಿಸಿದರು, ಜನ್ಮಜಾತ ಅಂಗವಿಕಲತೆಯನ್ನು ಬೇಗನೇ ಹಚ್ಚುವುದು, ಮತ್ತು ನಿಯಂತ್ರಣ ಮಾಡುವುದು,ಹಾಗೂ ಅಪಘಾತ ಸಂಭಂದಿಸಿದ ಅಂಗವಿಕಲತೆ ಹೊಂದಿರುವರಿಗೆ ಚಿಕಿತ್ಸೆ ಮತ್ತು ವಾಹನ, ಬಸ್,ರೈಲ್ವೆ ಪಾಸ್ ಗಳನ್ನು ಒದಗಿಸುವ ಹಾಗೂ ನಾವೀನ್ಯ ಹೊಂದಿದ ಅಂಗಾಂಗ ಜೋಡಣೆಂತಹ ಕಾರ್ಯ ಮಾಡಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶಾಲೆಯ ಸ್ಕೌಟ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳಾದ ಜೈದೇವ,ಗೋಪಾಲ್,ಬಸವರಾಜ,ರವಿ,
ಆನಂದ್, ಇಂದುಕುಮಾರ್, ಅವಿನಾಶ್, ಅಜೇಯ,ಅಭಿಷೇಕ್,ವಿನಾಯಕ,ಅಜಯ್,ಸಂಜಯ,ವಸಗೇರಪ್ಪ, ನರಸಿಂಹ,ಆಶಾ ಮೆಂಟರ್ ನೀಲಮ್ಮ, ಆಶಾ ಕಾರ್ಯಕರ್ತೆ ಯರ್ರಮ್ಮ,ಲಕ್ಷ್ಮಿ, ಪಕ್ಕಿರಮ್ಮ, ಸುಮಂಗಳ, ಸಾವಿತ್ರಿ, ವಿಜಯಶಾಂತಿ, ರಾಜೇಶ್ವರಿ, ಹನುಮಂತಮ್ಮ, ಹರೀಶ್, ಶಶಿಕುಮಾರ್, ರೆಹಮಾನ್,ಜೀವನ್ ಇತರರು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here