ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಪ್ರತಿಸ್ಪರ್ಧಿಯಾಗಿ ಶಿಕ್ಷಣದಲ್ಲಿ ಮುನ್ನುಗ್ಗುತ್ತಿದೆ “ಕೊಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜ್”

0
109

ಕೊಟ್ಟೂರು :ಮೇ:26:- ಪಟ್ಟಣದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣಕ್ಕೆ, ಪ್ರತಿಸ್ಪರ್ಧಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ,ಭವಿಷ್ಯದ ಬದುಕಿಗೆ ಬೇಕಾದ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನ ತನ್ನತ್ತ ಆಕರ್ಷಿಸುತ್ತಿದೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್.

ಪಟ್ಟಣದ, ಸ್ವಾತಂತ್ರ್ಯ ಹೋರಾಟಗಾರ ಗೊರ್ಲೀ ಶರಣಪ್ಪ ಹೆಸರಿನಲ್ಲಿ 2007-08 ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾರಂಭ ಗೊಂಡು, 33 ವಿದ್ಯಾರ್ಥಿಗಳಿಂದ ಆರಂಭಗೊಂಡ ಕಾಲೇಜ್ ಇಂದು 1150 ವಿದ್ಯಾರ್ಥಿಗಳ ಬೃಹತ್ ಸಂಖ್ಯೆಯಿಂದ ಮುನ್ನುಗ್ಗುತ್ತಿದೆ.

ಕಲಾ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ‘ಕೋರ್ಸ್” ಗಳು ಇಲ್ಲಿದ್ದು, ಉತ್ತಮ ಅನುಭವಿ ಮತ್ತು ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಪರಿಣಿತ ಉಪನ್ಯಾಸಕ ವರ್ಗದಿಂದ ಭೋದನೆ ಇಲ್ಲಿ ಲಭ್ಯವಿದೆ. ಕಲಿಕೆ ಮತ್ತು ಭದ್ರತೆ ದೃಷ್ಟಿಯಿಂದ ಇಲ್ಲಿನ ಉಪನ್ಯಾಸಕರು ಹಾಗೂ ಪ್ರಾಚಾರ್ಯರು ಜಿ.ಸೋಮಶೇಖರ್ ಮಕ್ಕಳ ಮತ್ತು ಕಾಲೇಜ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವರು.

2023ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿನಿ ಮಹಾಲಕ್ಷ್ಮಿ 600 ಕ್ಕೆ 587 ಮತ್ತು ಬಾರಿಕರ ಶ್ವೇತಾಕುಮಾರಿ 600 ಕ್ಕೆ 586 ಅಂಕಗಳನ್ನು ಗಳಿಸಿ 6 ಮತ್ತು 7ನೇ ರ್ಯಾಂಕ್ ಪಡೆದು ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜ್ ಗಳಿಗೆ ಪ್ರತಿಸ್ಪರ್ಧಿ ನೀಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ವಿ.ಎಲ್ ಲಕ್ಷ್ಮೀ 600ಕ್ಕೆ 504 ಅಂಕಗಳನ್ನು ಮತ್ತು ವಾಣಿಜ್ಯ ವಿಭಾಗದಲ್ಲಿ ಪಿ.ತೇಜ್ 547 ಅಂಕಗಳನ್ನು ಪಡೆದಿದ್ದಾರೆ, ಇಲ್ಲಿನ ಇನೋರ್ವ ವಿದ್ಯಾರ್ಥಿ ಕೆ.ಕಾರ್ತಿಕ್ ಬಡತನದ ಕಡುಕಷ್ಟದಲ್ಲಿ ದಿನ, ಮನೆ-ಮನೆಗೆ ಪೇಪರ್ ಹಂಚಿ ವಾಣಿಜ್ಯ ವಿಭಾಗದಲ್ಲಿ 537 ಅಂಕ ಪಡೆದು, ಪೇಪರ್ ಹಂಚುವ ಹುಡುಗರಿಗೆ ಇವ ಸ್ಪೂರ್ತಿಯಾಗಿದ್ದಾನೆ.ಒಟ್ಟಾರೆ ಕಾಲೇಜಿನ ಫಲಿತಾಂಶ ಈ ವರ್ಷ ಉತ್ತಮ ಶ್ರೇಣಿಯಲ್ಲಿದೆ.

ದಾಖಲಾತಿ ಶುಲ್ಕ 20,30 ಹಾಗೂ 50 ಸಾವಿರ ರೂ.ಖಾಸಗಿ ಕಾಲೇಜ್ ಗಳಲ್ಲಿರುವಂತೆ , ಇಲಿಲ್ಲದೇ, ಕಡಿಮೆ ಶುಲ್ಕ, ಸರ್ಕಾರಿ ಶುಲ್ಕದಲ್ಲಿ ಈ ಸರ್ಕಾರಿ ಕಾಲೇಜ್ನಲ್ಲಿ ದಾಖಲಾತಿ ನಡೆಯುತ್ತಿದ್ದೆ, ಈ ಹಿನ್ನೆಲೆ ಪೋಷಕರು ಮತ್ತು ವಿದ್ಯಾರ್ಥಿಗಳು ದಾಖಲಾತಿ ಪ್ರಾರಂಭಗೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜ್ ಕಡೆ ಮುಖಮಾಡಿದ್ದಾರೆ.

■ ಸರ್ಕಾರಿ ಶುಲ್ಕದಲ್ಲಿ ದಾಖಲಾತಿ ಇಲ್ಲಿದೆ ಪೋಷಕರಿಗೆ ಆರ್ಥಿಕ ಹೊರೆ ಇಲ್ಲಿ ಕಡಿಮೆ ಇದ್ದು, ಪಟ್ಟಣದ ಹೃದಯ ಭಾಗದಲ್ಲಿ ಕಾಲೇಜ್ ಮತ್ತು ಕಾಲೇಜಿಂದ ಕೂಗಳಿತಿಯಲ್ಲಿ ಬಸ್ ನಿಲ್ದಾಣ , ಬಂದು-ಹೋಗಲು ಈ ಬಾಗದ ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ಸುಲಭ ಹಾಗೆ ಸರ್ಕಾರಿ ಬಸ್ ನಿಲ್ದಾಣವು ಇಲ್ಲಿಂದ ಅಷ್ಟೊಂದು ದೂರ ಆಗದು,ಪರಿಣಿತ ಅನುಭವಿ ಉಪನ್ಯಾಸಕರ ಭೋದನೆ, ಉತ್ತಮ ಪರಿಸರ ಮತ್ತು ವಿಶಾಲ ಆಟದ ಮೈದಾನ ಹಾಗೂ ಹೆಚ್ಚು ಕಲಿಕ ಕೊಂಠಡಿಗಳು ಇಲ್ಲಿವೆ ಈ ಎಲ್ಲಾ ಸೌಲಭ್ಯವೇ ವಿದ್ಯಾರ್ಥಿಗಳಿಗೆ, ನಮ್ಮ ಕಾಲೇಜ್ ಉತ್ತಮ ಆಯ್ಕೆಯಾಗಿದೆ.

●ಜಿ.ಸೋಮಶೇಖರ್, ಪ್ರಾಚಾರ್ಯರು ,
ಸರ್ಕಾರಿ. ಪ.ಪೂ.ಕಾಲೇಜ್ ಕೊಟ್ಟೂರು.

■ವಿದ್ಯೆ ಯಾರ ಸ್ವಂತದ್ದಲ್ಲ, ಶ್ರಮ ಮತ್ತು ಶ್ರದ್ಧೆ ಕಲಿಕೆಯಲ್ಲಿದ್ದರೆ ಸಾಧನೆ,ಕೀರ್ತಿ ತನ್ ತ್ತಾನೆ ಹೆಗಲೇರುತ್ತೆ, ಸರ್ಕಾರಿ ಕಾಲೇಜ್ನಲ್ಲಿ ಸ್ಪರ್ಧಾತ್ಮಕವಾಗಿ, ಪರಿಣಿತ ಉಪನ್ಯಾಕ ವರ್ಗ ಇಲ್ಲಿದ್ದು ಭೋದನೆ, ಜ್ಞಾನಕ್ಕೆ ಕೊರತೆ ಇಲ್ಲಿಲ್ಲ, ಸರ್ಕಾರಿ ಕಾಲೇಜ್ ಎಂಬ ಕಾರಣಕ್ಕೆ,ಮಕ್ಕಳಿಗೆ ಇಲ್ಲಿ ಸ್ವಲ್ಪ ಫ್ರೀಡಮ್ ಇರುತ್ತೆ,ಈ ಸಲುಗೆಯೇ ಇಲ್ಲಿನ ವಿದ್ಯಾರ್ಥಿಗಳನ್ನ ಹಿಂದಿಕ್ಕಿದೆ,
ಈ ಫ್ರೀಡಮ್ ನ್ನು ಇಲ್ಲಿನ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಒತ್ತು ಕೊಟ್ಟರೆ ಮುಂದಿನ ಟಾಪರ್ ಖಚಿತ , ಈ ಸರ್ಕಾರಿ ಕಾಲೇಜ್ ವಿದ್ಯಾರ್ಥಿ.

●ಕೆ.ಕಾರ್ತಿಕ್ ,
ವಾಣಿಜ್ಯ ವಿಭಾಗದಲ್ಲಿ 537 ಅಂಕ ಪಡೆದ ಸಾದಕ,ಪೇಪರ್ ವಿತರಕ. ಕೊಟ್ಟೂರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here