ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ, ಮಾನಸಿಕ ರೋಗಿಗಳಿಗೆ ಚಿಕಿತ್ಸೆಗಿಂತಲೂ ಆಪ್ತತೆ, ಮುಕ್ತ ಸಮಾಲೋಚನೆ ಹೆಚ್ಚು ಪರಿಣಾಮಕಾರಿ- ಡಾ.ಮುರುಗೇಶ್.

0
107

ದಾವಣಗೆರೆ ಅ.11:ಮಾನಸಿಕ ರೋಗದ ನಿವಾರಣೆಗೆ ಮುಖ್ಯವಾಗಿ ಬೇಕಾಗಿರುವುದು ನರ್ಸ್‍ಗಳು ಮತ್ತು ಮನೋವೈದ್ಯರು. ಅವರು ನೀಡುವ ಸೂಕ್ತ ಸಲಹೆ, ಸೂಚನೆಗಳು ಮಾನಸಿಕ ರೋಗಿಗಳಿಗೆ ಔಷಧೋಪಚಾರಗಳÀ ಚಿಕಿತ್ಸೆಗಿಂತ ಆಪ್ತತೆ, ಮುಕ್ತ ಸಮಾಲೋಚನೆ ಅವರ ರೋಗಕ್ಕೆ ಸೂಕ್ತ ಪರಿಹಾರ ದೊರೆಯುವಂತೆ ಮಾಡುತ್ತದೆ ಎಂದು ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮುರುಗೇಶ್ ಎಸ್.ಬಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮನೋವೈದ್ಯಕೀಯ ವಿಭಾಗ, ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದ ಸಭಾಂಗಣದಲ್ಲಿ ಏರ್ಪಡಿಸಿದ ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಎಂಬ ಘೋಷ ವಾಕ್ಯದಡಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನಸಿಕ ರೋಗವು ವಾಸಿಯಾಗದೇ ಇರುವ ಕಾಯಿಲೆ ಅಲ್ಲ. ನಮ್ಮ ಶರೀರಕ್ಕೆ ಹೇಗೆ ಬೇರೆ-ಬೇರೆ ರೀತಿಯ ಕಾಯಿಲೆಗಳು ಬರುತ್ತವೆಯೋ ಹಾಗೆಯೇ ಮಾನಸಿಕ ಕಾಯಿಲೆಯು ಕೂಡ. ಇದಕ್ಕೆ ಸಂಬಂಧಿಸಿದ ಮನೋತಜ್ಞರ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಪ್ರಾಥಮಿಕ ಹಂತದಲ್ಲಿಯೇ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬೇಕು ಎಂದರು.
ಮಾನಸಿಕ ರೋಗಿಗಳು ಸಾಮಾನ್ಯವಾಗಿ ಇಂತಹ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಕುಟುಂಬದವರು ಈ ಮಾನಸಿಕ ಲಕ್ಷಣಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪರಿಶೀಲಿಸಿ ಸಂಬಂಧಿಸಿದ ಮನೋವೈದ್ಯರನ್ನು ಸಂಪರ್ಕಿಸಿ ಅವರೊಂದಿಗೆ ಮುಕ್ತವಾಗಿ ಸಮಸ್ಯೆಯನ್ನು ಹಂಚಿಕೊಂಡು ಅವರು ನೀಡುವ ಸಲಹೆಗಳನ್ನು ಪಾಲಿಸಿದರೆ ಈ ಸಮಸ್ಯೆಯಿಂದ ಹೊರಬರಬಹುದು ಎಂದರು. ಇದಕ್ಕಾಗಿ ನಮ್ಮ ಜಿಲ್ಲಾಡಳಿತದ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆ ಮನೆಗೂ ಹೋಗಿ ಅಲ್ಲಿ ಯಾರಾದರೂ ಇಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಬಹುದು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷೆ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ 1994 ರಿಂದ ಈ ದಿನಾಚರಣೆಗೆ ಒಂದು ಘೋಷ ವಾಕ್ಯವನ್ನು ನೀಡುತ್ತಲೇ ಬಂದಿದ್ದಾರೆ ಈ ವರ್ಷದ ಘೋಷವಾಕ್ಯ ಅಸಾಮನ್ಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಎಂಬುದಾಗಿದೆ.
ಮನುಷ್ಯನ ದೈನಂದಿನ ಜೀವನದ ನಡುವಳಿಕೆಗಳಲ್ಲಿ ಬದಲಾವಣೆ, ಹಾವ-ಭಾವ, ಮದ್ಯವ್ಯಸನ, ಮಾನಸಿಕ ಖಿನ್ನತೆ, ಇಂತಹ ಹಲವಾರು ಲಕ್ಷಣಗಳನ್ನು ಮಾನಸಿಕ ರೋಗಕ್ಕೆ ಸಂಬಂಧಿಸಿದ್ದು, ಇವುಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಇದನ್ನೆ ಮಾನಸಿಕ ರೋಗ ಎಂದು ಕರೆಯುತ್ತೇವೆ. ಅಂತಹ ವ್ಯಕ್ತಿಗಳನ್ನು ಸಮಾಜದಿಂದ ದೂರವಿಡುತ್ತೇವೆ. ಇದಕ್ಕೆ ಪರಿಹಾರವಾಗಿ 1987 ರಲ್ಲಿ ಮೆಂಟಲ್ ಹೆಲ್ತ್ ಆ್ಯಕ್ಟ್‍ನ್ನು ಜಾರಿಗೆ ತಂದಿತು ಎಂದರು.
ಈ ಕಾಯ್ದೆಯು ಮಾನಸಿಕ ಅಸ್ವಸ್ಥ ರೋಗಿಯ ಕಾಳಜಿ ಮತ್ತು ಚಿಕಿತ್ಸೆ ನೀಡುವುದರ ಜೊತೆಗೆ ಅವರಿಗೆ ಸಂಬಂಧಿಸಿದ ಆಸ್ತಿಯನ್ನು ರಕ್ಷಿಸುವುದೇ ಈ ಕಾಯ್ದೆಯ ಮುಖ್ಯ ಉದ್ದೇಶ ಹಾಗೂ ಸಮಾಜದಲ್ಲಿ ಸಾಮನ್ಯರಿಗೆ ನೀಡುವ ಗೌರವವನ್ನು ಅವರಿಗೂ ದೊರೆಯುವಂತೆ ಮಾಡುವುದು. 1987 ರ ಕಾಯ್ದೆಯನ್ನು ಈಗ ಮೇ 29, 2018 ರಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಿದ್ದಾರೆ. ಈ ಕಾಯ್ದೆಯಡಿಯಲ್ಲಿ ಮೆಂಟಲ್ ಹೆಲ್ತ್ ಆಫ್ ಎಸ್ಟಾಬ್ಲಿಷ್‍ಮೆಂಟ್‍ನಲ್ಲಿ ಯೋಗ, ಆರ್ಯುವೇದ, ಉನಾನಿ, ನ್ಯಾಚುರೋಪತಿ, ಸಿದ್ಧ, ಹೋಮಿಯೋಪತಿ, ಮೆಂಟಲ್ ಹೆಲ್ತ್ ನರ್ಸ್‍ಸ್, ಮೆಂಟಲ್ ಹೆಲ್ತ್ ಪ್ರೋಫೆಶನ್ ಇವೆಲ್ಲವೂ ಬರುತ್ತವೆ. ಕೋವಿಡ್‍ನಂತಹ ಸೋಂಕನ್ನು ಎದುರಿಸಲು ನಮಗೆ ಮಾನಸಿಕ ಸದೃಢತೆ ತುಂಬಾ ಮುಖ್ಯವಾಗಿದ್ದು, ಮಾನಸಿಕ ಆರೋಗ್ಯ ಎಲ್ಲರ ಹಕ್ಕಾಗಿದೆ ಎಂದರು.
ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾನಸಿಕ ಆರೋಗ್ಯ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ಯಾವುದೇ ರಾಷ್ಟ್ರ ಈ ಕರೊನಾವನ್ನು ಎದುರಿಸಲು ಸಾಧ್ಯವಾಗಿಲ್ಲ.ಇದಕ್ಕೆ ಮಾನಸಿಕ ಸ್ವಾಸ್ಥ್ಯ ಸಂತೋಷವಾಗಿರಬೇಕು ಮತ್ತು ದೃಢವಾಗಿರಬೇಕು. ಮನುಷ್ಯ ಮಾನಸಿಕ ಒತ್ತಡ ಹೊಂದುವುದೇ ಅವನು ಏಕಾಂಗಿಯಾಗಿರುವಾಗ, ಒಬ್ಬಂಟಿಯಾಗಿ ಜೀವನ ನಡೆಸುತ್ತಾ ಯಾರ ಬಳಿಯೂ ಏನ್ನನ್ನು ಹಂಚಿಕೊಳ್ಳದೇ ಇರುವಾಗ ಅವನ ಮನಸ್ಸಿಗೆ ಕೆಟ್ಟ ಆಲೋಚನೆಗಳು ಬರುವುದು ಸಹಜ. ಇದರಿಂದಾಗಿ ಜನರು ಆತ್ಮಹತ್ಯೆ ಕ್ರಿಯೆಗೆ ಮುಂದಾಗುತ್ತಾರೆ ಎಂದರು.
ಮಾನಸಿಕವಾಗಿ ಪ್ರಾಥಮಿಕವಾಗಿಯೇ ಲಕ್ಷಣಗಳು ಕಂಡು ಬಂದ ಕೂಡಲೆ ವೈದ್ಯರನ್ನು ಕಂಡು ಅವರ ಬಳಿ ಮುಕ್ತವಾಗಿ ನಮ್ಮ ಮಾನಸಿಕ ತೊಂದರೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಆಗ ಮಾತ್ರ ವೈದ್ಯರು ರೋಗಿಗೆ ಸೂಕ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಈ ಕೋವಿಡ್ ಅಲೆ ಬಂದ ನಂತರ ಸಾಕಷ್ಟು ಮಕ್ಕಳಲ್ಲಿ ಈ ರೀತಿಯ ಮಾನಸಿಕ ಖಿನ್ನತೆಯ ಲಕ್ಷಣಗಳು ಕಂಡು ಬಂದಿವೆ. ಹಾಗಾಗಿ ಸಮಯಕ್ಕೆ ಸರಿಯಾಗಿ ರೋಗಕ್ಕೆ ಸುಕ್ರ ಚಿಕಿತ್ಸೆಯನ್ನು ಪಡೆಯದಿದ್ದರೆ ಭಚಿಷ್ಯದಲ್ಲಿ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಜೆ.ಜೆ.ಎಂ ವೈದೈಕೀಯ ಮಹಾವಿದ್ಯಾಲಯದ ಮನೋವೈದೈಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕೆ. ನಾಗರಾಜರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನಸಿಕ ಆರೋಗ್ಯ ಎಂಬುದು ಕೇವಲ ಮನಸ್ಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದೈಹಿಕವಾಗಿಯೂ ಮನುಷ್ಯನ ಮೇಲೆ ಪರಿಣಾಮ ಬೀರುವಂತಹದ್ದು. ಮಾನಸಿಕ ಸ್ವರೂಪದ ಬಗ್ಗೆ ಬಹಳಷ್ಟು ಜನರಲ್ಲಿ ಗೊಂದಲವಿದೆ. ಮಾನಸಿಕ ರೋಗ ಮತ್ತು ಮಾನಸಿಕವಾಗಿ ಆರೋಗ್ಯ ಎಂದರೆ ಒಂದೇ ಎಂದು ತಿಳಿದುಕೊಂಡಿದ್ದಾರೆ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಅಡಚಣೆ ಉಂಟು ಮಾಡುವ ಮಾನಸಿಕ ಅಸಮತೋಲನವನ್ನು ಮಾನಸಿಕ ರೋಗವೆಂದು ಕರೆಯುತ್ತೇವೆ. ಆದರೆ ಮಾನಸಿಕ ರೋಗಗಳು ತನ್ನಲ್ಲಿರುವ ಮನಃ ಶಕ್ತಿಯನ್ನು ಹೆಚ್ಚಿನ ಸ್ಥಿತಿಗೆ ಕೊಂಡಯ್ಯುವ ಪ್ರಕ್ರಿಯೆಯನ್ನು ಮಾನಸಿಕ ಆರೋಗ್ಯ ಎನ್ನುತ್ತೇವೆ ಎಂದರು.
ಹುಚ್ಚು ಅಲ್ಲದ ಮಾನಸಿಕ ರೋಗಗಳು ಹುಚ್ಚು ಮಾನಸಿಕ ರೋಗಗಳಿಗಿಂತ ಹೆಚ್ಚಿರುತ್ತವೆ. ಬಹಳಷ್ಟು ಜನರು ಮಾನಸಿಕ ರೋಗಕ್ಕೂ, ಮಾನಸಿಕ ಆರೋಗ್ಯಕ್ಕೂ ಇರುವ ವ್ಯತ್ಯಾಸದ ಬಗ್ಗೆ ತಿಳಿದಿಲ್ಲ. ಶೇ. 100 ರಲ್ಲಿ 90 ರಷ್ಟು ಜನರಿಗೆ ಹುಚ್ಚು ಇರುವುದಿಲ್ಲ. ಆದರೆ ಮಾನಸಿಕ ರೋಗಗಳಿವೆ. ಮನೋರೋಗಗಳು ಕೇವಲ ಮಾನಸಿಕ ಲಕ್ಷಣಗಳನ್ನು ಮಾತ್ರ ಹೊಂದಿರುವುದಿಲ್ಲ ದೈಹಿಕ ಲಕ್ಷಣಗಳನ್ನು ಹೊಂದಿರುವ ಲಕ್ಷಣಗಳನ್ನು ಹೊಂದಿವೆ. ನಿದ್ರಾಹೀನತೆ, ತಲೆನೋವು, ಮೈ-ಕೈನೋವು, ಈ ರೀತಿಯ ದೈಹಿಕ ಲಕ್ಷಣಗಳನ್ನು ಒಳಗೊಂಡಿರುತ್ತವೆ. ಈ ಲಕ್ಷಣಗಳು ಬಹಳಷ್ಟು ದಿನಗಳಿಂದ ನಮ್ಮಲ್ಲಿ ಕಾಡುತ್ತಿದ್ದರೆ ಆಗ ಅವು ಮಾನಸಿಕ ರೋಗಕ್ಕೆ ಪರಿವರ್ತಿತ ಆಗುತ್ತವೆ ಎಂದರು.
ನಮ್ಮ ದೈನಂದಿನ ಕಾರ್ಯಗಳಿಗೆ ಅಡಚಣೆ ಉಂಟು ಮಾಡಿದರೆ ಅವು ಮಾನಸಿಕ ರೋಗದ ಮುಖ್ಯ ಲಕ್ಷಣಗಳಾಗಿವೆ. ಕಾನೂನು ಈ ಮಾನಸಿಕ ಆರೋಗ್ಯದ ಜೊತೆ ಹೇಗೆ ಹೊಂದಿಕೊಂಡಿದೆ ಎಂದರೆ ಮಾನಸಿಕ ರೋಗಗಳು ಬಹಳಷ್ಟು ಪ್ರಾಚೀನವಾದದ್ದು, ಮೊದಲನೆಯದಾಗಿ ಭಾರತದಲ್ಲಿ ಬ್ರೀಟಿಷರು 1912 ರಲ್ಲಿ ಜಾರಿಗೆ ತಂದ ಕಾಯ್ದೆಯಲ್ಲಿ ಮಾನಸಿಕ ರೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು, ಅವರನ್ನು ಪ್ರತ್ಯೇಕವಾಗಿ ಎಲ್ಲಿ ಕೇಂದ್ರೀಕರಿಸಬೇಕು ಎಂಬುದನ್ನು ಬ್ರಿಟೀಷರು ಇವರ ಮೇಲೆ ಹೆಚ್ಚಿನ ಕಾಳಜಿ ವಹಿಸಿದರು. ಅವರು ಯಾವುದಾದರೂ ಒಂದು ಅಪರಾಧ ಮಾಡಿದರೆ ಅವರಿಗೆ ಅಪರಾಧಕ್ಕೆ ಸೂಕ್ತ ದಂಡವನ್ನು ವಿಧಿಸುವಂತಿರಲಿಲ್ಲ. ಮಾನಸಿಕ ರೋಗಿಗಳಿಗಾಗಿ ಪ್ರತ್ಯೇಕ ಆಸ್ಪತ್ರೆಗ:ಳನ್ನು ನಿರ್ಮಾಣ ಮಾಡಲಾಯಿತು. ಸಮಾಜವನ್ನು ಮಾನಸಿಕ ರೋಗಿಗಳಿಂದ ರಕ್ಷಿಸುವ ಸಲುವಾಗಿ ನಗರದ ಹೊರಗೆ ಮಾನಸಿಕ ರೋಗಿಗಳ ಆಸ್ಪತ್ರೆಗಳನ್ನು ನಿರ್ಮಿಸಲಾಯಿತು. ಮಾನಸಿಕ ರೋಗಿಯು ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಜನರಲ್ಲಿ ಈ ರೀತಿಯ ಮಾನಸಿಕ ರೋಗಗಳು ಬಹಳಷ್ಟು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಕೋವಿಡ್ ನಂತಹ ಸೋಂಕಿಗೆ ಒಳಪಟ್ಟವರು ಬಹಳಷ್ಟು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಕೂಡ ಪ್ರಯತ್ನಿಸಿದ್ದಾರೆ. ಮನಸಿಕ ಅಸ್ವಸ್ಥರು ವೈದ್ಯರ ಬಳಿ ಬರಲು ಹಿಂಜರಿಯುತ್ತಾರೆ. ವೈದ್ಯರ ಬಳಿ ಬಂದು ಮುಕ್ತವಾಗಿ ತಮ್ಮ ಸಮಸ್ಯೆ ಹೇಳಿಕೊಂಡರೆ ಅವರು ಮುಕ್ತಸಮಾಲೋಚನೆ ಮಾಡುವುದರ ಮೂಲಕ ಮಾನಸಿಕ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಿ ಕಾಯಿಲೆಯನ್ನು ಗುಣಪಡಿಸುತ್ತಾರೆ. ಇದಕ್ಕೆ ಕುಟುಂಬದವರ ಸಹಕಾರವು ಅತ್ಯಗತ್ಯವಾಗುತ್ತದೆ. ಮಾನಸಿಕ ರೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಪ್ರಕರಣಗಳು ಕಾನುನಿನ ಚೌಕಟ್ಟಿನಲ್ಲಿ ದಾಖಲಾಗಿವೆ. ಯುವಕರು ಈ ಮಾನಸಿಕ ಖಿನ್ನತೆಗೆ ಹೆಚ್ಚು ಒಳಗಾಗುತ್ತಿದ್ದಾರೆ. ಡ್ರಗ್ಸ್ ನಂತಹ ಮಾದಕ ವಸ್ತುಗಳಿಗೆ ಮಾರುಹೋಗುತ್ತಿದ್ದಾರೆ. ಇಂತಹವರಿಗೆ ಕಾನೂನಿನ ನಿಯಮಗಳನುಸಾರ ಅವರನ್ನು ಪೊಲೀಸರು ಬಂಧಿಸಿ ಕರೆ ತಂದು ಮಾನಸಿಕ ತಜ್ಞರ ಬಳಿ ಸಮಾಲೋಚನೆ ನಡೆಸಿ ನಂತರ ಅವರನ್ನು ಮಾನಸಿಕ ಸುಧಾರಣಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಕಾನೂನು ಸಹಕಾರ ನೀಡುತ್ತದೆ ಎಂದರು.
ಆದ್ದರಿಂದ ಈ ಮಾನಸಿಕ ರೋಗವನ್ನು ಒಂದು ರೋಗವೆಂದುಕೊಳ್ಳದೆ ವೈದ್ಯರ ಬಳಿ ಬಂದು ಸೂಕ್ತ ಸಲಹೆಯನ್ನು ಪಡೆದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಾತನಾಡಿ, ಮಾನಸಿಕ ಆರೋಗ್ಯ ಮನುಷ್ಯನಿಗೆ ಹೇಗೆ ಮುಖ್ಯವೋ ಹಾಗೇ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ಮನುಷ್ಯ ದೈಹಿಕವಾಗಿ ದೃಢವಾಗಿದ್ದಾನೆ ಎಂದರೆ ಅವನು ಮಾನಸಿಕವಾಗಿಯೂ ದೃಢವಾಗಿದ್ದಾನೆ ಎಂದರ್ಥವಲ್ಲ. ಪ್ರತಿ ಒಬ್ಬ ಮನುಷ್ಯನಿಗೂ ಮಾನಸಿಕ ಒತ್ತಡಗಳು ಸಹಜ ಆದರೆ ಅವುಗಳಿಗೆ ಸೂಕ್ತವಾದ ಸಮಯದಲ್ಲಿ ಸಂಬಂಧಿಸಿದ ವೈದ್ಯರೊಂದಿಗೆ ತಮ್ಮ ಮಾನಸಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವರಿಂದ ಸಲಹೆ, ಚಿಕಿತ್ಸೆ ಪಡೆದರೆ ಮಾನಸಿಕ ಖಿನ್ನತೆಗಳಿಂದ ಹೊರಬಂದು ನಾವು ಸಾಮನ್ಯ ಜನರಂತೆ ಜೀವಿಸಬಹುದು ಎಂದರು.
ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಯುವಕರು ಚಿಕ್ಕ-ಚಿಕ್ಕ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಪೋಷಕರು ಮಕ್ಕಳಲ್ಲಿ ಪ್ರೋತ್ಸಾಹಕ್ಕಿಂತ ಹೆಚ್ಚಾಗಿ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವನೆಗಳಿಂದ ಬೆಳೆಸುತ್ತಿದ್ದಾರೆ. ಅವರಲ್ಲಿ ಕೇವಲ ಸ್ಪರ್ಧಾತ್ಮಕ ಜೀವನಕ್ಕೆ ಹೊಂದಿಕೊಳ್ಳುವಂತೆ ಮಾಡಿ ಅವರಿಗೆ ಪರೋಕ್ಷವಾಗಿ ಮಾನಸಿಕ ಒತ್ತಡಕ್ಕೆ ಗುರಿ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಮಾನಸಿಕ ಖಿನ್ನತೆಗಳಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ಸಹಾಯಕ ನಿರ್ದೇಶಕರು, ಅಭಿಯೋಜನ ಇಲಾಖೆ, ಮತ್ತು ಕಾನೂನು ಅಧಿಕಾರಿ ಕಲ್ಪನಾ ಕೆ.ಜೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಮುರುಳೀಧರ.ಪಿ.ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಆರ್‍ಸಿಹೆಚ್ ಡಾ. ಮೀನಾಕ್ಷಿ ಹಾಗೂ ಇನ್ನುಳಿದ ಆರೋಗ್ಯಾಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here