UNICEF ರಾಷ್ಟೀಯ ತಂಡ ಭೇಟಿ, ಲಸಿಕಾಕರಣದ ಜಾಗೃತಿ ಕಾರ್ಯಕ್ಕೆ ಮೆಚ್ಚುಗೆ

0
36

ಬಳ್ಳಾರಿ,ಜೂ.02: ಜಿಲ್ಲೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಂಗವಾಗಿ ಸಮುದಾಯದ ಸಹಭಾಗಿತ್ವಕ್ಕಾಗಿ ವಿಶೇಷವೆನಿಸುವ ರೀತಿಯಲ್ಲಿ 2018 ರಲ್ಲಿ ಅಂತರವ್ಯಕ್ತಿ ಸಂವಹನ ಕೌಶಲ್ಯ ಕುರಿತ BRIDGE ತರಬೇತಿಯನ್ನು ಸಿದ್ದಪಡಿಸಿ ನೀಡಲ್ಪಟ್ಟ ಸಂಪೂರ್ಣ ಲಸಿಕಾಕರಣಕ್ಕೆ ಬಳ್ಳಾರಿ ಜಿಲ್ಲೆಯು ಮಾದರಿಯಾಗಿದ್ದು, UNICEF ರಾಷ್ಟೀಯ ತಂಡವು ಮೆಚ್ಚುಗೆ ವ್ಯಕ್ತಪಡಿಸಿದೆ.

ಮಕ್ಕಳ ಲಸಿಕಾಕರಣಕ್ಕೆ ಸಮುದಾಯದ ಸಹಭಾಗಿತ್ವಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯವರು ತಾಯಂದಿರ ಭೇಟಿ, ಸಭೆಗಳ ಏರ್ಪಡಿಸುವಿಕೆ, ಜನಪ್ರತಿನಿಧಿಗಳು ಮತ್ತು ಧಾರ್ಮಿಕ, ಸಮುದಾಯದ ಮುಖಂಡರೊಂದಿಗಿನ ಸಂವಹನದ ಕುರಿತು ಮೌಲ್ಯಮಾಪನ ಕೈಗೊಳ್ಳಲು ಭೇಟಿ ನೀಡಿದ ತಂಡವು ಜನತೆಯ ಅಭಿಪ್ರಾಯಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿತು.

ತಂಡದ ಸದಸ್ಯರಾದ ಸುಧಾ ನಾಯರ್, ಅಂಜಲಿ ಅಯ್ಯರ್‌ ನೇತೃತ್ವದಲ್ಲಿ ಕೇಂದ್ರದ UNICEF ತಂಡವು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್‌.ಎಲ್‌.ಜನಾರ್ಧನ ಅವರನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುನಿಸೇಫ್‌ನ ಆರೋಗ್ಯ ಜಾಗೃತಿ ವಿಭಾಗದ ರಾಜ್ಯ ಸಲಹೆಗಾರರಾದ ಮನೋಜ್‌ ಸ್ಟೇಬಾಸಿನ್‌, ಶ್ರೀಕರ್‌ ತಂಡದೊಂದಿಗೆ ಇದ್ದರು. ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿ ಡಾ.ಆರ್‌.ಅನೀಲ್ ಕುಮಾರ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಉಷಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಾಧಿಕಾರಿ ಶಾಂತಮ್ಮ ಅವರಿಂದ ಮಾಹಿತಿ ಪಡೆದರು.

ಯುನಿಸೇಫ್ ತಂಡವು ದಮ್ಮೂರು ಗ್ರಾಮ, ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಡಾ.ತರುಣ್‌, ಡಾ.ರೇಷ್ಮಾ, ಪ್ರಾಥಮಿಕ ಸುರಕ್ಷಾಧಿಕಾರಿ ಶಮಷಾದ್‌ ಬೇಗಂ, ಚಂದ್ರಿಕಾ, ಜಯಶ್ರೀ ಆಶಾ ಕಾರ್ಯಕರ್ತೆ ಪರಿಮಳ, ಪ್ರತೀಕ್ಷ ಹಾಗೂ ತಾಯಂದಿರು, ಮುಖಂಡರ ಮೂಲಕ ಕಾರ್ಯವಿಧಾನದ ಕುರಿತು ಪ್ರತ್ಯೇಕವಾಗಿ ಸಂದರ್ಶನ ಕೈಗೊಂಡರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಬಸವ, ಸಮುದಾಯ ಆರೋಗ್ಯ ಅಧಿಕಾರಿ ಭರತ, ಔಷಧಿ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here