ತೋರಣಗಲ್ಲು ಐಟಿಐ ಕಾಲೇಜ್ ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

0
335

ಸಂಡೂರು: ಜ: 25: ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತೋರಣಗಲ್ಲು ಐ.ಟಿ.ಐ ಕಾಲೇಜು, ಹಾಗೂ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಮತದಾನ ಕುರಿತು ಮಾತನಾಡಿದ ಮುಖ್ಯ ಶಿಕ್ಷಕ ಎಮ್.ಎಸ್ ಹೊನ್ನೂರ್ ಸಾಬ್ ಉಜ್ವಲ ಭವಿಷ್ಯದ ರಾಷ್ಟ್ರ ಕಟ್ಟುವ ಶಕ್ತಿ ಯುವ ಮತದಾರರಲ್ಲಿದೆ, ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು, ಉತ್ತಮರನ್ನು ಆಯ್ಕೆ ಮಾಡಿದಲ್ಲಿ ದೇಶ ಸದೃಡವಾಗುವುದು, ಚುನಾವಣೆಗೆ ಅಸಮರ್ಥರು ಇದ್ದಾಗ ನೋಟ ಬಟನ್ ಒತ್ತಿ ಮತದಾನಕ್ಕೆ ಬೆಂಬಲ ಸೂಚಿಸಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಚುನಾವಣೆಗಳು ಮುಕ್ತ, ನ್ಯಾಯ ಸಮ್ಮತ, ಶಾಂತಿಯುತವಾಗಿ ನಡೆಯಬೇಕು, ಚುನಾವಣೆಯ ಘನತೆ ಎತ್ತಿ ಹಿಡಿಯಲು ನಿರ್ಭೀತರಾಗಿ, ಜಾತಿ,ಧರ್ಮ, ಮತ,ಭಾಷೆ,ದುಡ್ಡಿನ ಪ್ರೇರಣೆಯ ದಾಕ್ಷಿಣ್ಯಕ್ಕೆ ಒಳಗಾಗದೇ ಮತ ಚಲಾಯಿಸುವ ಹಕ್ಕು ಪ್ರತಿಯೊಬ್ಬ ನಾಗರೀಕರಿಗೂ ಇದೆ ಎಂದು ತಿಳಿಸಿದರು, ನಂತರ ಪ್ರತಿಜ್ಞೆಯನ್ನು ಬೋಧಿಸಿದರು ಭಾಗವಹಿಸಿದ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು,

ಈ ಸಂದರ್ಭದಲ್ಲಿ ಐ.ಟಿ.ಐ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಶೋಭಾ ಹಿರೇಮಠ, ಫೀರೋಜ್ ಖಾನ್,ಬಸವರಾಜ್, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಮ್.ಎಸ್ ಹೊನ್ನೂರು ಸಾಬ್, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ಪ್ರಶಾಂತ್, ವಿದ್ಯಾರ್ಥಿಗಳಾದ ನವೀನ್, ಬಸವರಾಜ್, ಪ್ರದೀಪ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here