2816.51 ಕೋಟಿ ಕೃಷಿ ವಲಯ ಸೇರಿದಂತೆ 4619.65 ಕೋಟಿಗಳ ಗುರಿ ನಿಗದಿ, ನಬಾರ್ಡ್ ಸಂಭಾವ್ಯ ಸಾಲ ಯೋಜನೆ ಬಿಡುಗಡೆ:ಕೃಷಿಗೆ ವಿಶೇಷ ಒತ್ತು!

0
94

ಬಳ್ಳಾರಿ,ಡಿ.02 : ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್(ನಬಾರ್ಡ್) ಸಿದ್ದಪಡಿಸಿರುವ ಸಂಭಾವ್ಯ ಸಾಲಯೋಜನೆ ಬಿಡುಗಡೆ ಮಾಡಲಾಗಿದ್ದು, ರೂ.4619.65ಕೋಟಿ ರೂ.ಗುರಿ ನಿಗದಿಪಡಿಸಲಾಗಿದೆ. ಕೃಷಿಗೆ ವಿಶೇಷ ಒತ್ತು ನೀಡಿರುವುದು ಗಮನಾರ್ಹ.
2022-23ನೇ ಸಾಲಿನ ವಿವಿಧ ಕ್ಷೇತ್ರಗಳಿಗಾಗಿ ರೂ. ರೂ.4619.65ಕೋಟಿ ರೂ.ಗುರಿ ನಿಗದಿಪಡಿಸಲಾಗಿದೆ. ಕಳೆದ ವರ್ಷ 10010.38ಕೋಟಿ ರೂ.ಗಳ ಸಂಭಾವ್ಯ ಗುರಿ ಇಟ್ಟುಕೊಳ್ಳಲಾಗಿತ್ತು;ಅದರಲ್ಲಿ 6686.56 ಕೋಟಿ ರೂ.ಗಳ ಗುರಿ ಸಾಧಿಸಿ ಇಟ್ಟುಕೊಂಡಿದ್ದ ಸಂಭಾವ್ಯ ಗುರಿಯಲ್ಲಿ ಶೇ.67ರಷ್ಟು ಪ್ರಗತಿ ಸಾಧಿಸಲಾಗಿದೆ.
ಬಳ್ಳಾರಿ ಜಿಲ್ಲೆಯ 5 ತಾಲೂಕುಗಳಿಗೆ ಸೀಮಿತವಾಗಿ ಈ ಸಾಲಯೋಜನೆ ಸಿದ್ದಪಡಿಸಲಾಗಿದೆ. ಕೃಷಿಯಲ್ಲಿ ರೈತರಿಗೆ ಬೆಳೆಸಾಲಕ್ಕಾಗಿ ರೂ.2383.43 ಕೋಟಿ,ಕೃಷಿಗೆ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ರೂ.168.66 ಕೋಟಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗಾಗಿ ರೂ.264.42 ಕೋಟಿ ರೂ. ಸಂಭಾವ್ಯ ಗುರಿ ಹಾಕಿಕೊಳ್ಳಲಾಗಿದೆ.
ಕೃಷಿಗೆ ಸಂಬಂಧಿಸಿದ ಬೆಳೆ ಉತ್ಪಾದನೆ,ನಿರ್ವಹಣೆ ಮತ್ತು ಮಾರುಕಟ್ಟೆಗೆ ರೂ.186013.35ಲಕ್ಷ, ಜಲಸಂಪನ್ಮೂಲಕ್ಕೆ ರೂ.4775.77 ಲಕ್ಷ, ಕೃಷಿ ಯಾಂತ್ರೀಕರಣಕ್ಕಾಗಿ ರೂ.9640.78ಲಕ್ಷ, ತೋಟಗಾರಿಕೆ (ರೇಷ್ಮೆ ಕೃಷಿ ಸೇರಿ) ಚಟುವಟಿಕೆಗಳಿಗಾಗಿ ರೂ.7707.16ಲಕ್ಷ, ಪಶುಪಾಲನೆ-ಹೈನುಗಾರಿಕೆ ವಲಯಗಳಿಗೆ ರೂ.8343.38ಲಕ್ಷ, ಪಶುಸಂಗೋಪನೆ-ಕೋಳಿ ರೂ.10557.34 ಲಕ್ಷ,ಪಶುಪಾಲನೆ-ಕುರಿ, ಮೇಕೆ, ಹಂದಿ ಸಾಕಣೆಗಳಿಗೆ ರೂ.4516.24ಲಕ್ಷ, ಮೀನುಗಾರಿಕೆ(ಸಾಗರ,ಒಳನಾಡು,ಉಪ್ಪುನೀರು)ಗೆ ರೂ.1765.09 ಲಕ್ಷ, ಕೃಷಿ ಮೂಲಸೌಕರ್ಯ ಅಡಿ ಶೇಖರಣಾ ಸೌಲಭ್ಯಗಳ ನಿರ್ಮಾಣ(ಗೋದಾಮುಗಳು, ಮಾರುಕಟ್ಟೆ ಅಂಗಳಗಳು,ಗೋಡೌನ್‍ಗಳು, ಸಿಲೋಸ್, ಕೋಲ್ಡ್ ಸ್ಟೋರೇಜ್ ಘಟಕಗಳು/ ಕೋಲ್ಡ್ ಸ್ಟೋರೇಜ್ ಸರಪಳಿಗಳು)ಗಳಿಗಾಗಿ ರೂ.7038ಲಕ್ಷ, ಭೂ ಅಭಿವೃದ್ಧಿ, ಮಣ್ಣಿನ ಸಂರಕ್ಷಣೆ, ಜಲಾನಯನ ಅಭಿವೃದ್ಧಿಗಳಿಗಾಗಿ ರೂ.9487.23ಲಕ್ಷ,ಇತರೆ (ಟಿಶ್ಯೂ ಕಲ್ಚರ್, ಅಗ್ರಿ ಬಯೋ-ಟೆಕ್ನಾಲಜಿ, ಬೀಜ ಉತ್ಪಾದನೆ,ಜೈವಿಕ ಕೀಟನಾಶಕಗಳು/ ರಸಗೊಬ್ಬರಗಳು, ವರ್ಮಿ ಕಾಂಪೆÇೀಸ್ಟಿಂಗ್)ಗಳಿಗಾಗಿ ರೂ.340.64 ರೂ. ಸಂಭಾವ್ಯ ಗುರಿ ನಿಗದಿ ಮಾಡಿಕೊಳ್ಳಲಾಗಿದೆ.
ಆಹಾರ ಮತ್ತು ಕೃಷಿ ಸಂಸ್ಕರಣೆ ಚಟುವಟಿಕೆಗಳಿಗಾಗಿ 4678.51ಲಕ್ಷ ರೂ.,ಇತರೇ ಕೃಷಿ ಪೂರಕ ಚಟುವಟಿಕೆಗಳಿಗಾಗಿ ರೂ.21763.84ಲಕ್ಷ ನಿಗದಿಪಡಿಸಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ 1262.27 ಕೋಟಿ ರೂ., ರಫ್ತುಗಳಿಗಾಗಿ ರೂ.74.40ಕೋಟಿ, ಶಿಕ್ಷಣಕ್ಕಾಗಿ ರೂ.51.97 ಕೋಟಿ, ವಸತಿಗಳಿಗಾಗಿ ರೂ.386.60ಕೋಟಿ, ನವೀಕರಿಸಬಹುದಾದ ಶಕ್ತಿಗಳಿಗಾಗಿ ರೂ.2.37ಕೋಟಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಇನ್ನೀತರ ಚಟುವಟಿಕೆಗಳಿಗಾಗಿ ರೂ.25.53 ಕೋಟಿಗಳ ಸಂಭಾವ್ಯ ಸಾಲಯೋಜನೆಯ ಗುರಿಯನ್ನು ನಬಾರ್ಡ್ ಸಿದ್ದಪಡಿಸಿದೆ.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್‍ಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಆರ್.ನಂದಿನಿ ಅವರು ಬಿಡುಗಡೆ ಮಾಡಿದರು.
ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ಈಗ ಹಾಕಿಕೊಳ್ಳಲಾಗಿರುವ ಸಂಭಾವ್ಯ ಸಾಲಯೋಜನೆಯ ಯಶಸ್ವಿಯಾಗಬೇಕಾದರೇ ಇಲಾಖೆಗಳು ಮತ್ತು ಬ್ಯಾಂಕ್‍ಗಳ ಮಧ್ಯೆ ಸಮನ್ವಯ ಅತ್ಯಂತ ಅಗತ್ಯವಾಗಿದೆ ಎಂದರು.
ಇಲಾಖೆಗಳು ತಮ್ಮ ವಿವಿಧ ಯೋಜನೆಗಳ ಫಲಾನುಭವಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಆಯ್ಕೆ ಮಾಡಿ ಸಮರ್ಪಕ ದಾಖಲೆಗಳೊಂದಿಗೆ ಬ್ಯಾಂಕ್‍ಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಬೇಕು;ಬ್ಯಾಂಕ್‍ಗಳು ಸಹ ನಿಗದಿಪಡಿಸಿದ ಅವಧಿಯೊಳಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದ ಅವರು ಅಂದಾಗ ಮಾತ್ರ ಅರ್ಥಿಕ ಚಟುವಟಿಕೆಗಳು ಗರಿಗೆದರಲು ಸಾಧ್ಯ ಮತ್ತು ಜಿಲ್ಲೆಯ ಅರ್ಥಿಕ ಸ್ವಸ್ಥತೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ನವೀನಕುಮಾರ್, ನಬಾರ್ಡ್ ಡಿಡಿಎಂ ಆರ್.ಎಸ್.ಯುವರಾಜಕುಮಾರ್, ಭಾರತೀಯ ರಿಸರ್ವಬ್ಯಾಂಕ್ ಎಜಿಎಂ ಶುಕ್ಲಾ ಬ್ಯಾನರ್ಜಿ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಬಾಲಾಜಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here