ಹೊಸದರೋಜಿ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ,

0
341

ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅರೋಗ್ಯ ಇಲಾಖೆಯ ಸಹಯೋಗದಲ್ಲಿ ಆಶ್ರಯ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ “ವಿಶ್ವ ಪರಿಸರ ದಿನ” ಆಚರಿಸಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ವಿರೂಪಾಕ್ಷಪ್ಪ ಮಾತನಾಡಿ ಮಾನವ ಆರೋಗ್ಯವಾಗಿರಲು ಉತ್ತಮ ಪರಿಸರದ ಅಗತ್ಯತೆ ಇದೆ, ಮಾಲಿನ್ಯ ತಡೆಯಬೇಕು, ಗಿಡ ನೆಡಬೇಕು, ಹಾಗೆ ಬೆಳೆಸಬೇಕು, ಮನೆಗೊಂದು ಗಿಡ – ಊರಿಗೊಂದು ವನ ಈ ಮಾತಿನಂತೆ ಎಲ್ಲರೂ ಗಿಡಗಳನ್ನು ನೆಟ್ಟು ಪರಿಸರವನ್ನು ರಕ್ಷಿಸೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪರಿಸರಕ್ಕೆ ವಿನಾಶಕಾರಿ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂ ಪ್ರೇರಿತರಾಗಿ ನಿಷೇದಿಸಬೇಕು, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದೆ, ಪ್ಲಾಸ್ಟಿಕ್ ಹೊರತುಪಡಿಸಿ ಪರ್ಯಾಯವಾಗಿ ಇತರೆ ವಸ್ತುಗಳನ್ನು ಬಳಸಲು ಸಿದ್ದರಾಗಬೇಕು, ಪ್ಲಾಸ್ಟಿಕ್ ನಿಂದ ಪ್ರಾಣಿಗಳಿಗೂ, ಪಕ್ಷಿಗಳಿಗೂ ಅಪಾಯವಿದೆ, “ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ” ರೂಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ, ಆರೋಗ್ಯವನ್ನು ಸಂರಕ್ಷಿಸಿಕೊಳ್ಳೋಣ ಎಂದು ತಿಳಿಸಿದರು, ನಂತರ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು,

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಗಾಯಿತ್ರಿ, ಮಂಗಳಗೌರಿ,ಶಾಂತಮ್ಮ, ಅನಸೂಯಾ, ಶಾಲೆಯ ಸಹ ಶಿಕ್ಷಕರಾದ ಜಯಮ್ಮ, ಮಂಗಳಗೌರಿ, ರಂಜಿತಾ, ವಿದ್ಯಾರ್ಥಿಗಳಾದ ಕಾವೇರಿ,ಸಹನಾ,ಪವಿತ್ರ,ಗಂಗೋತ್ರಿ, ರಾಧಿಕ, ಬಾಲಾಜಿ,ರಾಜೇಶ,ನರಸಿಂಹ, ನವೀನ್ ಅಂಗನವಾಡಿ ಸಹಾಯಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here