ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಉಕ್ಕಿನ ಮಹಿಳೆ -ವಿಜಯವಾಣಿ

0
54

ಹೊಸಪೇಟೆ (ವಿಜಯನಗರ ಜಿಲ್ಲೆ ) ಜೂ. 21 : ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಜೂನ್ 17ಮತ್ತು 18ರಂದು ಎರಡು ದಿನಗಳಕಾಲ ಧಾರವಾಡದ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಹುಬ್ಬಳ್ಳಿಯ ಇಂಟರ್ನಲ್ ಜಿಮ್ ವತಿಯಿಂದ ಹುಬ್ಬಳ್ಳಿಯ ರೈಲ್ವೆ ಶತಾಬ್ದಿ ಭವನದಲ್ಲಿ ಏರ್ಪಡಿಸಲಾಗಿತ್ತು.

ಮಹಿಳೆಯರ ಸೀನಿಯರ್ 76 ಕೆಜಿ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ವಿಜಯವಾಣಿ ಯವರು ಸ್ಪರ್ಧೆಯಲ್ಲಿ ಭಾಗವಹಿಸಿ 412.5ಕೆಜಿ ಬಾರ ಎತ್ತಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 412.5ಕೆಜಿ ಎತ್ತುವುದರ ಮೂಲಕ ತಮ್ಮದೇ ಆದ ಹಳೆಯ 410ಕೆಜಿ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಬೆಂಚ್ ಪ್ರೆಸ್ ನಲ್ಲಿ 95 ಕೆಜಿ ರೆಕಾರ್ಡ್, ಡೆಡ್ ಲಿಫ್ಟಿಂಗ್ 165 ಕೆಜಿ ರೆಕಾರ್ಡ್, ಸ್ಕ್ವಾರ್ಟ್ ನಲ್ಲಿ 152 ಕೆಜಿ, ಸೇರಿದಂತೆ ಒಟ್ಟು ಲಿಫ್ಟ್ ರೆಕಾರ್ಡ್ 412.5 ಕೆಜಿ ಎತ್ತಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇವರ ಈ ಸಾಧನೆ ರಾಷ್ಟ್ರಮಟ್ಟದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೀಗೆ ಮುಂದುವರಿಯಲಿ ಹಾಗೂ ವಿಜಯನಗರ ಜಿಲ್ಲೆಗೆ ಹಾಗೂ ನಮ್ಮ ರಾಜ್ಯ,ರಾಷ್ಟ್ರಕ್ಕೆ ಕೀರ್ತಿಯನ್ನು ತರಲಿ ಎಂದು ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಪದಕ ವಿಜೇತ ಹಾಗೂ ವಿಕ್ಟರಿ ಜಿಮ್ ನ ತರಬೇತಿದಾರರು ವಲಿಬಾಷ ಮತ್ತು ಜಿಮ್ ನ ಎಲ್ಲಾ ಕ್ರೀಡಾಪಟುಗಳು ಹಾಗೂ ನಗರದ ಕ್ರೀಡಾಭಿಮಾನಿಗಳು ಶುಭ ಕೊರಿದ್ದಾರೆ.

LEAVE A REPLY

Please enter your comment!
Please enter your name here