ಬೇತಲ್ ಮಕ್ಕಳ ಮನೆಯಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿ ಆಚರಣೆ

0
67

ಸಿಂಧನೂರಿನ ಒಳಬಳ್ಳಾರಿ ರಸ್ತೆಯಲ್ಲಿರುವ ಬೇತಲ್ ಮಕ್ಕಳ ಮನೆ ಆಶ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ 888ನೇ‌ಜಯಂತಿಯನ್ನು ಜೀವ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಭಾವಚಿತ್ರಕ್ಕೆ ಮಾಡಿ ಮಾಲಾರ್ಪಣೆ ಮಾಡಿ ಮಕ್ಕಳಿಗೆ ವಚನಗಳ ಮಹತ್ವವನ್ನು ತಿಳಿಸುವ ಮೂಲಕ ಆಚರಿಸಲಾಯಿತು.

ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ ದೇಶಪಾಂಡೆ ಮಾತನಾಡಿ, ಸಮಾನತೆಯ ಹರಿಕಾರ ಮತ್ತು ಕ್ರಾಂತಿಕಾರಿ ಬದಲಾವಣೆ ತಂದ ಬಸವಣ್ಣನವರು, ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡಬೇಕು ಎನ್ನುವ ಈ ಪರಿಕಲ್ಪನೆ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಂದೆ ಸಾಗಲು ಸಹಾಯಕವಾಗಿದೆ. ಹೀಗಾಗಿ ವಿಶ್ವಗುರು ಬಸವಣ್ಣನವರು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ ಎಂದರು.

ಮಧ್ಯಾಹ್ನ ಬಸವ ಜಯಂತಿ ಅಂಗವಾಗಿ ಸಿಹಿ ಭೋಜನವನ್ನು ಸಹನಾ ಮೆಡಿಕಲ್ ರಾಜಶೇಖರ ಪಾಟೀಲ್ ಸರ್ ಮಕ್ಕಳಿಗಾಗಿ ಕಳಿಸಿದ್ದನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಜೀವ ಸ್ಪಂದನ ಸೇವಾ ಸಂಸ್ಥೆ ಗೌರವಾಧ್ಯಕ್ಷ ಹನುಮೇಶ ಜಾಗೀರದಾರ,ಬೇತಲ್ ಮಕ್ಕಳ ಮನೆ ಮುಖ್ಯಸ್ಥ ಜೋಸೆಫ್ ಕ್ರಿಸ್ಟೋಫರ್, ರಾಮಯ್ಯ ಸೇರಿದಂತೆ ಹಲವರಿದ್ದರು

LEAVE A REPLY

Please enter your comment!
Please enter your name here