ತೋರಣಗಲ್ಲು ಗ್ರಾಮದಲ್ಲಿ 9ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ,

0
325

ಸಂಡೂರು:ಜೂ:21:ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಮತ್ತು ಶ್ರೀ ಕಾಶಿ ವಿಶ್ವನಾಥ ಪಿರಮಿಡ್ ಧ್ಯಾನ ಕೇಂದ್ರದ ಸಹಯೋಗದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆಚರಿಸಲಾಯಿತು, ಧ್ಯಾನ ಕೇಂದ್ರದ ಯೋಗ ಗುರು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಧ್ಯಾನ ಮತ್ತು ಯೋಗ ನಡೆಯಿತು, ಈ ಸಂದರ್ಭದಲ್ಲಿ ಅವರು ಮಾತನಾಡಿ ಮನಸ್ಸನ್ನು ಹತೋಟಿಯಲ್ಲಿಡಲು ಮತ್ತು ಪ್ರತಿದಿನ ಉಲ್ಲಾಸಕರವಾಗಿರ ಬೇಕಾದರೆ ಧ್ಯಾನ ಅತಿಮುಖ್ಯವಾಗಿದೆ, ಪ್ರತಿದಿನ ನಡೆಯುವ ಧ್ಯಾನ ಶಿಬಿರದಲ್ಲಿ ಎಲ್ಲರೂ ಪಾಲ್ಗೊಳ್ಳಲು ಮನವಿ ಮಾಡಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಲೇಬೇಕು, ಧ್ಯಾನ ಮತ್ತು ಯೋಗದಿಂದ ಹಲವಾರು ಅಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟ ಬಹುದು, ಮನಸ್ಸನ್ನು ಹತೋಟಿಯಲ್ಲಿಡಲು ಯೋಗ ಧ್ಯಾನ ಸಹಕಾರಿಯಾಗಿದೆ, 184 ದೇಶಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿವೆ, ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ್ದು ನಮ್ಮ ದೇಶದ ಹೆಮ್ಮೆ, ಈ ವರ್ಷದ ಘೋಷ ವಾಕ್ಯ “ಆರೋಗ್ಯಕ್ಕಾಗಿ ವಸುದೈವ ಕುಟುಂಬಕಂ” ಆಗಿದ್ದು, 184 ದೇಶಗಳೂ ಯೋಗ ಮಾಡಲು ಒಂದಾಗಿವೆ, ಈ ವರ್ಷ ವಿಶ್ವ ಸಂಸ್ಥೆಯಲ್ಲಿ ಮಾನ್ಯ ಪ್ರಧಾನಿಯವರು ಯೋಗ ದಿನ ಆಚರಿಸುತ್ತಿರುವುದು ನಮಗೆಲ್ಲಾ ಸಂತಸ ತರುವ ವಿಷಯವಾಗಿದೆ, ಇದಕ್ಕೆ ಕಾರಣೀಭೂತರಾದ ಎಲ್ಲಾ ಮಹನೀಯರಿಗೆ ಅಭಿನಂದನೆಗಳು ಅರ್ಪಿಸಬೇಕಿದೆ, ಈ ದಿನ ಯೋಗ ಮತ್ತು ಧ್ಯಾನ ಶಿಬಿರ ನಡೆಸಿಕೊಟ್ಟ ಶ್ರೀಮತಿ ಗಿರಿಜಮ್ಮ, ರಾಜೇಶ್ವರಿ, ಪ್ರಿಯಾಂಕಾ ಮತ್ತು ನಾಗರಾಜ್ ಅವರಿಗೆ ಇಲಾಖೆವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ಅವರು ತಿಳಿಸಿ ಧ್ಯಾನ ಗುರುಗಳಿಗೆ ಶಾಲು ಹಾಕಿ ಗೌರವ ಸಲ್ಲಿಸಿದರು,

ಈ ಸಂದರ್ಭದಲ್ಲಿ ಅಂಗವಾಡಿ ಮೇಲ್ವಿಚಾರಕಿ ಲಕ್ಷ್ಮಿ ಕಂಕಣವಾಡಿ, ನಿವೃತ್ತ ಅಂ.ವಾ ಶಿಕ್ಷಕಿ ಸುನಂದಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಧ್ಯಾನ ಗುರುಗಳಾದ ನಾಗರಾಜ್, ಯೋಗ ಗುರುಗಳಾದ ಗಿರಿಜಮ್ಮ,ಪ್ರಿಯಾಂಕ, ರಾಜೇಶ್ವರಿ,ಕಾರ್ಯಕ್ರಮ ಆಯೋಜಿಸಲು ಸಹಕಾರ ನೀಡಿದ ಹಿರಿಯ ಮಹಿಳೆ ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ, ಸ್ವಾತಿ, ಮಲ್ಲಮ್ಮ,ಜಯಪ್ರಧ,ರುದ್ರಮ್ಮ,ಪ್ರತಿಭಾ,ತಿಮ್ಮಕ್ಕ, ಪಾರ್ವತಮ್ಮ, ಲಕ್ಷ್ಮಿದೇವಿ, ಆಶಾ ಕಾರ್ಯಕರ್ತೆ ನೀಲಮ್ಮ, ಉಮಾದೇವಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here