ಮಕ್ಕಳಿಗೆ ಶಿಕ್ಷಣದೊಂದಿಗೆ ಆರೋಗ್ಯದ ಬಗ್ಗೆ ಕಾಳಜಿಯೂ ಇರಬೇಕು; ಮುಖ್ಯ ಶಿಕ್ಷಕಿ ಪಾರ್ವತಿ,

0
210

ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿಡಿಯೋ ಪ್ರದರ್ಶನದ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಅವರು ಮಕ್ಕಳನ್ನು ಉದ್ದೇಶಿಸಿ ಸಲಹೆ ನೀಡುತ್ತಾ ವೈಯಕ್ತಿಕ ಸ್ವಚ್ಛತೆ, ಮನೆಯ ಪರಿಸರ‌ ನೈರ್ಮಲ್ಯ ಕಾಪಾಡುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಇರಬೇಕು, ಆರೋಗ್ಯವಾಗಿದ್ದಾಗ ಮಾತ್ರ ಆಸಕ್ತಿಯಿಂದ ಪಾಠ ಕೇಳಲು ಸಾಧ್ಯವಾಗುತ್ತದೆ, ವಿಡಿಯೋ ಮೂಲಕ ಅರಿವು ಮೂಡಿಸುತ್ತಿರುವುದು ಉತ್ತಮವಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಾಂಕ್ರಾಮಿಕ ರೋಗಗಳು ಆರೋಗ್ಯಕ್ಕೆ ಮಾರಕ, ಕ್ಷಯರೋಗ ಮತ್ತು ಕುಷ್ಠರೋಗ ನಿರ್ಮೂಲನೆ ಹಂತದಲ್ಲಿದ್ದು ಯಾರಿಗಾದರೂ ಮಚ್ಚೆಗಳು, ನಿರಂತರ ಕೆಮ್ಮು, ಜ್ವರ,ಸುಸ್ತು ಇರುವವರನ್ನು ಕಂಡರೆ ಆಸ್ಪತ್ರೆಗೆ ಹೋಗಲು ಮನವೊಲಿಸುವ ಕಾರ್ಯ ಮಾಡಿ, ಸೊಳ್ಳೆಗಳ ಉತ್ಪತ್ತಿಯಾಗುವ ತಾಣಗಳ ಬಗ್ಗೆ ನಿಗ ಇರಲಿ ಎಂದು ತಿಳಿಸುತ್ತಾ, ಒಂದೊಂದು ವಿಡಿಯೋ ಪ್ರದರ್ಶನದ ನಂತರ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಪೆನ್ನುಗಳನ್ನು ನೀಡಲಾಗುವದು, ಚಿತ್ತವಿಟ್ಟು ವಿಡಿಯೋ ನೋಡಬೇಕು ಎಂದು ತಿಳಿಸಿದರು, ವಿಡಿಯೋ ಪ್ರದರ್ಶನವನ್ನು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಅನುಷಾ,ಮಂಜುಳಾ, ಸುಮಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here