ಹಾಯ್ ಸಂಡೂರ್ ಪತ್ರಿಕೆಯ ವರದಿಗೆ ಕಣ್ ಬಿಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು :ವೈದ್ಯರು ಮತ್ತು ಸಿಬ್ಬಂದಿ ನೇಮಕ.

0
161

ಕೊಟ್ಟೂರು:ಆಗಸ್ಟ್: 27:- ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಬಡ ರೋಗಿಗಳು ತಮ್ಮ ಆರೋಗ್ಯವನ್ನು ತೋರಿಸಿಕೊಳ್ಳಲು ಕೊಟ್ಟೂರು ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ ಆದರೆ ವೈದ್ಯರು ಇಲ್ಲದೆ ರೋಗಿಗಳು ದಿನ ನಿತ್ಯ ಪರದಾಡುವ ಸ್ಥಿತಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ.

ಈ ಸಮಸ್ಯೆಯನ್ನು ಹಾಯ್ ಸಂಡೂರ್ ಪತ್ರಿಕೆಗೆ ತಿಳಿಸಿದ ನಂತರ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿ ಟಿ ಹೆಚ್ ಓ ಸಲೀಂ ಅವರು ಕೊಟ್ಟೂರು ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆ ಸಮಸ್ಯೆಗಳು ಮತ್ತು ಇನ್ನಿತರ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಅಗತ್ಯ ಇರುವ ವೈದ್ಯರನ್ನು ನೇಮಕ ಮಾಡಲಾಯಿತು ಸ್ರ್ತೀ ರೋಗ ತಜ್ಞರು ಮತ್ತು ಅರವಳಿಕೆ ತಜ್ಞರನ್ನು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುತ್ತಾರೆ.

ಬೆಡ್ ಗಳ ಸಮಸ್ಯೆ ಕೇಳಿದರೆ ಈಗಾಗಲೇ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೇ ಜೊತೆ ಮಾತನಾಡಿ ಅಗತ್ಯ ಇರುವ ಬೆಡ್ ಗಳ ವ್ಯವಸ್ಥೆಯನ್ನು ಮಾಡಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಹಾಗೂ ಇಸಿಜಿ ವ್ಯವಸ್ಥೆ ಇಲ್ಲ ಎಂದು ಕೂಡಲೇ ಇಸಿಜಿ ವ್ಯವಸ್ಥೆಯನ್ನು ಮಾಡಲಾಗಿದೆ ಮತ್ತು ಸಿ ಗ್ರೂಪ್ ಡಿ ಗ್ರೂಪ್ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲಾಗುವುದು ಗರ್ಭಿಣಿಯರಿಗೆ ಉಚಿತ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಗರ್ಭಿಣಿಯರನ್ನು ಸಾಗುವ ಮಧ್ಯದಲ್ಲಿ ಆಂಬುಲೆನ್ಸ್ ಸಿಬ್ಬಂದಿ ಯಾರಾದರೂ ಹಣದ ಬೇಡಿಕೆ ಇಟ್ಟರೆ ಅಂತ ವಿಷಯ ಗಳು ಇದ್ದರೆ ನಮ್ಮ ಗಮನಕ್ಕೆ ತನ್ನಿ ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇನೆ .

ನಮ್ಮ ಹಣದಿಂದ ಸಂಬಳವನ್ನು ತೆಗೆದುಕೊಳ್ಳುವ ಸರ್ಕಾರಿ ನೌಕರು ಜನರ ಸೇವೆ ಮಾಡದೆ ಸುಮ್ಮನೆ ಸಂಬಳವನ್ನು ತೆಗೆದುಕೊಳ್ಳುತ್ತಿದ್ದಾರೆ ಇನ್ನು ಮುಂದೆ ಕೊಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇಲ್ಲದ ಹಾಗೆ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗಬೇಕು ನಮ್ಮ ಮನವಿಗೆ ಸ್ಪಂದಿಸಿದ ಹಯ್ ಸಂಡೂರ್ ಪತ್ರಿಕೆಗೆ ಹಾಗೂ ಡಿ .ಎಚ್.ಒ.ಗಳಿಗೆ ಧನ್ಯವಾದಗಳು.

-ಶ್ರೀನಿವಾಸ್
ಕರ್ನಾಟಕ ರಕ್ಷಣಾ ವೇದಿಕೆ
ತಾಲೂಕು ಅಧ್ಯಕ್ಷರು ಕೊಟ್ಟೂರು

ಹೊಸದಾಗಿ ರಚನಾ ಗೊಂಡಿರುವ ವಿಜಯನಗರ ಜಿಲ್ಲೆಯ ಸಿಬ್ಬಂದಿಗಳ ಕೊರತೆ ಇದೆ ಆದ್ದರಿಂದ ಯಾವ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ ಆದಷ್ಟು ಬೇಗ ಮೇಲಾಧಿಕಾರಿಗಳ ಜೊತೆ ಮಾತನಾಡಿ ಅಗತ್ಯ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು.

-ಸಲೀಂ ಜಿಲ್ಲಾ ಆರೋಗ್ಯಧಿಕಾರಿಗಳು ವಿಜಯನಗರ ಜಿಲ್ಲೆ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here