ರಾಷ್ಟ್ರ ಮಟ್ಟದ ಪ್ರದರ್ಶನ ಕಲೆಯ ವಿಚಾರ ಸಂಕೀರ್ಣ ಹಾಗೂ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಹಿರಿಯ ಮತ್ತು ಕಿರಿಯ ನೃತ್ಯ ಮತ್ತು ಸಂಗೀತ ಗುರುಗಳನ್ನು ಬೇಜವಾಬ್ದಾರಿಯಿಂದ ಕಡೆಗಣನೆ..!?

0
84

ಹೊಸಪೇಟೆ:ಆ:13:- ದಿನಾಂಕ ಆಗಸ್ಟ್ 9 ಮತ್ತು 10, 2023 ರಂದು ನಮ್ಮ ರಾಜ್ಯದ ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರದ ಪ್ರದರ್ಶನ ಕಲೆಗಳ ವಿಚಾರ ಸಂಕೀರ್ಣ ಹಾಗೂ ನೃತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದ್ದು ಇದರಲ್ಲಿ ಹಂಪಿ ವಿವಿ ಜೊತೆಗೆ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ನೃತ್ಯ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಸಹಯೋಗವು ಇದೆ ಎಂದು ಭಾರತ ನೃತ್ಯ ಮತ್ತು ಸಂಗೀತ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಡಾಕ್ಟರ್ ಶುಭರಾಣಿ ಬೋಳಾರ್ ಮತ್ತು ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊಫೆಸರ್ ಡಾಕ್ಟರ್ ಶಿವರಾಂರವರು ತಿಳಿಸಿರುತ್ತಾರೆ.
ಇದು ನಮ್ಮ ಸಂಸ್ಕೃತಿಯನ್ನು ಕಲೆ ಪರಂಪರೆಯನ್ನು ಬೆಳೆಸುವಂತಹ ಹೆಮ್ಮೆಯ ಕಾರ್ಯಕ್ರಮ ಎಂದು ತಿಳಿಸಿರುತ್ತಾರೆ.

ಆದರೆ ವಿಜಯನಗರ ಜಿಲ್ಲೆಯಲ್ಲಿ ಹಲವಾರು ಹಿರಿಯ ಮತ್ತು ಕಿರಿಯ ಅನುಭವಿ ನೃತ್ಯ ಮತ್ತು ಸಂಗೀತ ಗುರುಗಳು ಹಾಗೂ ಹಲವಾರು ಸಂಗೀತ ಹಾಗೂ ನೃತ್ಯ ಸಂಸ್ಥೆಗಳಿದ್ದು ಅಲ್ಲಿಯೂ ಸಾವಿರಾರು ವಿದ್ಯಾರ್ಥಿಗಳು ನೃತ್ಯವನ್ನು ಮತ್ತು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದು ಇವರುಗಳ ಗಮನಕ್ಕೆ ವಿಷಯ ತರದೆ,ಯಾರ ಗಮನಕ್ಕೂ ಸದರಿ ವಿಷಯವನ್ನು ತಲುಪಿಸುವ ಪ್ರಮಾಣಿಕ ಪ್ರಯತ್ನವನ್ನೂ ಮಾಡದೆ ಈ ಕಾರ್ಯಕ್ರಮ ನಡೆಸಿರುವುದು ಅಪರಾಧ. ಅಲ್ಲದೆ ಸರಿಯಾದ ತಾಳ, ನೃತ್ಯ ಜ್ಞಾನವಿಲ್ಲದ ಸ್ಥಳೀಯ ನೃತ್ಯ ಗುರುವನ್ನು ಮಾತ್ರ ಪರಿಗಣಿಸಿ ಕಳೆದ 27 ಜುಲೈ 2023 ರಂದೇ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯನ್ನು ಗುಟ್ಟಾಗಿ ನಡೆಸಿ, ಏಕ ವ್ಯಕ್ತಿಯನ್ನೇ ಪರಿಗಣಿಸಿ ಸದ್ದಿಲ್ಲದೇ ವಿಚಾರ ಸಂಕೀರ್ಣ ನಡೆಸಿರುವುದು,ಅವರಿಗೇ ಎಲ್ಲಾ ಉಸ್ತುವಾರಿ ನೀಡಿರುವುದರ ಕುರಿತು ನಗರದ ಹಲವಾರು ಅನುಭವಿ ನೃತ್ಯ ಮತ್ತು ಸಂಗೀತ ಗುರುಗಳು ಸಂಶಯ ಮತ್ತು ಬೇಸರವನ್ನು ವ್ಯಕ್ತಪಡಿಸಿರುತ್ತಾರೆ.

ನಮ್ಮ ಸಂಸ್ಕೃತಿ, ಕಲೆ,ಪರಂಪರೆಯನ್ನು ಬೆಳೆಸುವುದು ಎಲ್ಲಾ ಸಂಗೀತ ಮತ್ತು ನೃತ್ಯ ಕಲಾಸಕ್ತಿಯ ಗುರುಗಳ ಜವಾಬ್ದಾರಿಯೂ ಆಗಿರುತ್ತದೆ. ನೃತ್ಯ, ಕಲೆ ಸಂಸ್ಕೃತಿಯನ್ನು ಬೆಳೆಸಿ ನಮ್ಮ ಜಗಕೆ ನೀಡಬೇಕಾಗಿರುವ ಗುರುತರ ಜವಾಬ್ದಾರಿ ಹೊತ್ತ ವಿಶ್ವ ವಿದ್ಯಾಲಯಗಳೇ,ಜವಾಬ್ದಾರಿ ಹೊತ್ತ ಅಧ್ಯಕ್ಷರು, ಅಧಿಕಾರಿ ವರ್ಗವೇ ಇಂತಹ ಅಚಾತುರ್ಯದ ಅವಿವೇಕಿತನದ ಕಾರ್ಯ ಮಾಡಿದರೆ,ಕಲೆ,ಸಂಸ್ಕೃತಿ, ಸಂಗೀತ ಉಳಿಯೋದಾದ್ರೂ ಹೇಗೆ?ಉದ್ಧಾರ ಆಗೋದಾದ್ರೂ ಹೇಗೆ!? ಎಂಬುದನ್ನು ತಮ್ಮಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟ ವಿಜಯನಗರದ, ಹೊಸಪೇಟೆಯ ಹಿರಿಯ ಕಿರಿಯ ನೃತ್ಯ ಮತ್ತು ಸಂಗೀತ ಗುರುಗಳಿಗೆ ತಾವುಗಳು ಉತ್ತರಿಸಲೇಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಈ ವಿಷಯಗಳ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ಈ ಕಾರ್ಯಕ್ರಮಗಳನ್ನು
ಆಯೋಜಿಸಿರುವ ಸರ್ವ ವಿಶ್ವವಿದ್ಯಾಲಯಗಳು ಜವಾಬ್ದಾರಿಯ ಹೊಣೆ ಹೊತ್ತು ಎಲ್ಲರೂ ನೊಂದವರಿಗೆ ಉತ್ತರಿಸಲೇಬೇಕು.ಡಾ.ಗಂಗೂಬಾಯಿ ಹಾನಗಲ್ ಸಂಗೀತ, ನೃತ್ಯ ವಿದ್ಯಾಲಯ ಮುಂದಿನ ದಿನಮಾನಗಳಲ್ಲಿ ಯಾವುದೇ ಕಾರ್ಯಕ್ರಮಗಳಿದ್ದರೂ ಎಲ್ಲಾ ಗುರುಗಳನ್ನು ಸೂಕ್ತ ರೀತಿಯಲ್ಲಿ ಗೌರವಿಸಿ,ಪರಿಗಣಿಸಿ, ಅಭಿಪ್ರಾಯ ಸ್ವೀಕರಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕಾಗಿ
ಗುರುವಿದ್ವಾನ್‌ ಶ್ರೀ ಎಂ.ಅಲ್ಲಾಬಕ್ಷ, ಅಧ್ಯಕ್ಷರು. ಶ್ರೀ ಸ್ವರ್ಣಮುಖ ಭರತನಾಟ್ಯ ಕಲಾ ಸಂಸ್ಥೆ (ರಿ) A.9945435654 ಇವರುಗಳು ವಿನಂತಿಸಿದ್ದಾರೆ

LEAVE A REPLY

Please enter your comment!
Please enter your name here