“ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ”

0
236

ಕೊಟ್ಟೂರು: ಸೋಮುವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯ ವತಿಯಿಂದ ನಡೆದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಮಾನ್ಯ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ ಚಾಲನೆ ನೀಡಿ ಮಾತನಾಡಿದರು

ವೀರ ಯೋಧರು ತಮ್ಮ ಕುಟುಂಬ, ಊರು, ವಯಕ್ತಿಕ ಜೀವನವನ್ನು ತ್ಯಜಿಸಿ ದೇಶ ಸೇವೆಗೆ ತಮ್ಮ ಜೀವನವನ್ನು ಅರ್ಪಿಸುತ್ತಾರೆ ಇವರನ್ನು ಸ್ಮರಿಸುವುದು ಅತ್ಯಂತ ಶ್ಲಾಘನೀಯ
ನಾವು ಸುರಕ್ಷತೆಯಿಂದ ಜೀವನ ಮಾಡುತ್ತಿದ್ದೇವೆ ಎಂದರೆ ವೀರ ಯೋಧರ ಪಾತ್ರ ಪ್ರಮುಖವಾಗಿದೆ ಪ್ರತಿಯೊಬ್ಬರು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು ಪಟ್ಟಣದಲ್ಲಿ ಸರ್ಕಾರಿ ಡಿಗ್ರಿ ಕಾಲೇಜ್ ತೆರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಕೊಟ್ಟೂರಿನ ಜನರ ಶಕ್ತಿ ಯಾವುದೇ ಕಾರಣಕ್ಕೂ ನಿಶಕ್ತಿ ಆಗುವುದಕ್ಕೆ ಬಿಡುವುದಿಲ್ಲ ಖಂಡಿತ ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.

ಅನ್ಯ ದೇಶಗಳ ದಾಳಿಯಿಂದ ನಮ್ಮ ಕುಟುಂಬ ರಕ್ಷಿಸಲು ವೀರ ಯೋಧರು ತಮ್ಮ ಜೀವವನ್ನು ಲೆಕ್ಕಿಸದೆ ಯುದ್ಧ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಇವರನ್ನು ಗೌರವಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಹಾಗೂ ದೇಶಕ್ಕೆ ಅನ್ನ ನೀಡುವ ರೈತ, ಎಷ್ಟು ಪ್ರಮುಖವೊ ಅಷ್ಟೇ ದೇಶವನ್ನು ಸುರಕ್ಷತೆಯಿಂದ ಕಾಪಾಡುವ ಸೈನಿಕನು ಪ್ರಮುಖರು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂಎಂಜೆ ಹರ್ಷವರ್ಧನ್ ರವರು ಮಾತನಾಡಿದರು.

ನಿವೃತ್ತ ಯೋಧರಾದ ಅಜ್ಜಪ್ಪ ಹಾಗೂ ಮೈದುರ್ ಶಿವಣ್ಣ ರವರು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಅಧಿಕಾರಿ ಎ.ನಾಸಾರುಲ್ಲಾ, ಸದಸ್ಯರಾದ ಬಾವಿಕಟ್ಟಿ. ಶಿವನಂದ , ವೀಣಾ ವಿವೇಕಾನಂದ, ಕೊಟ್ರೇಶ್, ಸಿದ್ದಣ್ಣ, ಹಾಗೂ ಶಶಿಧರ್, ಅಜ್ಜಪ್ಪ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here