ವಿಜ್ಞಾನ ಪಿತಾಮಹರಾದ ಪದ್ಮಶ್ರೀ ಡಾ. ಎಸ್ ಆರ್ ರಂಗನಾಥನ್ ರವರ 131ನೇ ಜನ್ಮ ದಿನಾಚರಣೆ

0
47

ಕೊಟ್ಟೂರು ಶಾಖಾ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಪದ್ಮಶ್ರೀ ಡಾ. ಎಸ್ ಆರ್ ರಂಗನಾಥನ್* ರವರ 131ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಎಸ್ ಆರ್ ರಂಗನಾಥನ್ ಅವರ ಸಾಧನೆ ಯಿಂದ ಮೈದಳೆದ ಗ್ರಂಥಾಲಯಗಳು ಇಂದು ಲಕ್ಷಾಂತರ ಯುವಕರಿಗೆ ದಾರಿ ತೋರಿಸುತ್ತೇವೆ , ವಿದ್ಯಾರ್ಥಿಗಳಿಗೆ ,ಯುವ ಜನಾಂಗಕ್ಕೆ , ಹಿರಿಯ ನಾಗರಿಕರಿಗೂ ಗ್ರಂಥಾಲಯಗಳು ಜ್ಞಾನಮಂದಿರಗಳಾಗಿವೆ.

ಜನಸಾಮಾನ್ಯರಿಗೂ ಗ್ರಂಥಾಲಯಗಳ ಸೇವೆ ಲಭ್ಯವಾಗಿದೆ. ಎಂದು ಮಲ್ಲಪ್ಪ ಗುಡ್ಲಾನೂರು ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು. ಹಾಗೂ ಮುರುಗೇಶ್ ಗೌಡ ಗ್ರಂಥಾಲಯ ಮೇಲ್ವಿಚಾರಕರು ನಿರೂಪಿಸಿದರು.

ಈ ಸಂದರ್ಭದಲ್ಲಿ ಗ್ರಂಥಾಲಯ ಸಿಬ್ಬಂದಿಗಳಾದ ಶ್ರೀನಿವಾಸ್ ಪತ್ತಾರ್ , ಮಮತಾ ಹಾಗೂ ಅಂಚೆ ಶಿವಾನಂದಪ್ಪ, ಕೊಟ್ರೇಶಪ್ಪ ,ಬಚೇನಹಳ್ಳಿ ಈಶಪ್ಪ , ಎಸ್ ಕೆ ಗಿರೀಶ, ವೀರೇಶ್ .ಓದುಗರು, ಗ್ರಂಥಾಲಯ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here