ಶ್ರೀ ಬಸವೇಶ್ವರರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್

0
126

ಹೊಸಪೇಟೆ(ವಿಜಯನಗರ)ಮೇ.03: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಹೊಸಪೇಟೆಯ ನಗರಸಭೆ ಸಂಯುಕ್ತಾಶ್ರಯದಲ್ಲಿ ಮಹಾಮಾನವತಾವಾದಿ ಶ್ರೀ ಬಸವೇಶ್ವರ ಅವರ ಜಯಂತ್ಯೋತ್ಸವನ್ನು ನಗರದ ಬಸವೇಶ್ವರ ಬಡಾವಣೆಯ ಬಸವ ವೇದಿಕೆಯ ಆವರಣದಲ್ಲಿ ಮಂಗಳವಾರದಂದು ಆಚರಿಸಲಾಯಿತು.
ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಅವರು ಶ್ರೀ ಬಸವೇಶ್ವರರ ಪುತ್ದಳಿಗೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿಸಿ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಎಲ್ಲರಿಗೂ ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಬಸವೇಶ್ವರರು ಅವರು ತತ್ವಗಳನ್ನ ನಮನ ಮಾಡಿಕೊಳ್ಳುವುದರ ಜೊತೆಗೆ ಅದನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದರು.
ನಾವು ಸರ್ಕಾರಿ ಕೆಲಸಗಳನ್ನು ಮಾಡುವಾಗ ಕಾಯಕವೇ ಕೈಲಾಸ ಎಂಬ ಮಾತನ್ನು ಹೇಳುತ್ತೇವೆ; ಆದರೆ ಅದನ್ನು ಅನುμÁ್ಠನ ಮಾಡುವುದು ತಂಬಾ ಮುಖ್ಯ. ವಿಜಯನಗರ ಜಿಲ್ಲೆಯು ನೂತನ ಜಿಲ್ಲೆಯಾಗಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ನಾವು ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಜಯಂತಿಯ ಆಚರಣೆಯ ಅಂಗವಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಜೀವನದಲ್ಲಿ ಬಸವೇಶ್ವರ ಅವರ ತತ್ವಗಳನ್ನು ಹಾಗೂ ಅವರ ಅಮೂಲ್ಯವಾದಂತಹ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಬಸವೇಶ್ವರಿ ಮಾತಾಜಿ ಅವರು 889ನೇ ಶ್ರೀ ಬಸವೇಶ್ವರರ ಜಯಂತಿ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ನಗರಸಭೆಯ ಉಪಾಧ್ಯಕ್ಷ ಎಸ್.ಎಲ್.ಆನಂದ್, ಜಿ.ಪಂ. ಸಿಇಒ ಹರ್ಷಲ್ ನಾರಾಯಣ್ ರಾವ್ ಬೊಯರ್, ಎಸ್ಪಿ ಡಾ.ಅರುಣ್ ಕೆ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ್, ತಹಶೀಲ್ದಾರ ವಿಶ್ವಜೀತ ಮೇಹ್ತಾ, ಡಿಡಿಪಿಐ ಕೊಟ್ರೇಶ್, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here