ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

0
174

ಕೊಟ್ಟೂರೇಶ್ವರ ಮಹಾವಿದ್ಯಾಲಯ ಕೊಟ್ಟೂರು ಹಾಗೂ ಸ್ವಾಮಿ ವಿವೇಕಾನಂದ ರಕ್ತದಾನ ಕೇಂದ್ರ ಹೂವಿನಹಡಗಲಿ. ರೆಡ್ ಕ್ರಾಸ್, ಎನ್.ಎಸ್.ಎಸ್., ಎನ್.ಸಿ.ಸಿ. ಹಾಗೂ Iಕಿಂಅ ಇವುಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ
ಶ್ರೀ ಸಿದ್ದರಾಮ ಕಲ್ಮಠ ವಿದ್ಯಾರ್ಥಿಗಳು ಇಂದಿನ ರಕ್ತದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿರುವುದು ಬಹಳ ಸಂತಸದ ವಿಷಯ. ರಕ್ತ ನೀಡುವುದರಿಂದ ವಿದ್ಯಾರ್ಥಿಗಳ ದೇಹದ ಆರೋಗ್ಯ ಕಾಪಾಡಲು ಸಾಧ್ಯ ಹಾಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡಲೇಬೇಕೆಂದು ಹೇಳಿದರು. ಮನುಷ್ಯನ ದೇಹಕ್ಕೆ ರಕ್ತ ಯಾವ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಕಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ರಕ್ತದಾನ ಮಾಡುವುದರಿಂದ ಒಂದು ಜೀವಕ್ಕೆ ಮರುಜೀವ ಕೊಟ್ಟಂತೆ ಹಾಗಾಗಿ ಇಂತಹ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಮಾನವೀಯ ನೆಲಗಟ್ಟಿನ ಮೇಲೆ ಸಮಾಜ ನಿಲ್ಲುವಂತಹ ಪ್ರಯತ್ನ ಪ್ರಮಾಣಿಕವಾಗಿ ಆಗಬೇಕು ಮತ್ತು ಇದು ನಿರಂತರವಾಗಿರಬೇಕು ಎಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎಂ ರವಿಕುಮಾರ್ ಇಂದಿನ ರಕ್ತನ ಶಿಬಿರವು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹಾಗಾಗಿ ಇಂದಿನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ ಈ ಕಾರ್ಯಕ್ರಮ ಆಯೋಜಿಸಿರುವಂತಹ ನಮ್ಮ ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ. I.ಕಿ.ಂ.ಅ. ಇನ್ನು ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಮೂಲಕ ಕಾಲೇಜಿನ ಪ್ರಗತಿಯನ್ನು ಮತ್ತು ಸಾಮಾಜಿಕ ಪ್ರಗತಿಯನ್ನು ಮಾಡಲು ಸಾಧ್ಯ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜ್ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಕೋರಿ ಬಸವರಾಜ್ ಶ್ರೀ ಶಿವಕುಮಾರ, ಸ್ವಾಮಿ ವಿವೇಕಾನಂದ ರಕ್ತದಾನ ಕೇಂದ್ರದ ಮುಖ್ಯಸ್ಥರಾದ ಗೋಪಾಲ್ ರೆಡ್ಡಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಪ್ಪ. ಡಾ. ಜೆ ಬಿ ಸಿದ್ದನಗೌಡ. ಡಾ. ಪೃಥ್ವಿರಾಜ್. ಡಾ. ಶಿವಕುಮಾರ್ ದೈಹಿಕ ಶಿಕ್ಷಣ ನಿರ್ದೇಶಕರು. ಡಾ. ಚೇತನ್ ಚೌಹಾನ್, ಎನ್‌ಸಿಸಿ ಅಧಿಕಾರಿಯಾದ ಅ. ಬಸವರಾಜ, ಶಿವಪ್ರಕಾಶ್, ರಮೇಶ್, ಕೂಡ್ಲಿಗಿ ಕೊಟ್ರೇಶ್. ಆರಾಧ್ಯ ಮಠ. ಬಸವರಾಜ ಬಣಕಾರ್ ಮುಂತಾದ ಭೋದಕ ಬೋಧಕೇತರ ಸಿಬ್ಬಂದಿ ವರ್ಗ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ಎಸ್ ಪಿ ಶಾಂತ, ಸ್ವಾಗತವನ್ನು ಪ್ರೊ.ರಾಧಾಸ್ವಾಮಿ ನೆರವೇರಿಸಿದರೆ, ನಿರೂಪಣೆಯನ್ನು ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಕೆ ಉಮೇಶ್ ವಂದನಾರ್ಪಣೆಯನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here