ಅಕ್ರಮವಾಗಿ ಸಾಗಿಸುತ್ತಿದ್ದ 11 ಟನ್ ಪಡಿತರ ಅಕ್ಕಿ ವಶ ಗುಡೇಕೋಟೆ ಪೋಲೀಸ್ ಅಧಿಕಾರಿಗಳು

0
230

ವಿಜಯನಗರ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಹಾನಗಲ್ ಕ್ರಾಸ್ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರದಾರರಿಗೆ ವಿತರಿಸಬೇಕಿದ್ದ 11 ಟನ್ ಅಕ್ಕಿಯನ್ನು ಈಚರ್ ವಾಹನ ವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗುಡೇಕೋಟೆ ಪ್ರಬಾರಿ ಪಿಎಸ್ಐ ಮಾಲೀಕ್ ಸಾಬ್ ಕಾಲಾರಿ ನೇತೃತ್ವದ ತಂಡ ಬಲೆ ಬೀಸಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂಡೂರು ತಾಲೂಕಿನ ಬೋಮ್ಮಘಟ್ಟ ಕಡೆಯಿಂದ ಕೆಎ 17 ಎ7677 ರಲ್ಲಿ ಅಕ್ರಮವಾಗಿ ಅಕ್ಕಿಯನ್ನು ಬೋಮ್ಮಘಟ್ಟ ಕಡೆಯಿಂದ ಸಾಗಿಸಲಾಗುತ್ತಿದೆಯೆಂದು ಖಚಿತ ವರ್ತಮಾನದ ಮೇರೆಗೆ ಆಹಾರ ನಿರೀಕ್ಷಕಿ ಮೀನಾಕ್ಷಿ ಡಿವೈಎಸ್ಪಿ ಹರೀಶ್ ರೆಡ್ಡಿ. ಹಾಗೂ ವೃತ್ತ ಆರಕ್ಷಕ ನಿರೀಕ್ಷಕ ಸಿ ಪಿ ಐ ವಸಂತ್ ಆಸೋದೆ. ಹಾಗೂ ಗುಡೇಕೋಟೆ ಪೋಲೀಸ್ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದು. ಈಚರ್ ನ್ನು ಗುಡೇಕೋಟೆ ಗ್ರಾಮದ ಹಾನಗಲ್ ವ್ರತ್ತದ ಬಳಿ ತಡೆದು ರಸ್ಥೆಯ ಬದಿಯಲ್ಲಿ ನಿಲ್ಲಿಸಿ ತಪಾಸಣೆ ಮಾಡಿದಾಗ ಅಕ್ಕಿಯ ಮೂಟೆಗಳು ಕಂಡು ಬಂದಿದೆ.

ಈಚರ್ ನಲ್ಲಿದ್ದ ಚಾಲಕ ಆದೀಲ್ ಭಾಷಾ ರವರನ್ನು ತನಿಖೆಗೊಳಪಡಿಸಿದಾಗ ಸುಮಾರು 45 ರಿಂದ 50 ಕೆ.ಜಿ. ತೂಕದ 240 ಪ್ಯಾಕೆಟ್ ಪ್ಲಾಸ್ಟಿಕ್ ಚೀಲಗಳಿದ್ದು.ಇವುಗಳ ಅಂದಾಜು ತೂಕ 11ಟನ್ ಅಕ್ಕಿ ಇದ್ದು.ಇದರ ಅಂದಾಜು ಮೌಲ್ಯ ಎ.ಪಿ.ಎಲ್. ದರದಲ್ಲಿ 3 ಲಕ್ಷದ 14 ಸಾವಿರ ರೂಪಾಯಿ ಅಕ್ಕಿಯನ್ನು ಸಂಡೂರು ತಾಲೂಕಿನ ಬೋಮ್ಮಘಟ್ಟ ಗ್ರಾಮದ ಸುರೇಶ್ ತಂದೆ ಹನುಮಂತಪ್ಪನವರು ಹೇಳಿದ ರೀತಿಯಲ್ಲಿ ಈಚರ್ ವಾಹನದಲ್ಲಿದ್ದ ಅಕ್ಕಿ ಲೋಡ್ ನ್ನು ಬೋಮ್ಮಘಟ್ಟ ಕಡೆ ಯಿಂದ ತುಮಕೂರು ಕಡೆಗೆ ಈ ಅಕ್ಕಿಯ ಮೂಟೆಗಳನ್ನು ಸಾಗಿಸಲಾಗುತ್ತಿದೆಯೆಂದು ತಿಳಿಸಿದ್ದಾನೆ. ಮೂಟೆಗಳನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಪಡಿತರ ಕಾರ್ಡುದಾರರಿಗೆ ನೀಡಬೇಕಾದ ಅಕ್ಕಿಯನ್ನು ತುಂಬಿರುವುದು ಕಂಡು ಕಂಡುಬಂದಿದ್ದು. ನಕಲಿ ಪರವಾನಿಗೆ ಬಳಸಿ ಅಕ್ಕಿಯನ್ನು ಸಾಗಿಸಲಾಗುತ್ತಿದೆಯೆಂದು ಮೊಕದ್ದಮೆ ದಾಖಲಿಸಿ ಅಕ್ಕಿಯನ್ನು ವಶಪಡಿಸಿಕೊಂಡು ಆಹಾರ ಇಲಾಖೆಯ ನಿರೀಕ್ಷಕರ ಸಮ್ಮುಖದಲ್ಲಿ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾಳಿಯಲ್ಲಿ.ವಿಜಯನಗರ ಎಸ್ಪಿ ಹಾಗೂ ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ ವೃತ್ತ ಆರಕ್ಷಕ ನಿರೀಕ್ಷಕ ವಸಂತ್ ಆಸೋದೆ ಆದೇಶದಂತೆ ಗುಡೇಕೋಟೆ ಪೋಲೀಸ್ ಠಾಣೆಯ ಪ್ರಭಾರಿ ಪಿಎಸ್ಐ ಮಾಲೀಕ್ ಸಾಬ್ ಕಾಲಾರಿ. ಎ.ಎಸ್.ಐ.ಪಕೃದೀನ್. ಪೇದೆ ಸಿಬ್ಬಂದಿಗಳಾದ, ಶಶಿಕುಮಾರ್, ಗುರುಸ್ವಾಮಿ, ಚಂದ್ರಮೌಳಿ, ಬಸವರಾಜ್, ಮಹಾಂತೇಶ್, ನಜೀರ್ ಸೇರಿದಂತೆ ಆಹಾರ ಇಲಾಖೆ ಮತ್ತು ಪೋಲೀಸ್ ಸಿಬ್ಬಂದಿ ವರ್ಗದವರು ಇದ್ದರು.

LEAVE A REPLY

Please enter your comment!
Please enter your name here