ಎನ್.ಪಿ.ಸಿ.ಐ.ಆಧಾರ ನಂಬರ್ ಲಿಂಕ್ ಕಡ್ಡಾಯವಾಗಿ ಮಾಡಿಸಲು ಸಾರ್ವಜನಿಕರಿಗೆ ಮನವಿ

0
408

ಕೊಟ್ಟೂರು: ಮಾನ್ಯ ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ ಇವರ  ಸಂದೇಶ ಮೇರೆಗೆ ಸರ್ಕಾರದಿಂದ ವೃದ್ಧಾಪ್ಯ-ಅಂಗವಿಕಲ ವಿಧವಾ-ಸಂಧ್ಯಾ ಸುರಕ್ಷಾ-ಮನಸ್ವಿನಿ-ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ ನಂಬರ್ ಲಿಂಕ್ ಆಗಿಲ್ಲ. ಮತ್ತು ಎನ್.ಪಿ.ಸಿ.ಐ.ಆಧಾರ ನಂಬರ್ ಲಿಂಕ್ ಆಗಿಲ್ಲ ಹಾಗೂ ಆಧಾರ ನಂಬರ್ ಚಾಲ್ತಿ ಇಲ್ಲ ಅಂದರೆ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ 30.09.2023 ರ ಒಳಗೆ ಎನ್‌.ಪಿ.ಸಿ.ಐ.ಆಧಾರ ನಂಬರ್ ಲಿಂಕ್ ಮಾಡಿಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ.

1.ಕೆಲವೊಂದು ತಾಂತ್ರಿಕ ಕಾರಣಗಳಿಂದ ನಿಮ್ಮ ಆಧಾರ ನಂಬರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ.

2.ಲಿಂಕ್ ಆಗಿರದ ಫಲಾನುಭವಿಗಳ ಪಟ್ಟಿ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕ್‌ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸಿಗುತ್ತದೆ.(ಮತ್ತು ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳ ಬಳಿ ಸಿಗುತ್ತದೆ.

3.ನೀವು ಕಡ್ಡಾಯವಾಗಿ, ದಿನಾಂಕ: 30.09.2023ರೊಳಗಾಗಿ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕಿಗೆ/ಪೊಸ್ಟ್ ಆಫೀಸಿಗೆ ಹೋಗಿ, ಆಧಾರ ” ನಂಬರ್ ಲಿಂಕ್ ಮಾಡಿಸಲೇಬೇಕು. ಹಾಗೂ N.P.C…ಗೆ. ಆಧಾರ ನಂಬರ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು.

4.ತಪ್ಪಿದ್ದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ತಾವು ಪಡೆದುಕೊಳ್ಳಲು ತೊಂದರೆ ಆಗುತ್ತದೆ ತಿಳಿಯಿರಿ, ಅದ್ದರಿಂದ ಕಂದಾಯ ಇಲಾಖೆಯ ತಹಶೀಲ್ದಾರರು, ಕೊಟ್ಟೂರು ಇವರು ಸೋಮವಾರ ಪತ್ರಿಕೆಗೆ ಪ್ರಕಟಣೆ ಮೂಲಕ  ಸಾರ್ವಜನಿಕರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here