ಗದಗ್ ಜಿಲ್ಲೆ ಲಕ್ಕುಂಡಿ ಸಮೀಪ ಭೀಕರ ಅಪಘಾತ; ನಿವೃತ್ತ ಡಿಡಿಪಿಐ ಡಾ.ಹೆಚ್ ಬಾಲರಾಜ್ ಹಾಗೂ ಮಗ ವಿನಯ್ ಬಾಲರಾಜ್ ಮೃತ

0
2112

ಬಳ್ಳಾರಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ ಡಾ.ಹೆಚ್ ಬಾಲರಾಜ್ ಮತ್ತು ಅವರ ಪುತ್ರ ವಿನಯ್ ಬಾಲರಾಜ್ ಗದಗ್ ಜಿಲ್ಲೆ ಲಕ್ಕುಂಡಿ ಸಮೀಪದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬುಧವಾರ ಗದಗ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಡಾ.ಹೆಚ್ ಬಾಲರಾಜು ಮತ್ತು ಅವರ ಮಗ ವಿನಯ್ ಕುಮಾರ್ ಮೃತಪಟ್ಟ ಘಟನೆ ಜರುಗಿದೆ

ಬಾಲರಾಜ್ ಅವರು ಬಳ್ಳಾರಿ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಡಿಡಿಪಿಯಾಗಿ, ಜೆಡಿ ಆಗಿ ಕಾರ್ಯನಿರ್ವಹಿಸಿದ್ದರು. ವೃತ್ತಿ ನಂತರ ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಅವರ ಪುತ್ರರು ಕೂಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಘಂಟೆಗೆ ಹೊಸಪೇಟೆ ಯಲ್ಲಿ ನಡೆಸುವುದಾಗಿ ಕುಟುಂಬದವರು ಮಾಹಿತಿಯನ್ನು ನೀಡಿರುತ್ತಾರೆ, ಈ ಘಟನೆ ಅತ್ಯಂತ ದುರದೃಷ್ಟಕರ ಶ್ರೀಯುತರುಗಳ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ನೋವು ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಶಿಕ್ಷಣ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಎಲ್ಲಾ ಘಟಕಗಳು ಕಂಬನಿ ಮಿಡಿದಿವೆ.

ಬಾಲರಾಜ್ ಅವರು ಬಳ್ಳಾರಿ ಜಿಲ್ಲೆಯ ಸಾಹಿತ್ಯ ಲೋಕದಲ್ಲಿಯೂ ತಮ್ಮ ಲೇಖನ ಮತ್ತು ಬರಹಗಳ ಮೂಲಕ ಗುರುತಿಸಿ ಕೊಂಡಿದ್ದರು. ಅವರ ಸಾಹಿತತ್ಯಿಕ ಸೇವೆಯನ್ನು ಗುರುತಿಸಿ 2023ರ ಮಾರ್ಚ್ ತಿಂಗಳಲ್ಲಿ ನಡೆದ ಹೊಸಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಾಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಗೌರವಿಸಿತ್ತು.

ಶಿಕ್ಷಣ ಮತ್ತು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದ ಡಾ.ಬಾಲರಾಜ್ ಅನೇಕ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗಕ್ಕೆ ನೀಡಲಿ ಹಾಗೂ
ಡಾ. ಬಾಲರಾಜ್ ಮತ್ತು ಅವರ ಪುತ್ರ ವಿನಯ್ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಅಭಿಮಾನಿಗಳು, ಹಿತೈಷಿಗಳು, ಬಂದು-ಮಿತ್ರರು ಬೇಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here