ಮಾಳಪುರ ಗ್ರಾಮದ ಜಮೀನು ಪರಭಾರೆ ವಿರೋಧಿಸಿ ಪ್ರತಿಭಟನೆ

0
238

ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿ ವ್ಯಾಪ್ತಿಯ ಮಾಳಪೂರ ಗ್ರಾಮದ ರೈತರು ಏಳು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಸರ್ವೇ ನಂಬರ್ 123 ರ ಸುಮಾರು 47ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ ದಾಖಲೆಗಳನ್ನು ಹಿಡಿದುದಿನಾಂಕ 18.06.2021 ರಂದು ಶುಕ್ರವಾರ ಪ್ರತಿಭಟನೆ ನಡೆಸಿದರು

ರೈತರಾದ ಎನ್.ತಿಪ್ಪೇಸ್ವಾಮಿ ಮಾತನಾಡಿ ಮಾಳಪುರ ಗ್ರಾಮದ 16 ರೈತರು ನಿರಂತರವಾಗಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ ಕಳೆದ ವರ್ಷ ಕಂದಾಯ ಇಲಾಖೆ ಅಧಿಕಾರಿಗಳು ಜಮೀನಿನ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿದ್ದಾರೆ ನಾವು ಉಳಿಮೆ ಮಾಡುವ ಸರ್ಕಾರಿ ಜಮೀನನ್ನು ನಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಪ್ರಯತ್ನ ಪಡುವ ಸಮಯದಲ್ಲಿ ಜಮೀನಿಗೆ ಸಂಭಂದ ಇಲ್ಲದವರು ಅಕ್ರಮವಾಗಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು .

ಸಂಡೂರಿನ ಮುಖಂಡ ಸಿ. ವಿ.ನಾಗರಾಜ್ ಇವರು ಗುರುವಾರ ಪೊಲೀಸರೊಂದಿಗೆ ಜಮೀನಿಗೆ ಬಂದು ಕಲ್ಲಿನ ಕಂಬಗಳನ್ನು ನೆಟ್ಟಿದ್ದಾರೆ.ಇದರಿಂದ ಸಾಗುವಳಿ ಮಾಡಿದವರು ಬೀದಿಪಾಲಾಗುವ ಸಂಭವವಿದೆ ತಕ್ಷಣ ಸಂಭಂದಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು..

ಈ ಜಾಮೀನು ದಾಖಲೆಗಳ ಪ್ರಕಾರ ನಮಗೆ ಸಂಬಂಧಿಸಿದೆ,ಹಲವು ವರ್ಷಗಳಿಂದ ಜಮೀನಿನಲ್ಲಿ ಉಳಿಮೇ ಮಾಡಿದ ರೈತರಿಗೆ ತೊಂದರೆ ನೀಡಿಲ್ಲ ಈಗ ನಮ್ಮ ಜಮೀನಿನ ರಕ್ಷಣೆ ಹಸ್ತುಬಸ್ತಿಗಾಗಿ ಕಂಬಗಳನ್ನು ಹಾಕಿದ್ದೇವೆ ಎಂದು ಸಿ.ವಿ.ನಾಗರಾಜ ಸ್ಪಷ್ಟಪಡಿಸಿದರು..

ಹಾಲಿ ಜಮೀನಿನ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಉಪ ವಿಭಗಾಧಿಕಾರಿಗೆ ಕಳಿಸಲಾಗಿದೆ ಎಂದು ತಹಶೀಲ್ದಾರ್ ಹೆಚ್.ಜೆ.ರಶ್ಮಿ ಇವರು ತಿಳಿಸಿದರು.

ಸಂಡೂರು ತಾಲ್ಲೂಕಿನ ಬಗರ್ ಹುಕಂ ಸಮಿತಿಯ ನಾಮ ನಿರ್ದೇಶಿತ ಸದಸ್ಯ
ವಿ.ಎಸ್ ಶಂಕರ್ ಗ್ರಾಮ ಪಂಚಾಯತ್ ಸದಸ್ಯ ಪೀ.ಆಂಜನೇಯ ರೈತರಾದ ಹೊನ್ನುರಸ್ವಮಿ ಅಂಜಿನಪ್ಪ ದೊಡ್ಡ ಮಾರೆಣ್ಣ ಎಸ್. ಒದನ್ನ ಅಲ್ಲಭಕ್ಷಿ,ಹನುಮಯ್ಯ ಬಸಾಪುರ ಹನುಮಂತಪ್ಪ ,ಈಶ್ವರಮ್ಮ, ಚೌಡಮ್ಮ ಕೊಂತೆಮ್ಮ, ಮಾರೆಕ್ಕ ಇದ್ದರು

LEAVE A REPLY

Please enter your comment!
Please enter your name here