ಬೀಳ್ಕೊಡುಗೆ ಸಮಾರಂಭದಲ್ಲಿ ಜಿ ಕೆ ಅಬ್ಬಾಸ್ ಅವರಿಗೆ ಸನ್ಮಾನ

0
436

ಕೊಟ್ಟೂರು: ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸಿದ ಜಿ ಕೆ ಅಬ್ಬಾಸ್ ಅವರಿಗೆ ಪಿಎಸ್ಐ ಮುಂಬಡ್ತಿ ನೀಡಿದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.

ಕೊಟ್ಟೂರು ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ವರ್ಗದವರು ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ ಜಿಕೆ ಅಬ್ಬಾಸ್ ಅವರಿಗೆ ಸನ್ಮಾನಿಸಿದರು.

ನಂತರ ಗೀತಾಂಜಲಿ ಶಿಂಧೆ ಜಿಕೆ ಅಬ್ಬಾಸ್ ಅವರ ಕಾರ್ಯ ನಿರ್ವಹಿಸುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಪ್ರತಿಯೊಂದು ಕೆಲಸದಲ್ಲಿಯೂ ಠಾಣೆಯಲ್ಲಿ ಅವರ ಅನುಭವವನ್ನು ತಿಳಿಸುತ್ತಾ ನಮಗೆಲ್ಲ ಮಾರ್ಗದರ್ಶರಾಗಿದ್ದರು ಎಂದು ಮಾತನಾಡಿದರು.

ಪತ್ರಕರ್ತರು ಹಾಗೂ ಸಂಘ-ಸಂಸ್ಥೆಯು ಆಟೋ ಚಾಲಕರು ವಿವಿಧ ಮುಖಂಡರುಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿ ಜಿಕೆ ಅಬ್ಬಾಸ್ ಅವರನ್ನು ಸನ್ಮಾನಿಸಲಾಯಿತು.

ಜಿ ಕೆ ಅಬ್ಬಾಸ್ ಅವರು ಮಾತನಾಡಿ ತಮ್ಮ 32 ವರ್ಷಗಳ ಕಾರ್ಯನಿರ್ವಹಿಸಿರುವ ಕರ್ತವ್ಯದ ಬಗ್ಗೆ ತಿಳಿಸಿದರು ಮತ್ತು ಹಿರಿಯ ಅಧಿಕಾರಿಗಳಿಗೆ ಹೇಗೆ ನಡೆದುಕೊಳ್ಳಬೇಕೆಂದು ಕಿರಿಯ ಸಿಬ್ಬಂದಿಯವರಿಗೆ ತಮ್ಮ ಅನುಭವದ ಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಎಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಪತ್ರಕರ್ತರು ವಿವಿಧ ಸಂಘ ಸಂಸ್ಥೆಗಳು ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here