ತೋರಣಗಲ್ಲು ಡಿವೈಎಫ್ಐ ಘಟಕದಿಂದ “ನಾಲಿಗೆ ನಂಬಿದ ನಾಯಕರ ಜಯಂತೋತ್ಸವ”

0
103

ದಿನಾಂಕ 02-10-2021 ಸ್ಥಳ ತೋರಣಗಲ್ಲು ರೈಲ್ವೆ ನಿಲ್ದಾಣ ಸರ್ಕಲ್ ನಲ್ಲಿ DYFI ಸಂಡೂರು ತಾಲ್ಲೂಕು ನೇತೃತ್ವದಲ್ಲಿ ಇಂದು 152ನೇ ಮಹಾತ್ಮ ಗಾಂಧಿಜಿ ಮತ್ತು 116ನೇ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಯಶಸ್ವಿಯಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ DYFI ಜಿಲ್ಲಾ ಕಾರ್ಯದರ್ಶಿ ಅರ್ಜುನ್ ರವರು ಮಾತನಾಡಿ ಇಂದು ಮಹಾತ್ಮ ಗಾಂಧೀಜಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಮಾಡುತ್ತಿದ್ದೇವೆ ಅವರುಗಳು ಭಾರತ ದೇಶದಲ್ಲಿ ಒಬ್ಬ ಮಹಿಳೆ ಮಧ್ಯರಾತ್ರಿಯಲ್ಲಿ ಓಡಾಡುವ ಸ್ವಾತಂತ್ರ್ಯ ನಮ್ಮ ಭಾರತ ದೇಶಕ್ಕೆ ಸಿಗಬೇಕೆಂದು ಕನಸು ಕಟ್ಟಿದ್ದರು ಈ ಕನಸನ್ನು ಈಡೇರಿಸುವಲ್ಲಿ ಸಾವಿರಾರು ಕ್ರಾಂತಿಕಾರಿಗಳ ಪಾತ್ರ ಹೋರಾಟಗಾರರ ತ್ಯಾಗ ಬಲಿದಾನಗಳು ಪ್ರತೀಕವಾಗಿ ಭಾರತ ದೇಶಕ್ಕೆ ಸ್ವಾತಂತ್ರ್ಯವಾಯಿತು ಇವತ್ತಿನ ದಿನಮಾನಗಳಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಮಹಿಳೆ ದೌರ್ಜನ್ಯಗಳ ವಿರುದ್ಧ ಹೋರಾಡುವ ಅಗತ್ಯ ಇದೆ ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಶುಭಹಾರೈಸಿ DYFI ಸಂಡೂರು ತಾಲ್ಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ರವರು ಮಾತನಾಡಿ ಇಂದು 152ನೇ ಮಹಾತ್ಮ ಗಾಂಧೀಜಿ ಮತ್ತು 116ನೇ ಲಾಲ್ ಬಹದ್ದೂರ್ ಶಾಸ್ತ್ರಿಗಳ ಜನ್ಮ ದಿನಾಚರಣೆಯ ಶುಭಾಶಯಗಳು ಎಂದು ಮಹಾತ್ಮ ಗಾಂಧೀಜಿ ಅವರು ರಾಷ್ಟ್ರ ಪಿತಾಮಹ ಎಂದು ಕಾಶಿ ವಿದ್ಯಾಪೀಠದಲ್ಲಿ ಶಾಸ್ತ್ರಿ ಎಂಬ ಹೆಗ್ಗಳಿಕೆ ಪಡೆದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಶಾಂತಿಯ ಪ್ರತೀಕ ಮತ್ತು ಸತ್ಯವಾದಿಗಳು ಆಗಿದ್ದರು ಇವರ ಜೊತೆ ಸಾವಿರಾರು ಹೋರಾಟಗಾರರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಶ್ರಮವಹಿಸಿ ತಮ್ಮ ಪ್ರಾಣಗಳ ಬಲಿದಾನವಾಗಿ ಹೋರಾಡಿದರು ಅದೇ ರೀತಿ ಈ ಪ್ರದೇಶದ ಯುವಜನರು ಒಂದುಗೂಡಿ ಅಸಮಾನತೆಯ ದೌರ್ಜನ್ಯಗಳ ವಿರುದ್ಧ ಸಮ ಸಮಾಜ ಕಟ್ಟಲು ಎರಡನೇ ಸ್ವಾತಂತ್ರ್ಯಕ್ಕಾಗಿ ಹೊರಡಬೇಕೆಂದು ಯುವಜನರಿಗೆ ತಿಳಿಸಿದರು.

152ನೇ ಗಾಂಧಿ ಜಯಂತಿಯನ್ನುದ್ದೇಶಿಸಿ DYFI ಸಂಡೂರು ತಾಲೂಕು ಅದ್ಯಕ್ಷ ಎಸ್ ಕಾಲುಬಾರವರು ಮಾತನಾಡಿ ಮಹಾತ್ಮ ಗಾಂಧೀಜಿ ಯವರು ದಕ್ಷಿಣ ಆಫ್ರಿಕಾ ದಲ್ಲಿನ ವರ್ಣಬೇಧ ನೀತಿಗಳ ವಿರುದ್ಧ ಹೋರಾಟ ಮಾಡಿದರು ರೈಲಿನ ಮೊದಲನೇ ದರ್ಜೆಯಲ್ಲಿ ಬಿಳಿಯರಲ್ಲದೇ ಬೇರೆಯವರು ಪ್ರಯಾಣ ಮಾಡಬಾರದೆಂಬ ನಿಷೇಧದ ಪ್ರತಿರೋಧ ಒಡ್ಡಿದ್ದರು.ಜೀವನದ ಬಹುತೇಕ ಸಮಯವನ್ನು ಸತ್ಯ, ಪ್ರಾಮಾಣಿಕತೆಗೆ ಮೀಸಲಿಟ್ಟರು, ಬ್ರಿಟಿಷ್ ರಿಂದ ಶಾಂತಿ ಅಹಿಂಸಾ ಮಾರ್ಗದಲ್ಲಿ ಪಡೆದ ಸ್ವಾತಂತ್ರ್ಯ ವನ್ನು ಉಳಿಸುವ ಆದ್ಯ ಕರ್ತವ್ಯ ಇಂದಿನ ಯುವಜನರದ್ದು. ಹಸುಗೂಸು, ವೃದ್ಧರ ಮೇಲೆಯೂ ಹಾಡು ಹಗಲೇ ಅತ್ಯಾಚಾರ ನಡೆಯುತ್ತಿದೆ,ಆದರೆ ಯಾರಿಗೆ ಬಂದಿದೆ ನಿಜವಾದ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರು.

DYFI ನ ಸಂಡೂರು ತಾಲ್ಲೂಕು ಸಹಾಕಾರ್ಯದರ್ಶಿ ಸೈಯದ್ ಶರೀಪ್ ರವರು ಮಾತನಾಡಿ ಇವತ್ತು ಭಾರತ ದೇಶದಲ್ಲಿ ಗಾಂಧಿಜಿ ಜಯಂತಿಯನ್ನ ಮಾಡಲೇಬೇಕಾದಂತಹ ಅನಿವಾರ್ಯತೆಯನ್ನು BJP ಸರ್ಕಾರ ವ್ಶವಸ್ಥಿತವಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ನಮ್ಮ ಬಾಲ್ಶದಲ್ಲಿ ಗಾಂಧಿ ಜಯಂತಿಯನ್ನು ಹೂವು ಹಣ್ಣು ಕಾಯಿ ಕರ್ಪೂರದೊಂದಿಗೆ ತುಂಬಾ ವೈಭವದಿಂದ ಆಚರಿಸುತ್ತಿದ್ದೆವು. ಆದರೆ ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ಜಯಂತಿ ಬಂದರೆ ಸ್ವಚ್ಛ ಭಾರತ ಹೆಸರಿನಲ್ಲಿ ಯುವಜನತೆ ಕೈಯಲ್ಲಿ ಪೊರಕೆ ಕೊಟ್ಟು ಕಸ ಬಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ದೇಶದ ಮೊಟ್ಟ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆಯನ್ನ ದೇಶಪ್ರೇಮಿಯಂತೆ ನಮ್ಮ ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಗಾಂಧೀಜಿಯವರಿಗೆ ಮಹಾತ್ಮ ಎಂಬ ಬಿರುದು ಇದುವರೆಗೂ ಕೂಡ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಇಲ್ಲದಿರುವುದು ದುರಂತ ಎಂದು ಆಗ್ರಹಿಸಿದರು.

ತೋರಣಗಲ್ಲು ರೈಲ್ವೆ ನಿಲ್ದಾಣ ಘಟಕದ ಅಧ್ಯಕ್ಷರು ಮನೋಜ್ ರವರು ಒಟ್ಟಾರೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ತೋರಣಗಲ್ಲು ಗ್ರಾಮ ಘಟಕದ ಅಧ್ಯಕ್ಷರು ಶಿವು ರವರು ವಂದಿಸಿದರು. ರಾಹುಲ್, ಸುರಾಜ್, ಅಭಿಷೇಕ್, ಶಣ್ಮುಖ, ಸುರೇಂದ್ರ, ರಾಜ್, ಮಧು, ಧನಂಜಯ, ನಜೀರ್, ಭಾಸ್ಕರ್ ಸಯ್ಯದ್ ಮತ್ತು ಇತರರು ಕಾರ್ಯಕ್ರಮದ ಯಶಸ್ವಿಗಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here