ಕೊಟ್ಟೂರು ತಾಲೂಕು ಪಂಚಾಯಿತಿಯಲ್ಲಿ ರೂಪಕ್ಕನ ಮುಗಿಯದ ರಂಪಾಟ…!

0
319

ರೂಪಕ್ಕನ ದೊಂಬರಾಟ |ನೋಡಿಯೂ ನೋಡದಂತೆ|ಮೇಲಾಧಿಕಾರಿಗಳು ಸುಮ್ಮನಿರುವುದು| ಅಸ್ಯಾಸ್ಪದವಾಗಿದೆ

ಕೊಟ್ಟೂರು: ತಾಲೂಕು ಪಂಚಾಯಿತಿಯಲ್ಲಿ ಗ್ರೇಡ್-೧ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೂಪಕ್ಕನ ರಂಪಾಟದಿಂದ ಇಲ್ಲಿಯ ಸಿಬ್ಬಂದಿಗಳು ರೋಸಿ ಹೋಗಿದ್ದಾರೆ. ಇವರ ಬಗ್ಗೆ ಪತ್ರಿಕೆಯಲ್ಲಿ ವರದಿಯಾದ ಮೇಲೆ ಸಿಬ್ಬಂದಿಗಳಿಗೆ ಏಕವಚನದಲ್ಲಿ ಪತ್ರಿಕೆಗೆ ಯಾರು ಹೇಳಿದ್ದೀರಿ ನಿಮ್ಮ ಮೇಲೆ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ. ಎಂದು ಎದುರಿಸುವ ಕಾರ್ಯ ನಡೆದಿದೆ.!

ನಾಯಿಗೆ ಅನ್ನ ಹಾಕಿದರೆ ನಿಯತ್ತಾಗಿ ಇರುತ್ತದೆ.ಆದರೆ ನಿಯತ್ತಿಲ್ಲದ ನಾಯಿಗಳು ಎಂದು ಬೊಬ್ಬೆ ಹೊಡೆಯುತ್ತಾರೆ. ಪತ್ರಿಕೆಗಳಲ್ಲಿ ಈ ರೂಪಕನ್ನ ಬಂಡವಾಳ ಹೊರ ಬೀಳುತ್ತಿದ್ದಂತೆ ಇವರಿಗೆ ಲಂಚ ಕೊಟ್ಟಿರುವ ಅಧಿಕಾರಿಗಳು, ಸಿಬ್ಬಂದಿಗಳು ನಾವು ಸರ್ಕಾರದ ಕೆಲಸ ಮಾಡುವುದು ರೂಪರವರ ನಾಯಿಗಳಲ್ಲ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇವರ ಕಾಟಕ್ಕೆ ಬೇಸತ್ತು ಇಲ್ಲಿಯ ಸಿಬ್ಬಂದಿ ಮತ್ತು ಪಿಡಿಒ ಗಳು ಈ ಮಹಾತಾಯಿಯ ವಿರುದ್ಧ ರೋಸಿ ಹೋಗಿ ಪತ್ರಿಕೆಗಳಲ್ಲಿ ವರದಿಯಾದ ಕೂಡಲೇ ರೂಪಾರವರ ಬಂಡವಾಳವನ್ನು ಮತ್ತಷ್ಟು, ಮಗದಷ್ಟು ನೇರವಾಗಿ ಫೋನ್ ಮಾಡಿ ಪತ್ರಿಕೆಗೆ ಮಾಹಿತಿ ತಿಳಿಸುತ್ತಿದ್ದಾರೆ. ತಾಲೂಕಿನ ತೂಲಹಳ್ಳಿಯ ರೈತನೊಬ್ಬನು ಬಣವೆ ಬಿಲ್ಲನ್ನು ಪಾಸ್ ಮಾಡಿಕೊಡಲು ೧೦,೦೦೦/- ರೂ.ಗಳನ್ನು ಲಂಚವಾಗಿ ಕೇಳಿದ್ದು, ! ಈ ಹಣವನ್ನು ಕೊಟ್ಟರೆ ಮಾತ್ರ ಬಿಲ್ಲನ್ನು ಪಾಸ್ ಮಾಡುತ್ತೇನೆಂದು ಬಡರೈತನ ಹಣವನ್ನು ಜೋಡಣೆ ಮಾಡಿಕೊಂಡು ಕೊಟ್ಟೂರಿನ ಸರ್ಕಾರಿ ಆಸ್ಪತ್ರೆಯ ಬಳಿ ಪೋಸ್ಟ್ ಕವರ್‌ನಲ್ಲಿ ಕೊಟ್ಟಿದ್ದಾನೆ. ಪ್ರತಿದಿನ ಓಡಾಡುವುದೇ ಈ ದಾರಿಯಲ್ಲಿಯೇ ಆದ್ದರಿಂದ ಇದರಲ್ಲಿ ಸುಳ್ಳಿರಲು ಸಾಧ್ಯವಿರುವುದಿಲ್ಲ? ಲಂಚ ಪಡೆದಿರುವುದು ಸತ್ಯ ಕಾಣುತ್ತದೆ. ! ಈಗ ನಿಜವಾದ ಮುಖವಾಡ ಕಳುಚುತ್ತಾದ್ಯಂತೆ. ಹೆದರಿಕೆ ಶುರುವಾಗಿದೆ.!

ಇಷ್ಟೆಲ್ಲಾ ರೂಪಾಳ ದೊಂಬರಾಟ ನೋಡಿಯೂ ಮೇಲಾಧಿಕಾರಿಗಳಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಸುಮ್ಮನಿರುವುದನ್ನು ನೋಡಿದರೆ ಇವರ ಸಹಕಾರ ಇದ್ದೇ ಈ ರೀತಿ ವರ್ತಿಸುತ್ತಿರಬಹುದೆ? ಎಂಬ ಅನುಮಾನಗಳು ಕಾಡಿವೆ. ಇಲ್ಲಿಗೆ ಬರುವ ಇ.ಓ. ಗಳಿಗೆ ಹಣ ವಸೂಲಿ ಮಾಡಿದ್ದನ್ನು ನೋಡಿಕೊಂಡು ಸುಮ್ಮನಿರುವ ಯಾವ ಚಕಾರವನ್ನು ಎತ್ತದ ಕಾರ್ಯನಿರ್ವಾಹಕ ಅಧಿಕಾರಿಗಳೇ ಬೇಕು.! ಇವರ ಜೊತೆಗೆ ಸಹೋದ್ಯೋಗಿಯಾಗಿರುವ ಮೋಹನ್ ರವರೂ ಸಹ ಇವರೊಂದಿಗೆ ಶಾಮೀಲಾಗಿದ್ದಾರೆ. ರೂಪಾಳ ಪರವಾಗಿ ಇಷ್ಟೆಲ್ಲಾ ಪತ್ರಿಕೆಗಳಲ್ಲಿ ಆರೋಪಗಳು ಬಂದರೂ ಏನು ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.! ಕ್ಷೇತ್ರದ ಶಾಸಕರು ಮೇಲಧಿಕಾರಿಗಳಿಗೆ ಇಂಥವರಗಳ ವಿರುದ್ಧ ಕ್ರಮ ಕೈಗೊಂಡು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳು ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡುತ್ತೇವೆ ಎಂದು ಸಿಪಿಐ(ಎಂಎಲ್) ಪಕ್ಷದ ತಾಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ್ ಹೇಳಿದ್ದಾರೆ.

■ಈ ಹಿಂದೆ ಸಂಡೂರು ತಾಲ್ಲೂಕಿನಲ್ಲಿ ಸುಶೀಲಾನಗರ ಗ್ರಾಮ ಪಂಚಾಯಿತಿಯಲ್ಲಿ ರೂಪಾ ಅವರನ್ನು 2006-07 ರಲ್ಲಿ ಪಿಡಿಒ ಲಕ್ಷ್ಮಣರಾವ್ ಕಂಪ್ಯೂಟರ್ ಆಪರೇಟರ್ ಕಮ್ ಕ್ಲಾರ್ಕ್ ಕೆಲಸಕ್ಕೆ ಸೇರಿಸಿದ್ದರು ಮತ್ತು ಬಿಲ್ ಕಲೆಕ್ಟರ್ ತಿಮ್ಮಪ್ಪ ತಿಳಿಸಿದ್ದರು 2001ರಲ್ಲಿ ನೇಮಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ
ಅಕ್ರಮವಾಗಿ ರೂಪಾ ಅವರ ಹೆಸರು ಸೇರಿಸಿದ್ದನ್ನು ಈ ವರದಿ ಹಿಂದೆಯೇ ಸುದ್ದಿಯಾಗಿತ್ತು. ಎಂದರು
ಈ ಬಗ್ಗೆ ಬಂಗ್ಲೆ ಮಂಜುನಾಥನಾಯ್ಕ ರವರು ೨೦೦೧ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ರೂಪಾರನ್ನು ನೇಮಿಸಿಕೊಂಡಿಲ್ಲ, ನಕಲಿ ದಾಖಲೆ ಸೃಷ್ಟಿಸಿದ್ದರೆ ಅದಕ್ಕೆ ಅಧಿಕಾರಿಗಳು ಹೊಣೆ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದರು. ರೂಪಾ ಅವರ ನೇಮಕಾತಿಯಾದ ದಿನದಿಂದ ಇಲ್ಲಿಯವರೆಗೆ ಇವರ ಸೇವಾ ವಿವರವನ್ನು ಪರಿಶೀಲಿಸಿದರೆ ಇವರ ನಿಜಮುಖ ಬಯಲಾಗಬಹುದು ಎಂದು ಡಿ.ಎಸ್.ಎಸ್. ಮುಖಂಡ ಚಂದ್ರಶೇಖರ್ ಪತ್ರಿಕೆಗೆ ತಿಳಿಸಿದರು.

LEAVE A REPLY

Please enter your comment!
Please enter your name here