ಡಿಸಿ,ಎಸ್.ಪಿ ಅವರೊಂದಿಗೆ ಸಂವಾದ; ದೌರ್ಜನ್ಯ ಪ್ರಕರಣ, ಅನುಕಂಪ ನೌಕರಿ, ಪರಿಹಾರ ವಿತರಣೆಯಲ್ಲಿ ಸಂವೇದನೆ ಇರಲಿ; ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಭರವಸೆ ಮೂಡಿಸಿ: ಸಚಿವ ಡಾ.ಎಚ್.ಸಿ. ಮಹಾದೇವಪ್ಪ

0
36

ಧಾರವಾಡ: ನ.08: ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಬಾಕಿ ಇರುವ ಮತ್ತು ಘಟಿಸುವ ದೌರ್ಜನ್ಯ ಪ್ರಕರಣಗಳನ್ನು ಸಂವೇದನೆಯಿಂದ ವರ್ತಿಸಿ, ಅನ್ಯಾಯಕ್ಕೊಳಗಾದವರಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಭರವಸೆಯನ್ನು ಎಲ್ಲ ಡಿಸಿ, ಎಸ್.ಪಿ.ಗಳು ಮೂಡಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರು ಹೇಳಿದರು.

ಅವರು ಇಂದು (ನ.08) ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಕುರಿತು ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳು ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳೊಂದಿಗೆ ಸಂವಾದ ಜರುಗಿಸಿ, ಮಾತನಾಡಿದರು.

ಅಟ್ರಾಸಿಟಿ ಪ್ರಕರಣಗಳಲ್ಲಿ ಅಧಿಕಾರಿಗಳು ಅಪ್ ಟು ಮಾರ್ಕ್ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಬಾಕಿ ಪ್ರಕರಣಗಳ ಸಂಖ್ಯೆ ನೋಡಿದಾಗ ಕಾಣುತ್ತಿದೆ. ದೌರ್ಜನ್ಯ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ತಕ್ಷಣ ಸ್ಥಳಕ್ಕೆ ಭೇಟಿ, ನೀಡಿ ಎಫ.ಐ.ಆರ್ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಅರ್ಹರಿಗೆ ತಕ್ಷಣ ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.

ದೌರ್ಜನ್ಯ ತಡೆ ಅಧಿನಿಯಮದ ಅನುಷ್ಠಾನದಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ದೌರ್ಜನ್ಯ ತಡೆ ಕಾಯ್ದೆಯಡಿ ನಿಯಮಾನುಸಾರ ಸಭೆ ನಡೆಸಬೇಕು. ಬಂದ ಪ್ರಕರಣಗಳನ್ನು ಕಳಕಳಯಿಂದ ಪರಿಶೀಲಿಸಿ, ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

ನಕಲಿ ಜಾತಿ ಪ್ರಮಾಣಪತ್ರ ಕಂಡುಬಂದಲ್ಲಿ ರದ್ದು ಪಡಿಸಲು ಕ್ರಮಕೈಗೊಳ್ಳಬೇಕು. ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಉತ್ತರ ಕನ್ನಡ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪ್ರಕರಣಗಳು ಬಾಕಿ ಇವೆ, ಅವುಗಳನ್ನು ತ್ವರಿತ ವಿಲೇವಾರಿ ಮಾಡಲು ಸಚಿವರು ನಿರ್ದೇಶಿಸಿದರು.

ದೌರ್ಜನ್ಯ ತಡೆ ಅಧಿನಿಯಮ ಅಡಿಯಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಲ್ಲಿ ಜಿಲ್ಲಾಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕು. ಬೆಳಗಾವಿ ವಿಭಾಗದಲ್ಲಿ 116 ಪ್ರಕರಣಗಳಲ್ಲಿ 59 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಇವುಗಳನ್ನು ಮರು ಪರಿಶೀಲಿಸಿ, ಸರಕಾರಕ್ಕೆ ಕಳುಹಿಸಬೇಕು. ನೊಂದವರಿಗೆ ಅನುಕಂಪ ನೌಕರಿ ನೀಡಿ, ಸಹಾಯ ಮಾಡಿ, ಆರ್ಥಿಕವಾಗಿ ಸದೃಢಗೊಳಿಸಲು ಕ್ರಮಗೊಳ್ಳಬೇಕು. ಅನುಕಂಪ ನೌಕರಿಗೆ ಅಗತ್ಯವಿರುವ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳು ಇತರ ಇಲಾಖೆಗಳಿಂದ ಸಕಾಲದಲ್ಲಿ ಪೂರೈಸಲು ಕ್ರಮವಹಿಸಬೇಕೆಂದು ಸಚಿವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ, ಆಯುಕ್ತ ರಾಕೇಶಕುಮಾರ ಮತ್ತು ರಾಜ್ಯ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಗಳ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಸರಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಇ.ವೆಂಕಟಾಚಲ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here