ಉತ್ತಮ ದೃಷ್ಟಿಗಾಗಿ ಕಣ್ಣಿಗೆ ತೊಂದೆರೆ ಕೊಡುವ ಯಾವ ಕೆಲಸವನ್ನು ನಿರ್ಲಕ್ಷ್ಯ ಮಾಡಬಾರದು : ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
181

ಸಂಡೂರು: ಅ:12: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ ಬಿ.ಆರ್ ಕ್ಯಾಂಪಿನಲ್ಲಿ “ವಿಶ್ವ ದೃಷ್ಟಿ ದಿನಾಚರಣೆ” ಮತ್ತು ” ನೇತ್ರದಾನ” ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು,

ಕಾರ್ಯಕ್ರಮ ಉದ್ದೇಶಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ದೃಷ್ಟಿ ಚೆನ್ನಾಗಿರಲು ಬಣ್ಣಗಳು,ರಾಸಾಯನಿಕ ವಸ್ತುಗಳು,ಧೂಳು ಇತರೆ ವಸ್ತುಗಳಿಂದ ಕಣ್ಣುಗಳನ್ನು ರಕ್ಷಿಸಲು ಕಾಳಜಿ ವಹಿಸಬೇಕು, ದೃಷ್ಟಿ ಹೋದರೆ ಇಡೀ ಪ್ರಪಂಚವೇ ಕುರುಡಾದಂತೆ, ವಿಶಾಲವಾದ ಜಗತ್ತನ್ನು ನೋಡಲು ನಮ್ಮ ಕಣ್ಣಿನ ದೃಷ್ಟಿ ಉತ್ತಮವಾಗಿರಬೇಕು ಅದಕ್ಕಾಗಿ ನಾವು ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಬೇಕು, ಕಣ್ಣಿಗೆ ತೊಂದೆರೆ ಕೊಡುವ ಯಾವ ಕೆಲಸವನ್ನು ನಿರ್ಲಕ್ಷ್ಯ ಮಾಡಬಾರದು, ಕಣ್ಣಿಗೂ ಹಚ್ಚ ಹಸಿರಿನ ಪರಿಸರ ನೋಡುವುದು, ಹೆಚ್ಚು ಹೆಚ್ಚು ಹಸಿರು ಸೊಪ್ಪುಗಳು, ಕ್ಯಾರೆಟ್ ನಂತಹ ತರಕಾರಿಗಳನ್ನು ಹೆಚ್ಚಾಗಿ ಬಳಸುವುದು ಮತ್ತು ಹಳದಿ ಬಣ್ಣದ ಆರೇಂಜ್, ಪಪ್ಪಾಯಿ ಹಾಗೂ ಸೀತಾ ಫಲ ದಂತ ಸ್ಥಳೀಯ ಹಣ್ಣುಗಳನ್ನು ಸೇವನೆ ಮಾಡಬೇಕು, ಟಿ.ವಿ, ಕಂಪೂಟರ್ ನೋಡುವವರು ಕಣ್ಣಿಗೆ ವಿರಾಮ ನೀಡಬೇಕು, ಸರಳವಾಗಿ ಮಾಡುವ ಎಕ್ಸ್ರೈಜ್ ನಿಯಮಿತವಾಗಿ ಮಾಡಬೇಕು, ಮಕ್ಕಳಿಗೆ ವಿಟಮಿನ್ ಎ ದ್ರಾವಣ ತಪ್ಪದೇ ಒಂಬತ್ತು ಬಾರಿ ಕುಡಿಸಬೇಕು, ಮಕ್ಕಳಿಗೆ ದೃಷ್ಟಿ ದೋಷ ವಿದ್ದರೆ ಮತ್ತು 30 ಮೇಲ್ಪಟ್ಟ ಎಲ್ಲರೂ ಕಣ್ಣಿನ ನಿಗದಿತವಾಗಿ ತಪಾಸಣೆ ಮಾಡಿಸಬೇಕು, ದೋಷ ಕಂಡುಬಂದರೆ ಕನ್ನಡಕಗಳನ್ನು ಬಳಸಬೇಕು, ಅಂದತ್ವ ನಿವಾರಣ ಕಾರ್ಯಕ್ರಮದಲ್ಲಿ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತದೆ, ಹಬ್ಬಗಳ ಸಮಯದಲ್ಲಿ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಎಷ್ಟೋ ಮಕ್ಕಳಿಗೆ ಕಣ್ಣಿಗೆ ಅಪಾಯವಾಗುತ್ತದೆ, ಕಾರ್ಖಾನೆಯ ಕೆಲಸದಲ್ಲಿರುವವರು ಕಣ್ಣಿನ ಸುರಕ್ಷತೆಗಾಗಿ ಕನ್ನಡಕ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಮಸಕು ಮಸುಕ ಕಾಣಿಸುವಾಗ ಹೆಚ್ಚು ಒತ್ತಡವನ್ನು ಹಾಕಿ ಓದಬಾರದು, ಮಧುಮೇಹ ಇರುವವರಿಗೆ ದೃಷ್ಟಿ ಸಾಮರ್ಥ್ಯ ಕಡಿಮೆಯಾಗುವ ಸಂಭವ ಹೆಚ್ಚು, ಇಂತಹ ಸಮಯದಲ್ಲಿ ಕಣ್ಣಿನ ಪರೀಕ್ಷೆ ಅವಶ್ಯಕವಾಗಿರುತ್ತದೆ ಹತ್ತಿರದ ಕಣ್ಣಿನ ಆಸ್ಪತ್ರೆಗಳಿಗೆ ಬೇಟಿ ಕೊಟ್ಟು ತಪಾಸಣೆ ಮಾಡಿಸಿ ಕಣ್ಣಿನ ದೃಷ್ಟಿಯ ರಕ್ಷಣೆ ಮಾಡಬೇಕು ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು,

ಹಾಗೇ ನೇತ್ರ ದಾನವೂ ಮಹತ್ತರವಾದ ಕಾರ್ಯ, ಹಲವು ಜನರು ಕಣ್ಣಿನ ತೊಂದರೆಗೆ ಒಳಗಾಗಿ ಕುರುಡುತನ ಅನುಭವಿಸುತ್ತಿರುತ್ತಾರೆ, ಅಂತಹ ಹಲವರ ಬಾಳಿಗೆ ಬೆಳಕು ನೀಡುವ ಉದ್ದೇಶದಿಂದ ಜನರ ಆರೋಗ್ಯ ಸೇವೆಗೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರು ಇಂದು ನೇತ್ರದಾನಕ್ಕೆ ಮುಂದಾಗಿದ್ದಾರೆ, ಆಶಾ ಫೆಸಿಲಿಟೇಟರ್ ಬಸಮ್ಮ, ಸೇರಿ ಎಂಟು ಜನ ಆಶಾ ಕಾರ್ಯಕರ್ತೆಯರಾದ ವಿಜಯಶಾಂತಿ, ಹುಲಿಗೆಮ್ಮ,ಆಶಾ,ರೇಖಾ,ಕಾವೇರಿ, ವೆಂಕಟ ಲಕ್ಷ್ಮಿ, ರಾಜೇಶ್ವರಿ,ಶ್ರೀದೇವಿ ಅವರು ನೇತ್ರ ದಾನಕ್ಕೆ ನೋಂದಣಿ ಮಾಡಿ ಜನರ ಪ್ರಶಂಶೆಗೆ ಪಾತ್ರರಾದರು,

ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಗ್ರಾಮಸ್ಥರಾದ ಆಂಜನೇಯಲು,ಪವನ್ ಕುಮಾರ್, ಹನುಮಕ್ಕ, ಸುಂಕಮ್ಮ, ಸಂಜೀವಮ್ಮ, ಭೂಲಕ್ಷ್ಮಿ,ಸಂಧ್ಯಾ, ಶ್ಯಾಮಲಾ, ಭೀಮಲಿಂಗಮ್ಮ, ಆಸ್ಮಾ, ಸರಸ್ವತಿ, ಎರ್ರಮ್ಮ, ಲಾಲಪ್ಪ,ಸಂಗೀತ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here