ಪ್ರೌಢ ಶಾಲೆಯಲ್ಲಿ “ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ” ಅಭಿಯಾನ ಕುರಿತು ಜಾಗೃತಿ

0
182

ಸಂಡೂರು: ನ: 24: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ “ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಅಭಿಯಾನ”ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ಸಮೀಕ್ಷೆಯ ಪ್ರಕಾರ ರಕ್ತಹೀನತೆ ಹೆಚ್ಚಿ ಮಟ್ಟದಲ್ಲಿದೆ, ಆರೋಗ್ಯ ಕಾರ್ಯಕ್ರಮಗಳಡಿ ನಿಯಂತ್ರಿಸಲು ಶತ ಪ್ರಯತ್ನ ಮಾಡಿದಾಗಲೂ ಸಾಧ್ಯವಾಗಿಲ್ಲ, ಈಗ ಅಭಿಯಾನದ ಮೂಲಕ ಆರು ಹಂತಗಳಲ್ಲಿ 6 ತಿಂಗಳ ಶಿಶುಗಳು, 6 ರಿಂದ 59 ತಿಂಗಳು, 5 ವರ್ಷದಿಂದ 9 ವರ್ಷ ಮತ್ತು 10 ವರ್ಷದ 19 ವರ್ಷ ಮತ್ತು ಸಂತಾನೋತ್ಪತ್ತಿ ಮಹಿಳೆ ಗರ್ಭಿಣಿಯರು ಹಾಗು ಬಾಣಂತಿಯರ 6 ವರ್ಗಗಳಲ್ಲಿ, ಅಂಗವಾಡಿ,ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪತ್ತೆ ಹಚ್ಚಿ ಅನೀಮಿಯದಲ್ಲಿ ಸಾಮಾನ್ಯ, ಮಾಧ್ಯಮ ಮತ್ತು ತೀವ್ರತರ ಎಂದು ಗುರುತಿಸಿ ಐರನ್ ಅಂಡ್ ಪೋಲಿಕ್ ಆಸಿಡ್‌ ಮಾತ್ರೆಗಳ ಮೂಲಕ ಚಿಕಿತ್ಸೆಯನ್ನು ಕೊಟ್ಟು ಅನೀಮಿಯ ಮುಕ್ತ ಮಾಡಲು ಸರ್ಕಾರ ಗುರಿಯನ್ನು ಹೊಂದಿದೆ ಅದರಂತೆ ಕಾರ್ಯ ಯೋಜನೆ ಸಿದ್ದ ಮಾಡಿಕೊಂಡು ಅನುಷ್ಠಾನ ಮಾಡಲಾಗುವುದು, ನಿಗದಿತ ದಿನದಂದು ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ಕೈಗೊಳ್ಳಲಾಗುವುದು, ಹಾಗೇಯೇ ಅನೀಮಿಯ ನಿಯಂತ್ರಣಕ್ಕೆ ಪೌಷ್ಟಿಕ ಆಹಾರ ಮುಖ್ಯ,ತಪ್ಪದೇ ಪೌಷ್ಟಿಕ ಆಹಾರ,ಹಸಿರು ಸೊಪ್ಪುಗಳು, ತರಕಾರಿಗಳು,ಮೊಳಕೆ ಬರಿಸಿದ ಕಾಳುಗಳು,ಹಣ್ಣುಗಳು ಸೇವನೆ ಮಾಡಲೇಬೇಕು ಆಹಾರದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಆರ್.ಕೆ.ಎಸ್.ಕೆ ಸಮಾಲೋಚಕ ಪ್ರಶಾಂತ್ ಕುಮಾರ್, ಶಾಲೆಯ ಸಹ ಶಿಕ್ಷಕ ವಿರುಪಾಕ್ಷಪ್ಪ, ಮಹಾಂತೇಶ್,ವೀರೇಶ್, ಮತ್ತು ವಿದ್ಯಾರ್ಥಿಗಳಾದ ತನುಷಾ,ಜ್ಯೋತಿ, ಮಹಾಲಕ್ಷ್ಮಿ, ದೇವಕಿ,ಅನುರಾಧ, ಮಹೇಶ್ವರಿ,ನಿಕೀಲ್, ರಾಜೇಶ್,ವಿನೋದ್, ಇತರರು ಹಾಜರಿದ್ದರು,

LEAVE A REPLY

Please enter your comment!
Please enter your name here