ಅನೀಮಿಯ ಮುಕ್ತ ಮಾಡಲು ಅಭಿಯಾನಕ್ಕೆ ಸಹಕರಿಸಿ: ಡಾ.ದಿಲೀಪ್ ಕುಮಾರ್,

0
179

ಸಂಡೂರು: ನ: 24: ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಆದರ್ಶ ವಿಧ್ಯಾಮಂದಿರ ಕಾಲೇಜಿನಲ್ಲಿ “ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಅಭಿಯಾನ”ಕ್ಕೆ ಚಾಲನಾ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಡಾ.ದಿಲೀಪ್ ಕುಮಾರ್ ಮಾತನಾಡಿ ಕಿಶೋರಿಯರು ದೇಹಕ್ಕೆ ಬೇಕಾಗುವಷ್ಟು ಆಹಾರವನ್ನು ತೆಗೆದುಕೊಳ್ಳುವುದಿಲ್ಲ, ಅಲ್ಲದೇ ಸಮತೋಲಿತ ಆಹಾರದೊಂದಿಗೆ ಕಾಳುಗಳು,ಹಸಿರು ಸೊಪ್ಪುಗಳು,ಹಣ್ಣುಗಳನ್ನು ಸೇವಿಸ ಬೇಕು, ಯಾವುದೇ ಕಾರಣಕ್ಕೂ ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡಬಾರದು,ಜಿರೋ ಸೈಜ್ ಎಂಬುದು ಮುಖ್ಯವಲ್ಲ, ಆರೋಗ್ಯವಾಗಿರುವುದು ಮುಖ್ಯ, ಸಾಮಾನ್ಯ, ಮಾಧ್ಯಮ ಮತ್ತು ತೀವ್ರತರ ಅನೀಮಿಯ ಎಂದು ಗುರುತಿಸಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಮೂಲೆ ಅವರು ಮಾತನಾಡಿ ಮಕ್ಕಳಿಗೆ ಸರ್ಕಾರದ ಕಾರ್ಯಕ್ರಮಗಳು ನಮ್ಮ ಕಾಲೇಜಿಗೆ ಬಂದು ಪ್ರಥಮವಾಗಿ ಇಲ್ಲಿ ಚಾಲನೆ ನೀಡುತ್ತಿರುವುದು ಸಂತಸದ ವಿಷಯ, ವಿದ್ಯಾರ್ಥಿಗಳು ವೈದ್ಯರ ಸಲಹೆಗಳನ್ನು ಪಾಲಿಸಬೇಕು,ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ಅಭಿಯಾನದ ಮೂಲಕ ಆರು ಹಂತಗಳಲ್ಲಿ 6 ತಿಂಗಳ ಶಿಶುಗಳು, 6 ರಿಂದ 59 ತಿಂಗಳು, 5 ವರ್ಷದಿಂದ 9 ವರ್ಷ ಮತ್ತು 10 ವರ್ಷದ 19 ವರ್ಷ ಮತ್ತು ಸಂತಾನೋತ್ಪತ್ತಿ ಮಹಿಳೆ ಗರ್ಭಿಣಿಯರು ಹಾಗು ಬಾಣಂತಿಯರ 6 ವರ್ಗಗಳಲ್ಲಿ, ಅಂಗವಾಡಿ,ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪತ್ತೆ ಹಚ್ಚಿ ಐರನ್ ಅಂಡ್ ಪೋಲಿಕ್ ಆಸಿಡ್‌ ಮಾತ್ರೆಗಳ ಮೂಲಕ ಚಿಕಿತ್ಸೆಯನ್ನು ಕೊಟ್ಟು ಅನೀಮಿಯ ಮುಕ್ಕ ಮಾಡಲು ಸರ್ಕಾರ ಗುರಿಯನ್ನು ಹೊಂದಿದೆ ಅದರಂತೆ ಯೋಜನೆ ಸಿದ್ದ ಮಾಡಿಕೊಂಡು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು, ಕಾರ್ಯಕ್ರಮವನ್ನು ಶಿಕ್ಷಕಿ ಅಂಬಿಕಾ ನಡೆಸಿಕೊಟ್ಟರು,

ಕಾರ್ಯಕ್ರಮದಲ್ಲಿ ಆರ್.ಬಿ.ಎಸ್.ಕೆ ತಂಡದ ವೈದ್ಯರಾದ ಡಾ.ಸುಮಿತ್ರಾ, ಸಮಾಲೋಚಕ ಪ್ರಶಾಂತ್ ಕುಮಾರ್,ನೇತ್ರ ಸಹಾಯಕ ಅಶೋಕ್,ಶುಶ್ರೂಷಾ ಅಧಿಕಾರಿ ಕವಿತಾ,ಜಾಹೀದಾ,ಶರ್ಮಿಳಾ,ವಿದ್ಯಾರ್ಥಿಗಳಾದ ಅಂಕಿತಾ,ನೇಹಾಕುಮಾರಿ,ಕುಂದನ್ ಸಹಾನಿ, ವಿನಯ್,ವೀರೇಂದ್ರ, ಅಜೀಜ್,ಲೋಕೇಶ್,ರವಿಕುಮಾರ್,ರಾಜೇಶ್,ಗುರುನೀತ್ ಸಿಂಗ್ ಜೀತೆಂದ್ರ ಕುಮಾರ್ ಹಾಗೂ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here