ತಾಲೂಕಿನಲ್ಲಿ ಒಂದು ಮಲ್ಟಿ ಸ್ಪೆಸಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದು ನನ್ನ ಕನಸಾಗಿದೆ; ಇ.ತುಕಾರಾಂ

0
559

ಸಂಡೂರು:20 :ಏ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾದ, 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ತುಕರಾಮ್ ಅವರು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಅನುದಾನವಾಗಲಿ , ಕಾರ್ಯ ಯೋಜನೆಯಾಗಲಿ ಅದಕ್ಕೆ ಹೆಚ್ಚಿನ ಮಹತ್ವ ನೀಡುವುದೇ ನಮ್ಮ ಗುರಿ, ಜನರ ಅರೋಗ್ಯ ಕಾಪಾಡುವುದು,ಕಾಯಿಲೆಗಳು ಬಂದಾಗ ಚಿಕಿತ್ಸೆ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಿದೆ, ಇಂತಹ ಮೇಳಗಳಲ್ಲಿ ತಜ್ಞರನ್ನು ತಾಲೂಕು ಕೇಂದ್ರಕ್ಕೆ ಕರೆತಂದು ಜನರ ಅರೋಗ್ಯ ತಪಾಸಣೆ ಮಾಡಿಸುವುದು ಇಲಾಖೆಯ ಉತ್ತಮ ಕಾರ್ಯವಾಗಿದೆ, ಜನರಿಗೆ ಇದು ಸಹಕಾರಿಯಾಗಿದೆ, ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಹೆಲ್ತ್ ಕಾರ್ಡ್ ಕೊಡಲು ವ್ಯವಸ್ಥೆ ಮಾಡಿರುವುದು ಸಹಕಾರಿಯಾಗಲಿದೆ,

ತಾಲೂಕಿನಲ್ಲಿ ಒಂದು ಮಲ್ಟಿ ಸ್ಪೆಸಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದು ನನ್ನ ಹಲವು ವರ್ಷಗಳ ಕನಸಾಗಿದೆ, ರೋಗಿಗಳ ಜಿಲ್ಲಾ ಮಟ್ಟಕ್ಕೆ ಹೋಗಿ ಕಷ್ಟ ಪಡುವುದು ಕಡಿಮೆಯಾಗುತ್ತದೆ, ಇದರಿಂದ ಸಾರ್ವಜನಿಕರ ಅರೋಗ್ಯ ಸುಧಾರಣೆಗೆ ಅವಕಾಶ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದರು,ಅಲ್ಲದೇ ಯುವಜನರು ನಕಲಿ ಮದ್ಯಪಾನ ಸೇವಿಸುತ್ತಿರುವುದು ಕೇಳಿ ಬಂದಿದೆ, ಇದನ್ನು ತಡೆಗಟ್ಟುವ ಕಾರ್ಯ ತಾಲೂಕು ಅಡಳಿತ ಮಾಡಲಿ, ಯುವಕರಿಗೆ ಮದ್ಯಪಾನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಿದರು, ಯುವಕರು ತಮ್ಮ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಧೂಮಪಾನ, ಮದ್ಯಪಾನ ಮಾಡುವವರ ಸ್ಟೈಲ್ ಗಳನ್ನು ಅನುಕರಣೆ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು, ದಿನಚರಿ ಬರೆಯುವ ತಮ್ಮ ಬಾಲ್ಯದ ನೆನಪುಗಳನ್ನು ಶಾಸಕರು ಹಂಚಿಕೊಂಡರು,

ಈ ಸಂದರ್ಭದಲ್ಲಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಅವರು ಮಾತನಾಡಿ ಇಂತಹ ಮೇಳಗಳಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಸೌಲಭ್ಯಗಳನ್ನು ಪಡೆದು ಕೊಳ್ಳಬೇಕು, ಈ ತಿಂಗಳು 18 ರಿಂದ 30 ವರೆಗೆ ಜನರಿಗೆ ಅರೋಗ್ಯದ ಬಗ್ಗೆ ಜಾಗೃತಿ ಇಲಾಖೆಯ ಸೌಲಭ್ಯಗಳ ಮಾಹಿತಿ ಒದಗಿಸುತ್ತಾ ಪ್ರತಿ ತಾಲೂಕಿನಲ್ಲೂ ಆರೋಗ್ಯ ಮೇಳಗಳನ್ನು ಆಯೋಜಿಸಲಾಗುವುದು, ಆಯುಷ್ ಸೇವೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು,

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಶ್ರೀಮತಿ ಅನಿತಾ ಬಿ ವಸಂತಕುಮಾರ್ ಅವರು ಆರೋಗ್ಯ ಮೇಳ ಯಶಸ್ವಿಯಾಗಲಿ ಎಂದು ಶುಭ ಕೋರಿದರು, ಮೇಳದಲ್ಲಿ ಯೋಗ ಶಿಬಿರ, ಪೌಷ್ಟಿಕಾಹಾರ ಶಿಬಿರ, ಆರೋಗ್ಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು,

ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ನಡೆಸಿಕೊಟ್ಟರು, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಮಶೆಟ್ಟಿ ಅವರು ಸ್ವಾಗತ ಕೋರಿದರು,

ತಾಲೂಕು ಅರೋಗ್ಯಾಧಿಕಾರಿ ಕುಶಾಲ್ ರಾಜ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲರಿಗೂ ಮತ್ತು ಅರೋಗ್ಯ ಮೇಳ ನಡೆಸುವ ತಜ್ಞ ವೈದ್ಯರು ಮತ್ತು ಜಿಲ್ಲಾ ಕೇಂದ್ರದ ಹಾಗೂ ತಾಲೂಕಿನ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಗೂ ಮೇಳದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೂ ವಂದನೆಗಳನ್ನು ಸಲ್ಲಿಸಿದರು.

ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಒಟ್ಟು 539 ಜನರು ಆರೋಗ್ಯ ತಪಾಸಣೆ, ಡಿಜಿಟಲ್ ಹೆಲ್ತ್ ಕಾರ್ಡ್, ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ನೊಂದಣಿ ಮಾಡಿಕೊಂಡಿದ್ದು, ಸ್ತ್ರೀ ರೋಗ ತಜ್ಞರಲ್ಲಿ 18 ಮಹಿಳೆಯರು, 22 ಗರ್ಭಿಣಿಯರು, ಮಕ್ಕಳ ತಜ್ಞರಲ್ಲಿ 36 ಮಕ್ಕಳು, ಜನರಲ್ ಮೆಡಿಸಿನ್ ನಲ್ಲಿ 26, ಎಲುಬು ಕೀಲು ತಜ್ಞರಲ್ಲಿ 93, ದಂತ ತಜ್ಞರಲ್ಲಿ 33, ಅಸಾಂಕ್ರಮಿಕ ಕಾಯಿಲೆಗಳಲ್ಲಿ 142 ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ರೋಗ ಪರೀಕ್ಷೆಗೆ ಒಳಪಟ್ಟಿದ್ದು, ಚರ್ಮ ರೋಗ ತಜ್ಞರಲ್ಲಿ 40 ಜನರು, ನೇತ್ರ ತಜ್ಞರಲ್ಲಿ 127 ಜನರು ಕಣ್ಣಿನ ತಪಾಸಣೆ ಮಾಡಿಸಿ ಕೊಂಡಿದ್ದಾರೆ ಮತ್ತು ವಿವಿಧ ರೋಗಗಳ ಪತ್ತೆಗಾಗಿ 83 ಜನರ ರಕ್ತ ಪರೀಕ್ಷೆಗೆ ಒಳಪಡಿಸಲಾಯಿತು, ಹಾಗೂ ಆರೋಗ್ಯ ಮೇಳದಲ್ಲಿ ಹಾಜರಿದ್ದ ಸಿಬ್ಬಂದಿ 2 ಮತ್ತು ಯುವಕರು 5 ಹಾಗೂ ಸ್ವಾಮಿ ವಿವೇಕಾನಂದ ಐ.ಟಿ.ಐ ಕಾಲೇಜಿನ 14 ವಿದ್ಯಾರ್ಥಿಗಳು ಸೇರಿ 21 ಯುನಿಟ್ ರಕ್ತದಾನ ಮಾಡಿದರು, 22 ಜನ ಹೆಚ್.ಐ.ವಿ ಟೆಸ್ಟ್ ಮಾಡಿಸಿ ಕೊಂಡಿದ್ದು, ರಕ್ತದ ಗುಂಪಿನ ಪತ್ತೆಗಾಗಿ 34 ಜನರು ಪರೀಕ್ಷೆ ಮಾಡಿಸಿಕೊಂಡರು, ಮೇಳದಲ್ಲಿ 172 ಜನರು ಹೆಲ್ತ್ ಕಾರ್ಡ್ ಮತ್ತು 78 ಆಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಕಾರ್ಡಗಳನ್ನು ಪಡೆದರು,

ಈ ಆರೋಗ್ಯ ಮೇಳದಲ್ಲಿ ಮಾನ್ಯ ಶಾಸಕರಾದ ಶ್ರೀ ಇ. ತುಕಾರಾಂ, , ಶ್ರೀಮತಿ ಅನಿತಾ ವಸಂತಕುಮಾರ್, ಅಧ್ಯಕ್ಷರು, ಸಂಡೂರು ಪುರಸಭೆ, ವೀರೇಶ ಸಿಂದೆ, ಉಪಾಧ್ಯಕ್ಷರು, ತಹಶಿಲ್ದಾರರಾದ ಗುರು ಬಸವರಾಜ್, ಬಿ.ಕೆ.ಜಿ ಮುಖ್ಯಸ್ಥರಾದ ನಾಗನಗೌಡ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ದಾರುಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಜನಾರ್ದನ,ಅರ್.ಸಿ.ಹೆಚ್.ಒ ಡಾ.ಅನಿಲ್ ಕುಮಾರ್, ಜಿಲ್ಲೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮರಿಯಂಬಿ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಇಂದ್ರಾಣಿ, ಡಾ. ವೀರೇಂದ್ರ ಕುಮಾರ್, ಆರೋಗ್ಯಾಧಿಕಾರಿ ಕುಶಾಲ್ ರಾಜ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಮ್ ಶೆಟ್ಟಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ತಾಲೂಕಿನ ವೈದ್ಯರುಗಳು, ಬಳ್ಳಾರಿ ವಿಮ್ಸ್ ಮತ್ತು ಜಿಲ್ಲಾ ಆಸ್ಪತ್ರೆಯಿಂದ ಹೃದಯ ತಜ್ಞರು, ಕ್ಯಾನ್ಸರ್ ತಜ್ಞರು, ಜನರಲ್ ಮೆಡಿಸಿನ್ ತಜ್ಞರು, ಶಸ್ತ್ರಚಿಕಿತ್ಸಕರು, ನೇತ್ರ ತಜ್ಞರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಮಾನಸಿಕ ರೋಗ ತಜ್ಞರು, ಕಿವಿ ಮೂಗು, ಗಂಟಲು ತಜ್ಞರು, ಚರ್ಮರೋಗ ತಜ್ಞರು, ದಂತ ತಜ್ಞರು, ಆಯುಷ್ ವೈದ್ಯರು, ಸಿಡಿಪಿಓ ಪ್ರೇಮ ಮೂರ್ತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು

LEAVE A REPLY

Please enter your comment!
Please enter your name here