ಘೋರ್ಪಡೆ ನಗರದಲ್ಲಿ “ಸಾರ್ವತ್ರಿಕ ಆರೋಗ್ಯ ಸೇವಾ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮ,

0
141

ಸಂಡೂರು: ಡಿ: 12: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಘೋರ್ಪಡೆ ನಗರದಲ್ಲಿ ಸಾರ್ವತ್ರಿಕ ಆರೋಗ್ಯ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಎಲ್ಲಾ ಸಾರ್ವಜನಿಕರಿಗೆ ಯಾವುದೇ ಖರ್ಚಿಲ್ಲದೇ ಸಮಗ್ರ ಆರೋಗ್ಯ ಸೇವೆಗಳನ್ನು ಕೈಗೆಟುಕುವಂತೆ ಮಾಡುವುದೇ “ಸಾರ್ವತ್ರಿಕ ಆರೋಗ್ಯ ಸೇವೆಯ” ಉದ್ದೇಶವಾಗಿದೆ,ಎನ್.ಹೆಚ್.ಎಮ್ ಅಡಿಯಲ್ಲಿ ರೋಗಗಳನ್ನು ನಿಯಂತ್ರಣ ಮಾಡುವುದು, ಹಳ್ಳಿ ಅಥವಾ ಪಟ್ಟಣಗಳಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಗುಣಾತ್ಮಕ ಸೇವೆಗಳನ್ನು ಸಮೀಪದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೊರೆಯ ಬೇಕು, ಹೆಚ್ಚುವರಿ ಚಿಕಿತ್ಸೆಯನ್ನು ತಾಲೂಕು‌ ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯವಂತೆ ಮಾಡುವುದು ಹಾಗೂ
ಜನರ ಆರೋಗ್ಯ ಸುಧಾರಿಸಿ, ಜೀವಿತ ಅವಧಿಯ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ, ಆಯುಷ್ಮಾನ್ ಯೋಜನೆಯ ಐದು ಅಥವಾ ಒಂದುವರೆ ಲಕ್ಷ ವರೆಗಿನ ಸೇವೆಗಳು, ಜೆ.ಎಸ್.ವೈ, ಜೆ.ಎಸ್.ಎಸ್.ಕೆ, ಆರ್.ಬಿ.ಎಸ್.ಕೆ ಮತ್ತು ಆರ್.ಕೆ.ಎಸ್.ಕೆ, ಹಾಗೂ ಇ-ಸಂಜೀವಿನಿ,ಟೆಲಿಮನಸ್ ಆರೋಗ್ಯ ಸಹಾಯವಾಣಿ ಹೀಗೆ ಹಲವಾರು ಯೋಜನೆಯ ಸದ್ಬಳಕೆಮಾಡಿಕೊಳ್ಳ ಬೇಕು,”ಎಲ್ಲರಿಗೂ ಆರೋಗ್ಯ-ಕ್ರಿಯೆಗಾಗಿ ಸಮಯ” ಎಂಬ ಘೋಷವಾಖ್ಯದಂತೆ ಉಪಕ್ರಮಗೊಳಿಸಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಸಮಾಲೋಚಕ ಪ್ರಶಾಂತ್ ಕುಮಾರ್,ಆಶಾ ಕಾರ್ಯಕರ್ತೆ ಪದ್ಮಾ,ಶ್ರೀ ದೇವಿ,ತೇಜಮ್ಮ,ಹುಲಿಗೆಮ್ಮ, ಮಂಜುಳಾ,ರೇಖಾ,ಸಾರ್ವಜನಿಕರಾದ ನಾಗರತ್ನ,ಹೊನ್ನೂರಮ್ಮ,ನೇತ್ರಾ,ಲಕ್ಷ್ಮಿಬಾಯಿ,ರತ್ನಮ್ಮ, ರಭಿತಾದೇವಿ,ರೂಪಾ, ಕವಿತಾದೇವಿ,ರೇಷ್ಮಾ,ರಿಂಕುದೇವಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here