ಎಸ್ ಎಸ್ ಎಲ್ ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಬಿಇಓ ಕ್ರಮ

0
71

ಸಂಡೂರು: ತಾಲೂಕಿನಲ್ಲಿ ನಿರ್ಭಿತ ಸುಸಜ್ಜಿತವಾಗಿ ನಡೆಸಲು ಮತ್ತು ಅಕ್ರಮ ಹಾಗೂ ಸಾಮೂಹಿಕವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನು ತಡೆಯಲು ಸರ್ವ ಸಿದ್ಧತೆ ಮಾಡಿಕೊಂಡಿದ್ದು ಸಂಡೂರು ತಾಲೂಕಿನಲ್ಲಿ 3942
ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು,
ಕೋವಿಡ್ ಕಾರಣದಿಂದ ಮಕ್ಕಳಿಗೆ 3 ಘಂಟೆಗಳ ಪರೀಕ್ಷೆ ಬರೆಯುವ ತರಬೇತಿ ಇರಲಿಲ್ಲ, ಹೀಗಾಗಿ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದ್ದಲ್ಲದೆ, ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ನೀಡಿ, ಭಯಮುಕ್ತ ಪರೀಕ್ಷೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ.

ಈ ಬಾರಿಯಂತೂ ಎಲ್ಲ 57 ಪ್ರೌಢಶಾಲೆಗಳಲ್ಲಿ ಅತ್ಯಂತ ಕಾಳಜಿ ಹಾಗೂ ತರಬೇತಿ ನೀಡಿ ಮಕ್ಕಳಿಗೆ ಅಭ್ಯಾಸ ಮಾಡಿಸಲಾಗಿದೆ. ಕೊರೊನಾ ಭೀತಿಯು ಇಲ್ಲದ ಕಾರಣ ಮಕ್ಕಳು ಕೂಡ ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೆ ಬರೆಯಲು ಸಿದ್ಧರಾಗಿದ್ದಾರೆ ಎಂದರು.

ಸಂಡೂರು ತಾಲೂಕಿನಲ್ಲಿ 08 ಪರೀಕ್ಷಾ ಕೇಂದ್ರಗಳು, ಪ್ರೌಢಶಾಲೆಗಳು ಸರಕಾರಿ-20, ಸಮಾಜ ಕಲ್ಯಾಣ ಇಲಾಖೆಯ 07 ಶಾಲೆಗಳು, ಅನುದಾನಿತ-10 ಅನುದಾನ ರಹಿತ-20, ಒಟ್ಟು 57 ಪ್ರೌಢಶಾಲೆಗಳಿವೆ ಇದರಲ್ಲಿ ಗಂಡು-2003 ಮಕ್ಕಳು,ಹೆಣ್ಣು-1939 ಮಕ್ಕಳು ಸೇರಿ ಒಟ್ಟು 3942 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಸಂಡೂರು ಪಟ್ಟಣದಲ್ಲಿ 03, ಸಂಡೂರು ಎಪಿಎಂಸಿ-01,ಶ್ರೀ ಛತ್ರಪತಿ ವಿದ್ಯಾಮಂದಿರ -01,ಎಸ್ ಎಸ್ ಬಾಲಕಿಯರ ಪ್ರೌಢ ಶಾಲೆ -01, ಹಾಗೂ ಸ.ಹಿ. ಪ್ರೌ, ಶಾಲೆ ವಡ್ಡು -01,ಜಿಂದಾಲ್ ಆದರ್ಶ ವಿದ್ಯಾಲಯ -01, MDRS ಮೆಟ್ರಿಕಿ -01, ಚೋರುನೂರು MDRS ಮತ್ತು ಸಹಿಪ್ರೌಶಾ -02, ಒಟ್ಟು= 08
ಪರೀಕ್ಷೆ ಕೇಂದ್ರಗಳಿವೆ ಹಾಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯಾದಂತಹ ಅಕ್ರಮ ಹಾಗೂ ಸಾಮೂಹಿಕ ನಕಲು ಮಾಡುವುದನ್ನು ತಡೆಯನ್ನು ತಡೆಯಲು ಸಂಬಂಧಪಟ್ಟ ಪಟ್ಟ ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಆದೇಶವನ್ನು ನೀಡಿ ನಿರ್ದೇಶಿಸಿದ್ದೇನೆ ಎಂದು ಸಂಡೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಅರ್,ಅಕ್ಕಿ ತಿಳಿಸಿದರು. ಈ ಸಂಧರ್ಭದಲ್ಲಿ ನೋಡೆಲ್ ಅಧಿಕಾರಿ ಬಸವರಾಜ್. ಸಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here